'ಕ್ರಿಕೆಟ್‌ ಟೀಮ್‌ ಜೆರ್ಸಿಯಲ್ಲಿ ಬಿಜೆಪಿ ಬಣ್ಣ ಬಳಿಯಲಾಗುತ್ತಿದೆ..' ಮಮತಾ ಬ್ಯಾನರ್ಜಿ ಆಕ್ರೋಶ!

Published : Nov 18, 2023, 12:19 PM IST
'ಕ್ರಿಕೆಟ್‌ ಟೀಮ್‌ ಜೆರ್ಸಿಯಲ್ಲಿ ಬಿಜೆಪಿ ಬಣ್ಣ ಬಳಿಯಲಾಗುತ್ತಿದೆ..' ಮಮತಾ ಬ್ಯಾನರ್ಜಿ ಆಕ್ರೋಶ!

ಸಾರಾಂಶ

ಟೀಮ್‌ ಇಂಡಿಯಾದ ಪ್ರ್ಯಾಕ್ಟೀಸ್‌ ಜೆರ್ಸಿಯಲ್ಲಿ ಮಾತ್ರವಲ್ಲದೆ, ಮೆಟ್ರೋ ನಿಲ್ದಾಣಗಳ ಪೇಟಿಂಗ್‌ನಲ್ಲಿಯೂ ಬಿಜೆಪಿ ತನ್ನ ಬಣ್ಣವಾದ ಕೇಸರಿಯನ್ನು ಬಳಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿ (ನ.18): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಕ್ರಿಕೆಟ್ ತಂಡ ಸೇರಿದಂತೆ ದೇಶಾದ್ಯಂತ ವಿವಿಧ ಸಂಸ್ಥೆಗಳನ್ನು ಕೇಸರಿಮಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ. ಟೀಮ್‌ ಇಂಡಿಯಾದ ಪ್ರ್ಯಾಕ್ಟೀಸ್‌ ಜರ್ಸಿಗಳು ಕೇಸರಿ ಬಣ್ಣವನ್ನು ಹೊಂದಿರುವ ಕುರಿತಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಸೆಂಟ್ರಲ್ ಕೋಲ್ಕತ್ತಾದ ಪೋಸ್ಟಾ ಬಜಾರ್‌ನಲ್ಲಿ ನಡೆದ ಜಗಧಾತ್ರಿ ಪೂಜೆಯನ್ನು ಉದ್ಘಾಟಿಸಿ ಮಾತನಾಡಿದ ಬ್ಯಾನರ್ಜಿ, ಕ್ರಿಕೆಟ್ ತಂಡದ ಪ್ರ್ಯಾಕ್ಟೀಸ್‌ ಜೆರ್ಸಿ ಮಾತ್ರವಲ್ಲದೆ ಮೆಟ್ರೋ ನಿಲ್ದಾಣಗಳ ಪೇಂಟಿಂಗ್‌ನಲ್ಲಿಯೂ ಬಿಜೆಪಿ ತನ್ನ ಬಣ್ಣವಾದ ಕೇಸರಿಯನ್ನು ಬಳಿಯುತ್ತಿದೆ ಎಂದು ಅವರು ಅರೋಪ ಮಾಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, 'ಅವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ನನಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ, ಅವರಲ್ಲಿಯೂ ಬಿಜೆಪಿ ಕೇಸರಿ ಬಣ್ಣವನ್ನು ತಂದಿದೆ. ಈಗ ನಮ್ಮ ಆಟಗಾರರು ಕೇಸರಿ ಬಣ್ಣದ ಜೆಸರ್ಲಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ದೇಶದ ಮೆಟ್ರೋ ಸ್ಟೇಷನ್‌ಗಳನ್ನೂ ಕೇಸರಿಮಯವನ್ನಾಗಿ ಮಾಡಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಯಾರನ್ನೂ ಸ್ಪಷ್ಟವಾಗಿ ಹೆಸರಿಸದೆ, ಬ್ಯಾನರ್ಜಿ ಅವರು ಪಕ್ಷಪಾತದ ರಾಜಕೀಯವೆಂದು ಪರಿಗಣಿಸಿರುವುದನ್ನು ಖಂಡಿಸಿದರು. ಅವರು ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಎಲ್ಲವನ್ನೂ ಕೇಸರಿ ಮಾಡಲು ಪ್ರಯತ್ನಿಸುತ್ತಿದ್ದಾರೆ, ನಾನು ಒಮ್ಮೆ ಮಾಯಾವತಿ ಅವರ ಪ್ರತಿಮೆಯನ್ನು ಮಾಡಿರುವುದನ್ನು ನಾನು ನೋಡಿದೆ, ನಂತರ ನಾನು ಅಂತಹ ಯಾವುದನ್ನೂ ಕೇಳಲಿಲ್ಲ. ಇಂಥ ನಾಟಕಗಳು ಯಾವ ಪ್ರಯೋಜನ ಕೂಡ ನೀಡೋದಿಲ್ಲ. ಯಾವುದೇ ಲಾಭ ತರೋದಿಲ್ಲ. ಅಧಿಕಾರ ಅನ್ನೋದು ಬರುತ್ತದೆ ಹೋಗುತ್ತದೆ ಎನ್ನುವುದು ಗೊತ್ತಿರಬೇಕು' ಎಂದು ಹೇಳೀದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶವು "ರಾಷ್ಟ್ರದ ಜನತಾ (ಜನರಿಗೆ) ಸೇರಿದೆಯೇ ಹೊರತು ಕೇವಲ ಒಂದು ಪಕ್ಷದ ಜನತೆಗೆ ಆ ಪಕ್ಷ ಸೇರಿಲ್ಲ' ಎಂದು ಹೇಳಿದರು. ಇನ್ನು ಬಿಜೆಪಿ ಇದನ್ನು ತೀವ್ರವಾಗಿ ಟೀಕಿಸಿದ್ದು, ಸೇಡು ತೀರಿಸಿಕೊಳ್ಳುವ ವಿಧಾನದ ರೂಪ ಎಂದು ಹೇಳಿದೆ.

