ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದ ಸಿಎಂ ಮಮತಾ ಬ್ಯಾನರ್ಜಿ!

By Suvarna News  |  First Published Dec 27, 2023, 1:54 PM IST

ಭಾರತ ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿದೆ. ಜನವರಿ 22 ರಂದು ಶ್ರೀರಾಮನ ಗತವೈಭವ ಮರುಕಳಿಸಲಿದೆ. ದೇಶ ವಿದೇಶದ ಪ್ರಮುಖರು, ಗಣ್ಯರು, ಸಾಧು ಸಂತರು, ರಾಜಕೀಯ ನಾಯಕರನ್ನು ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗಿದೆ. ಆದರೆ ಆಹ್ವಾನ ಸ್ಪೀಕರಿಸಿರುವ ಮಮತಾ ಬ್ಯಾನರ್ಜಿ ಪ್ರಾಣಪ್ರತಿಷ್ಠೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
 


ಕೋಲ್ಕತಾ(ಡಿ.27) ರಾಮ ಮಂದಿರ ಉದ್ಘಾಟನೆಗೆ  ಸಜ್ಜಾಗಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆಯೊಂದಿಗೆ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ.  ಲಕ್ಷಾಂತರ ಮಂದಿ ಶ್ರೀರಾಮನ ಗತವೈಭವ ಕಣ್ತುಂಬಿಕೊಳ್ಳಲು ಆಯೋಧ್ಯೆಯತ್ತ ದಾಪುಗಾಲಿಡುತ್ತಿದ್ದಾರೆ. ಇತ್ತ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಗಣ್ಯರು ಸಾಧು ಸಂತರು, ಯೋಗಿಗಳ ಜೊತೆಗೆ ಬಹುತೇಕ ರಾಜಕೀಯ ನಾಯಕರನ್ನು ಆಹ್ವಾನಿಸಿದೆ. ಈ ಪೈಕಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರನ್ನೂ ಆಹ್ವಾನಿಸಲಾಗಿದೆ. ಆದರೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸುವ ಸಾಧ್ಯತೆಗಳಿಲ್ಲ. ರಾಮ ಮಂದಿರ ಉದ್ಘಾಟನೆ ಬಿಜೆಪಿ ಪಕ್ಷಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ತರಲಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸಂಪೂರ್ಣ ಲಾಭ ಬಿಜೆಪಿ ಪಾಲಾಗಲಿದೆ. ಹೀಗಾಗಿ ಇಂಡಿ ಒಕ್ಕೂಟದ ಪಕ್ಷಗಗಳು ರಾಮ ಮಂದಿರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಉದ್ಘಾಟನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.

Tap to resize

Latest Videos

ರಾಮಮಂದಿರ ಉದ್ಘಾಟನೆಯಿಂದ CPI(M) ದೂರ, ಅಸುರರು ದೇವಲೋಕ ಪ್ರವೇಶಿಸಲ್ಲ ಎಂದ ಜನ!

ಧಾರ್ಮಿಕ ವಿಚಾರಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ರಾಮ ಮಂದಿರ ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ ಅನ್ನೋದನ್ನು ಬಿಂಬಿಸಿ ಬಿಜೆಪಿ ಸಿಗುವ ಸಂಪೂರ್ಣ ಕ್ರಿಡಿಟ್ ಹರಿದು ಹಂಚಿ ಹೋಗುವಂತೆ ಮಾಡಲು ವಿಪಕ್ಷಗಳು ಮುಂದಾಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಕಾರಣ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿಯುವ ಸಾಧ್ಯತೆಗಳಿದೆ ಎಂದು ಮೂಲಗಳು ಹೇಳುತ್ತಿದೆ. 

ಇತ್ತ ಕಮ್ಯೂನಿಸ್ಟ್ ಪಾರ್ಟಿ ನಾಯಕರು ರಾಮ ಮಂದಿರ ಉದ್ಘಾಟನೆಗೆ ಹಾಜರಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಸಿಪಿಐ(ಎಂ) ಗೌರವ ನೀಡಲಿದೆ.  ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಹೀಗಾಗಿ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬೃಂದಾ ಕಾರಟ್ ಸ್ಪಷ್ಟನೆ ನೀಡಿದ್ದರು.

ರಾಮ ಮಂದಿರ ನಿರ್ಮಾಣವೇ ಶೋ ಆಫ್, ಹಿರಿಯ ವಕೀಲ ಸಿಬಲ್ ಹೇಳಿಕೆಗೆ ಆಕ್ರೋಶ!

ಸಿತಾರಾಂ ಯಚೂರಿ ಕೂಡ  ರಾಮ ಮಂದಿರವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಇಂಡಿಯಾ ಒಕ್ಕೂಟದ ನಾಯಕರು ಇದೇ ಕಾರಣ ನೀಡಿ ರಾಮ ಮಂದಿರ ಉದ್ಘಾಟನೆಯಿಂದ ಹಿಂದೆ ಸರಿಯುತ್ತಿದ್ದಾರೆ.

click me!