ಮಾರುತಿ ವ್ಯಾನ್‌ನೊಳಗೆ ನುಗ್ಗಿ ಬೆಚ್ಚಗೆ ಕುಳಿತ ನಾಗರ ಹಾವೊಂದನ್ನು ಉರಗ ತಜ್ಞರು ರಕ್ಷಿಸುತ್ತಿರುವ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಆಗುಂಬೆ: ಮಾರುತಿ ವ್ಯಾನ್‌ನೊಳಗೆ ನುಗ್ಗಿ ಬೆಚ್ಚಗೆ ಕುಳಿತ ನಾಗರ ಹಾವೊಂದನ್ನು ಉರಗ ತಜ್ಞರು ರಕ್ಷಿಸುತ್ತಿರುವ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯಸೇವೆಯ ಅಧಿಕಾರಿ ಸುಶಾಂತ್ ನಂದಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಇದು ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶ ಆಗುಂಬೆಯಲ್ಲಿ ಸೆರೆಯಾದ ದೃಶ್ಯಾವಳಿಯಾಗಿದ್ದು, ಉರಗ ರಕ್ಷಕ ಎಸ್ ಎಸ್ ಜಯಕುಮಾರ್ ಅವರು ಕಾರೊಳಗೆ ನುಗ್ಗಿ ಬೆಚ್ಚನೆ ಕುಳಿತಿದ್ದ 15 ಅಡಿ ಉದ್ದ ಬೃಹತ್ ಗಾತ್ರದ ನಾಗರ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಕಳೆದ ವರ್ಷ ಶಿವಮೊಗ್ಗದ (Shivamogga) ಆಗುಂಬೆ (Agumbe) ನಿವಾಸಿಯೊಬ್ಬರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಉರಗತಜ್ಞ ಎಸ್ ಎಸ್ ಜಯಕುಮಾರ್ ಅವರನ್ನು ಕರೆಸಿ ಈ ಹಾವನ್ನು ಹಿಡಿಸಿದ್ದಾರೆ. ವಿಶ್ವದಲ್ಲೇ ಅತಿ ಉದ್ದದ ವಿಷಪೂರಿತ ಹಾವುಗಳಿರುವ (Poisions snake) ಪ್ರದೇಶ ಶಿವಮೊಗ್ಗದ ಆಗುಂಬೆ ಕಾಡಾಗಿದೆ. ಕರ್ನಾಟಕವು ಭಾರತದ ಕೆಲವು ದೊಡ್ಡ ದೊಡ್ಡ ಜಾತಿಯ ಹಾವುಗಳಿಗೆ ನೆಲೆಯಾಗಿದ್ದು, ಪಶ್ಚಿಮ ಘಟ್ಟಗಳು ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು ಕಿಂಗ್ ಕೋಬ್ರಾಗಳಿಗೆ ವಿಶೇಷವಾಗಿ ಶ್ರೀಮಂತ ಆವಾಸ ಸ್ಥಾನವಾಗಿದೆ. ಇಲ್ಲಿ ಈ ಹಾವುಗಳು 18 ಅಡಿ ಉದ್ದದವರೆಗೆ ಬೆಳೆಯುತ್ತದೆ. ಇಲ್ಲಿ ಕಾಣಸಿಗುವ ಹಾವುಗಳನ್ನು ವೈಜ್ಞಾನಿಕವಾಗಿ ಓಫಿಯೋಫಾಗಸ್ ಹನ್ನಾ ಎಂದು ಕರೆಯಲಾಗುತ್ತದೆ. ಒಫಿಯೋಫಾಗಸ್ ಎಂದರೆ 'ಹಾವು ಭಕ್ಷಕ' ಎಂದರ್ಥ.
