ಪ.ಬಂಗಾಳದಲ್ಲಿ BJP-TMC ಜಿದ್ದಾಜಿದ್ದಿನ ಫೈಟ್..! ಕಡಿಮೆ ಅಂತದಲ್ಲಿ ದೀದಿ ಪಕ್ಷ ಮುನ್ನಡೆ

By Suvarna NewsFirst Published May 2, 2021, 10:32 AM IST
Highlights

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ | ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ | ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ | ನಂದಿಗ್ರಾಮ್ನಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆ

ಕೊಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿನ ಫೈಟ್ ಕಂಡುಬಂದಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಮತ್ತು ಟಿಎಂಸಿ ನಡುವೆ ನಿಕಟ ಸ್ಪರ್ಧೆಯನ್ನು ಊಹಿಸಿತ್ತು.

 

ಮತದಾರರಲ್ಲಿ ಅರ್ಧದಷ್ಟು ಮಮತಾ ಗೆಲುವು ಮುನ್ಸೂಚನೆ ನೀಡಿದರೆ, ಅರ್ಧದಷ್ಟು ಬಿಜೆಪಿಯೊಂದಿಗೆ ಹೋಗುತ್ತಿದೆ. ಒಟ್ಟಾರೆಯಾಗಿ, ಫೈಟ್ ತುಂಬಾ ಹತ್ತಿರದಲ್ಲಿದೆ. ಹಾಗಾಗಿಯೇ ಗೆಲುವನ್ನು ಊಹಿಸಲು ಕಷ್ಟವಾಗುವಂತಿದೆ ಎರಡೂ ಪಕ್ಷದ ನಡೆ.

ಕಣದಲ್ಲಿದ್ದಾರೆ ಮಾಜಿ ಮುಖ್ಯ ಸರ್ಕಾರಿ ಅಧಿಕಾರಿಗಳು..! ಅಣ್ಣಾಮಲೈಗೆ ಮುನ್ನಡೆ

ಸುವೇಂಡು ಅಧಿಕಾರಿ ಈಗ ನಂದಿಗ್ರಾಮ್‌ನಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗಿಂತ ಮುಂದಿದ್ದಾರೆ. ಟಿಎಂಸಿ 158 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಬಿಜೆಪಿಗೆ 115 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ.

ಪಂಚರಾಜ್ಯ ಚುನಾವಣಾ ಫಲಿತಾಂಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಟಿಎಂಸಿ ನಿಧಾನವಾಗಿ ಬಿಜೆಪಿಯನ್ನು ಹಿಂದಿಕ್ಕಿ ಮುಂದೆ ಹೋಗುವಲ್ಲಿದೆ. ಆದರೆ ಈ ಎರಡೂ ಪಕ್ಷಗಳು ಸಮಾನಾಂತರವಾದ ವೇಗದಲ್ಲಿ ಮುಂದೆ ಹೋಗುತ್ತಿರುವುದು ವಿಶೇಷ.

click me!