ಬಂಗಾಳದಲ್ಲಿಂದು ಕಡೆಯ ಹಂತದ ಚುನಾವಣೆ: 35 ಕ್ಷೇತ್ರದಲ್ಲಿ ಮತದಾನ!

By Kannadaprabha NewsFirst Published Apr 29, 2021, 8:35 AM IST
Highlights

 34 ಕ್ಷೇತ್ರಗಳಲ್ಲಿ 283 ಅಭ್ಯರ್ಥಿಗಳು ಕಣಕ್ಕೆ| ಬಂಗಾಳದಲ್ಲಿಂದು ಕಡೆಯ ಹಂತದ ಚುನಾವಣೆ: 35 ಕ್ಷೇತ್ರದಲ್ಲಿ ಮತದಾನ!

ಕೋಲ್ಕತಾ(ಏ.29): ಪಶ್ಚಿಮ ಬಂಗಾಳ ವಿಧಾನಸಭೆಗೆ 8 ಮತ್ತು ಕಡೆಯ ಹಂತದ ಚುನಾವಣಾ ಪ್ರಕ್ರಿಯೆಗಳು ಗುರುವಾರ ನಡೆಯಲಿವೆ. ಒಟ್ಟು 34 ಕ್ಷೇತ್ರಗಳಲ್ಲಿ 283 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, 81 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರೊಂದಿಗೆ ಪಂಚರಾಜ್ಯ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

ಮೊದಲ 6 ಹಂತದ ಚುನಾವಣೆ ವೇಳೆ ಭಾರೀ ಹಿಂಸಾಚಾರ ಸಂಭವಿಸಿದ್ದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಭಾರೀ ಬಿಗಿಬಂದೋಬಸ್‌್ತ ಮಾಡಿದ್ದು, ಒಟ್ಟು 641 ತುಕಡಿಗಳಷ್ಟುಭದ್ರತಾ ಸಿಬ್ಬಂದಿ ನಿಯೋಜಿಸಿದೆ. ಮುರ್ಷಿದಾಬಾದ್‌ ಮತ್ತು ಬೀರ್‌ಭುಮ್‌ ವ್ಯಾಪ್ತಿಯಲ್ಲಿ ತಲಾ 11, ಕೋಲ್ಕತಾದಲ್ಲಿ 7 ಮತ್ತು ಮಾಲ್ಡಾದಲ್ಲಿ 6 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, 11860 ಮತಗಟ್ಟೆಸ್ಥಾಪಿಸಲಾಗಿದೆ.

ಪಶ್ಚಿಮಬಂಗಾಳದ ಜೊತೆಗೆ ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆದಿತ್ತು.

click me!