22 ಹಾವು, ಹಲ್ಲಿಗಳನ್ನ ತುಂಬಿಕೊಂಡು ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದ ಮಹಿಳೆ ಅಂದರ್
ಹಾಗೆಯೇ ಇಲ್ಲಿ ದೊಡ್ಡ ಗಾತ್ರದ ಹಾವು ಕಾರಿನ ಬಂಪರ್ (Car Bumper) ಏರಿ ಮಲಗಿತ್ತು. ಮಾರುತಿ ಓಮ್ನಿ ವಾಹನದ ಕೆಳಗೆ ತಣ್ಣನೆ ಮಲಗಿದ್ದ ಈ ಹಾವನ್ನು ಉಪಾಯವಾಗಿ ಹೊರತೆಗೆದ ಶಿವಕುಮಾರ್ ಅದನ್ನು ಅಷ್ಟೇ ನಾಜೂಕಿನಿಂದ ಚೀಲಕ್ಕೆ ತುಂಬಿಸಿ ಕಾಡಿಗ ಬಿಟ್ಟಿದ್ದಾರೆ. ಹಾವನ್ನು ಕಾರಿನ ಬಂಪರ್‌ನಿಂದ ರಕ್ಷಿಸಿ ಚೀಲಕ್ಕೆ ತುಂಬಿ ಕಾಡಿಗೆ ಬಿಡುವವರೆಗಿನ ದೃಶ್ಯಾವಳಿಗಳು ವಿಡಿಯೋದಲ್ಲಿದ್ದು, ವೈರಲ್ ಆಗಿದೆ.
ಅಲ್ಲದೇ ಹಾವು ಕಂಡು ಭಯಭೀತಗೊಂಡಿದ್ದ ಜನರಿಗೆ ಅವರು ಧೈರ್ಯವಾಗಿರುವಂತೆ ಮನವಿ ಮಾಡಿದ್ದಾರೆ. ಇನ್ನು ಜಯಕುಮಾರ್ ಎಸ್ ಎಸ್ (S S Jayakumar) ಅವರು ತಮ್ಮ ಸಮುದಾಯಗಳಲ್ಲಿ ಮಾನವ ಹಾಗೂ ಹಾವುಗಳ ಸಂಘರ್ಷವನ್ನು ಪರಿಹರಿಸಲು ಕೆಲಸ ಮಾಡುವ ಸಮರ್ಪಿತ ವನ್ಯಜೀವಿ ಸಂರಕ್ಷಣಾಕಾರರಲ್ಲಿ ಒಬ್ಬರಾಗಿದ್ದಾರೆ. ಭಾರತದ ಕೆಲವು ಉರಗತಜ್ಞರು ಅಪಾಯಕಾರಿ ಹಾವುಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರ ಎಂದು ಯುಟ್ಯೂಬ್ ಚಾನೆಲ್ ಲಿವಿಂಗ್ ಝೂವಾಲಜಿ ಹೇಳಿದ್ದು, ಜಯಕುಮಾರ್ ಅವರು ಹಾವು ಹಿಡಿಯುತ್ತಿರುವ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಮನೆಯಲ್ಲಿ ಹಾವು ಕಾಣಿಸಿಕೊಳ್ಳೋದು ಒಳ್ಳೇದೋ ಕೆಟ್ಟದ್ದೋ?
ಅಪ್‌ಲೋಡ್ ಆದ 11 ತಿಂಗಳ ನಂತರ ಮತ್ತೆ ಈ ವಿಡಿಯೋ ಮತ್ತೆ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ (Sushant nanda) 'ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಾಗರಹಾವುಗಳು ಆಹಾರ ಸರಪಳಿಯಲ್ಲಿ ಪ್ರಮುಖವಾಗಿವೆ. ಇಲ್ಲಿ ಸುಮಾರು 15 ಅಡಿ ಉದ್ದದ ಒಬ್ಬನನ್ನು ರಕ್ಷಿಸಲಾಗಿದೆ ಮತ್ತು ಕಾಡಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಅಲ್ಲದೇ ಇದನ್ನು ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೇ ಸ್ವಯಂ ಆಗಿ ಹಾವುಗಳ ರಕ್ಷಣಾ ಕಾರ್ಯ ಮಾಡದಂತೆ ಸಲಹೆ ನೀಡಲಾಗಿದೆ. ನಾಗರಹಾವುಗಳು ಪ್ರಪಂಚದಲ್ಲೇ ಅತ್ಯಂತ ವಿಷಕಾರಿ ಹಾವುಗಳನ್ನು ಹೊಂದಿದ್ದು, ಚಿಪ್ಪುಳ ಟೈಟಾನ್ ಹಾವಿನ ಕಚ್ಚುವಿಕೆಯೂ ಆನೆ ಅಥವಾ 20 ಮನುಷ್ಯರನ್ನು ಕೊಲ್ಲವಷ್ಟು ವಿಷವನ್ನು ಹೊಂದಿರುತ್ತದೆ.
King Cobra’s are vital in the food chain for maintaining balance in nature. Here is one nearly 15 feet long rescued & released in the wild.
Entire operation is by trained snake catchers. Please don’t try on your own. With onset of rains, they can be found in all odd places. pic.twitter.com/g0HwMEJwp2