ಕೈಯಾರೆ ಪಾನಿಪೂರಿ ಮಾಡಿ ಮಕ್ಕಳು, ಪ್ರವಾಸಿಗರಿಗೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ, Viral Video!

Published : Jul 13, 2022, 10:32 AM ISTUpdated : Jul 13, 2022, 10:41 AM IST
ಕೈಯಾರೆ ಪಾನಿಪೂರಿ ಮಾಡಿ ಮಕ್ಕಳು, ಪ್ರವಾಸಿಗರಿಗೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ, Viral Video!

ಸಾರಾಂಶ

ಪ್ರವಾಸಿ ತಾಣದಲ್ಲಿ ಬೀದಿ ಬದಿಯ ಅಂಗಡಿಯಲ್ಲಿ ಕೆಲ ಹೊತ್ತು ಕಳೆದ ಸಿಎಂ ಆಗಮಿಸಿದ ಪ್ರವಾಸಿಗರಿಗೆ ಪಾನಿಪೂರಿ ಮಾಡಿ ನೀಡಿದ ಮಮತಾ ಬ್ಯಾನರ್ಜಿ ಮಮತಾ ಬ್ಯಾನರ್ಜಿ ಪಾನಿಪೂರಿ ವಿಡಿಯೋ ವೈರಲ್

ಡಾರ್ಜಲಿಂಗ್(ಜು.13):  ಪ್ರವಾಸಿ ತಾಣಕ್ಕೆ ಬಂದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಕಾರಣ ಸ್ವತಃ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೀದಿ ಬದಿಯ ಸಣ್ಣ ಫಾಸ್ಟ್‌ಪುಡ್ ಅಂಗಡಿಯಲ್ಲಿ ತಮ್ಮ ಕೈಯಾರೆ ಪಾನಿಪೂರಿ ಮಾಡಿ ಪ್ರವಾಸಿಗರಿಗೆ ನೀಡಿದ್ದಾರೆ.  ಸಿಎಂ ಕೈಯಿಂದ ಪಾನಿಪೂರಿ ಪಡೆಯಲು ಜನರು ಮುಗಿಬಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   ಪಶ್ಚಿಮ ಬಂಗಾಳದ ಪ್ರಸಿದ್ಧ ಪ್ರವಾಸಿ ತಾಣ ಡಾರ್ಜಲಿಂಗ್‌ಗೆ ಭೇಟಿ ನೀಡಿದ ಸಿಎಂ ಮಮತಾ ಬ್ಯಾನರ್ಜಿ ಮಹಿಳಾ ಸ್ವಸಹಾಯ ಗುಂಪಿನ ಫಾಸ್ಟ್‌ಫುಡ್ ಸ್ಟಾಲ್ ಉದ್ಘಾಟಿಸಿದ್ದಾರೆ. ಬಳಿಕ ತಾವೇ ಖುದ್ದು ಪಾನಿಪೂರಿ ಮಾಡಿ ಪ್ರವಾಸಿಗರಿಗೆ, ಮಕ್ಕಳಿಗೆ ವಿತರಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಜೊತೆ ಆತ್ಮೀಯವಾಗಿ ಸಂವಾದ ನಡೆಸಿದ್ದಾರೆ.  ಇದೇ ವೇಳೆ ಹಲವು ಪ್ರವಾಸಿಗರು ಮಮತಾ ಬ್ಯಾನರ್ಜಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಹಲವು ಕಾರ್ಯಕ್ರಮಗಳ ನಿಮಿತ್ತ ಜಾರ್ಜಲಿಂಗ್ ತೆರಳಿದ ಮಮತಾ ಬ್ಯಾನರ್ಜಿ ಬೀದಿ ಬದಿ ವ್ಯಾಪರಿಗಳ ಜೊತೆ ಸಂವಾದ ನಡೆಸಿದ್ದಾರೆ.

ಇತ್ತೀಚೆಗೆ ಆಯ್ಕೆಯಾದ ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಆಡಳಿತ ಮಂಡಳಿ ಸದಸ್ಯರ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಮಮತಾ ಬ್ಯಾನರ್ಜಿ(West Bengal CM) ಡಾರ್ಜಲಿಂಗ್‌ಗೆ ತೆರಳಿದ್ದರು. ಇದೇ ವೇಳೆ ಸ್ವಸಹಾಯ ಮಹಿಳಾ ಸಂಘದ ಸ್ಟಾಲ್ ಕೂಡ ಉದ್ಘಾಟಿಸಿದ್ದಾರೆ.  ಪಶ್ಚಿಮ ಬಂಗಾಳದಲ್ಲಿ ಪಾನಿಪೂರಿಗೆ ಫುಚ್ಕಾ(Pani Puri) ಎಂದು ಕರೆಯಲಾಗುತ್ತದೆ. ಈ ಕುರಿತು ತೃಣಮೂಲಕ ಕಾಂಗ್ರೆಸ್(TMC) ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

'ಗೃಹಿಣಿಯನ್ನು ಯಾರಿಗೂ ಸಾಲ ಕೊಡಬೇಡಿ'.. ಮತ್ತೊಮ್ಮೆ ವಿವಾದಿತ ಹೇಳಿಕೆ ಪುನರುಚ್ಛರಿಸಿದ ಮಮತಾ ಬ್ಯಾನರ್ಜಿ!

ಮಮತಾ ಬ್ಯಾನರ್ಜಿ ಬೀದಿ ಬದಿ ವ್ಯಾಪಾರಿಗಳ ಸ್ಟಾಲ್‌ಗೆ ತೆರಳಿ ಈ ರೀತಿ ಆಹಾರ ತಿನಿಸುಗಳನ್ನು(Food) ತಮ್ಮ ಕೈಯಾರೆ ತಯಾರಿಸಿ ನೀಡುತ್ತಿರುವುದು ಇದೇ ಮೊದಲ್ಲ. ಈ ಹಿಂದೆ ಇದೇ ಡಾರ್ಜಲಿಂಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ, ರಸ್ತೆ ಬದಿಯ ಸ್ಟಾಲ್‌ನಲ್ಲಿ ಪ್ರಸಿದ್ಧ ಟಿಬೇಟಿಯನ್ ಆಹಾರ ಮೊಮೋ ತಯಾರಿ ಪ್ರವಾಸಿಗರಿಗೆ ನೀಡಿದ್ದರು.  ಇನ್ನು 2019ರಲ್ಲಿ ದಿಘಾದಿಂದ ಕೋಲ್ಕತಾಗೆ ಮರಳುವ ವೇಳೆ ಮಮತಾ ಬ್ಯಾನರ್ಜಿ ರಸ್ತೆ ಬದಿ ಟೀ ಸ್ಟಾಲ್‌ಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಕೈಯಾರೆ ಟೀ ಮಾಡಿ ಜನರಿಗೆ ನೀಡಿದ್ದರು.

 

 

ಇದರ ನಡುವೆ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ಚುನಾವಣೆಯತ್ತಲೂ ಗಮನಹರಿಸಿದ್ದಾರೆ.  ರಾಷ್ಟ್ರಪತಿ ಚುನಾವಣೆಯಲ್ಲಿ ಅಚ್ಚರಿ ಮೂಡಿಸಲು ಮುಂದಾಗಿದ್ದ ಮಮತಾ ಬ್ಯಾನರ್ಜಿಗೆ ತಮ್ಮ ಪಕ್ಷದ ನಾಯಕ ಯಶವಂತ್ ಸಿನ್ಹಾ ರಾಷ್ಟ್ರಪತಿ ಅಭ್ಯರ್ಥಿಯಾಗಿ ವಿಪಕ್ಷಗಳ ಒಮ್ಮತದಿಂದ ಆಯ್ಕೆ ಮಾಡಿದೆ. ಆದರೆ ಎನ್‌ಡಿಎ ಕೂಟ ದ್ರೌಪದಿ ಮುರ್ಮು ಕಣಕ್ಕಿಳಿಸಿ ವಿಪಕ್ಷಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ.  ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಆಯ್ಕೆಯ ಬಗ್ಗೆ ಬಿಜೆಪಿ, ವಿಪಕ್ಷಗಳೊಂದಿಗೆ ಮೊದಲೇ ಚರ್ಚಿಸಿದ್ದರೆ ನಾವು ಅವರಿಗೆ ಬೆಂಬಲ ನೀಡುತ್ತಿದ್ದೆವು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಜಿಹಾದ್ ