ಟ್ರೆಡ್‌ಮಿಲ್‌ನಲ್ಲಿ ನಾಯಿಮರಿಯೊಂದಿಗೆ ದೀದೀ ವರ್ಕೌಟ್‌: ವೀಡಿಯೋ ವೈರಲ್‌

Published : May 08, 2023, 03:25 PM ISTUpdated : May 08, 2023, 04:12 PM IST
ಟ್ರೆಡ್‌ಮಿಲ್‌ನಲ್ಲಿ ನಾಯಿಮರಿಯೊಂದಿಗೆ ದೀದೀ ವರ್ಕೌಟ್‌: ವೀಡಿಯೋ ವೈರಲ್‌

ಸಾರಾಂಶ

ರಾಜಕೀಯ ಚಟುವಟಿಕೆಯ ಕಾರಣಗಳಿಂದಾಗಿ ಸದಾ ಕಾಲ ಬ್ಯುಸಿಯಾಗಿರುವ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ಕೋಲ್ಕತ್ತಾ: ರಾಜಕೀಯ ಚಟುವಟಿಕೆಯ ಕಾರಣಗಳಿಂದಾಗಿ ಸದಾ ಕಾಲ ಬ್ಯುಸಿಯಾಗಿರುವ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನಾಯಿಮರಿಯನ್ನು ಹಿಡಿದುಕೊಂಡು ಮಮತಾ ಬ್ಯಾನರ್ಜಿ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ಕೆಲ ದಿನಗಳಲ್ಲಿ ನೀವು ಸ್ವಲ್ಪ ಹೆಚ್ಚು ಉತ್ತೇಜನ ಪಡೆಯಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದು ನಾಯಿ ಮರಿಯ ಇಮೋಜಿಯನ್ನು ಹಾಕಿದ್ದಾರೆ, ವೀಡಿಯೋದಲ್ಲಿ ನಾಯಿಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿರುವುದು ಕಾಣಿಸುತ್ತಿದೆ. ಆದರೆ ಈ ವಿಡಿಯೋಗೆ ಕಾಮೆಂಟ್‌ಗಳನ್ನು ಆಫ್ ಮಾಡಲಾಗಿದೆ. ಕಂದು ಬಣ್ಣದ ಪುಟ್ಟ ನಾಯಿ ಮರಿ ದೀದೀ ಮಮತಾ ಕೈಯಲ್ಲಿದೆ. ಮಮತಾ ಬ್ಯಾನರ್ಜಿಯವರು ಯಾವಾಗಲೂ ವ್ಯಾಯಾಮ ಹಾಗೂ ದೈಹಿಕ ಕಸರತ್ತಿನ ಬಗ್ಗೆ ಸದಾ ಮಾತನಾಡುತ್ತಿರುತ್ತಾರೆ ಹಾಗೂ ಸಲಹೆಗಳನ್ನು ನೀಡುತ್ತಿರುತ್ತಾರೆ. 2019ರಲ್ಲಿ ಅವರು ಡಾರ್ಜಿಲಿಂಗ್‌ಗೆ 10 ಕಿಲೋ ಮೀಟರ್‌ಗಳಷ್ಟು ದೂರ ಜಾಗಿಂಗ್ ಮಾಡಿ ವ್ಯಾಯಾಮಯ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದರು. 

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ, ರಾಮನಮವಿ ಹಿಂಸಾಚಾರ NIA ತನಿಖೆಗೆ ಆದೇಸಿಸಿದ ಹೈಕೋರ್ಟ್!

68 ವರ್ಷದ ಮಮತಾ ಬ್ಯಾನರ್ಜಿ ರಾಜಕೀಯದಲ್ಲೇ ಸುಮಾರು 5 ದಶಕಗಳನ್ನು ಕಳೆದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಾಲಿನ ಬದ್ಧವೈರಿ ಎನಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly polls) ಫಲಿತಾಂಶದೊಂದಿಗೆ  ಬಿಜೆಪಿಯ ಅವಸಾನ ಆರಂಭವಾದರೆ ತನಗೆ ಖುಷಿಯಾಗುವುದಾಗಿ ಅವರು ಹೇಳಿದ್ದರು. ಕರ್ನಾಟಕದಲ್ಲಿ 224  ವಿಧಾನಸಭಾ ಕ್ಷೇತ್ರಗಳಿಗೆ ಮೇ.10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. 

ಶ್ರೇಷ್ಠತೆಗಾಗಿ ಭಾರತ ಬದಲಾವಣೆಗೆ ಅರ್ಹವಾಗಿದೆ. ಇಲ್ಲಿ ಜನರ ಶಕ್ತಿಗಿಂತ ದೊಡ್ಡ ಶಕ್ತಿ ಇಲ್ಲ, ಸುಳ್ಳು ಭರವಸೆ ನೀಡುವ ರಾಜಕೀಯದ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ.  ಎಲ್ಲಾ ವಿರೋಧ ಪಕ್ಷಗಳು ಜೊತೆಯಾದರೆ ಬಿಜೆಪಿ ಈ ಯುದ್ಧದಲ್ಲಿ ಸೋಲುತ್ತದೆ  ಮತ್ತು ಒಡೆದು ಆಳುವ ಶಕ್ತಿಯ ವಿರುದ್ಧದ ಯುದ್ಧದಲ್ಲಿ ಭಾರತ ಗೆಲ್ಲುತ್ತದೆ ಎಂದು ಮಮತಾ ಬ್ಯಾನರ್ಜಿ (Mamata Benerjee) ಇತ್ತೀಚೆಗೆ ಟ್ವಿಟ್ ಮಾಡಿದ್ದರು. 

ಮೇ ಮೊದಲ ವಾರ ಜೆಡಿಎಸ್‌ ಪರ ದೀದಿ, ಕೆಸಿಆರ್‌ ಪ್ರಚಾರ: ಕೇರಳ ಸಿಎಂ ಕರೆಸುವ ಬಗ್ಗೆಯೂ ಚಿಂತನೆ

ಅಲ್ಲದೇ ಇತ್ತೀಚೆಗೆ ಅವರು ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳು (wrestlers) ನಡೆಸುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.   ನಾವೆಲ್ಲರೂ ಕುಸ್ತಿಪಟುಗಳ ಜೊತೆಗೆ ನಿಲ್ಲಬೇಕು. ನಮ್ಮ ಕ್ರೀಡಾಪಟುಗಳು ನಮ್ಮ ದೇಶದ ಹೆಮ್ಮೆ, ಅವರು ನಮ್ಮ ದೇಶದ ಚಾಂಪಿಯನ್‌ಗಳು (champions), ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನ್ಯಾಯ ಮೇಲುಗೈ ಸಾಧಿಸಬೇಕು, ಸತ್ಯಕ್ಕೆ ಜಯ ಸಿಗಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್