ಬಿಜೆಪಿ ನಾಯಕ ರಾಹುಲ್ ಸಿನ್ಹಾ ಈ ಬಗ್ಗೆ ಮಾತನಾಡಿದ್ದು, "ಕೆಲವು ದಿನಗಳ ನಂತರ, ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣ ಏಕೆ ಇದೆ ಎಂದು ಅವರು ಪ್ರಶ್ನಿಸಬಹುದು. ಅಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಸಹ ನಾವು ಸೂಕ್ತವೆಂದು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ. ರಾಜ್ಯಕ್ಕೆ ಹಣವನ್ನು ತಡೆಹಿಡಿದಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾಹೀರಾತುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ ಆದರೆ "ರಾಜ್ಯದ ಬಾಕಿ ಹಣವನ್ನು ನಿಲ್ಲಿಸಿದೆ, ಹೀಗಾಗಿ ರಾಜ್ಯದ ಸಾವಿರಾರು (MGNREGA) ಕಾರ್ಮಿಕರು ಬೀದಿಗೆ ಬಂದಿದ್ದಾರೆ' ಎಂದು ಹೇಳಿದರು.

World Cup 2023 Final: ಬರೀ 10 ಸೆಕೆಂಡ್‌ನ ಜಾಹೀರಾತಿಗೆ ಅಬ್ಬಬ್ಬಾ ಇಷ್ಟೊಂದು ಹಣ!

ಮೊದಲ ನಾನು ಸಿಪಿಐಎಂ ವಿರುದ್ಧ ಹೋರಾಟ ಮಾಡಿದೆ. ಈಗ ನಾನು ದೆಹಲಿಯಲ್ಲಿರುವ ಶಕ್ತಿ ಕೇಂದ್ರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ. ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯ ಮುಂಬರುವ ಆವೃತ್ತಿಯ ಕುರಿತು ಮಾತನಾಡಿದ ಅವರು, 70,000 ಕ್ಕೂ ಹೆಚ್ಚು ಉದ್ಯಮಿಗಳು ದೇಶವನ್ನು ತೊರೆದಿದ್ದಾರೆ ಎಂದು ಹೇಳಿದರು. "ಈ ಉದ್ಯಮಿಗಳು ದೇಶದಲ್ಲಿ ಹೂಡಿಕೆ ಮಾಡಬಹುದಿತ್ತು ಮತ್ತು ಹಣವನ್ನು ಇಲ್ಲಿ ಬಳಸಬಹುದಿತ್ತು. ಆದರೆ ಈಗ ಅವರು ಹೊರನಡೆದಿದ್ದಾರೆ. ನಾವು (ಬಿಜೆಪಿ ನಾಯಕರಲ್ಲಿ) ಒಳ್ಳೆಯ ಬುದ್ದಿ ಮೇಲುಗೈ ಸಾಧಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದಿದ್ದಾರೆ.\

World Cup 2023 Final: ಬೆಂಗಳೂರಿನಿಂದ ಅಹಮದಾಬಾದ್‌ ಫೈಟ್‌ ಟಿಕೆಟ್‌ ರೇಟ್‌ 33 ಸಾವಿರ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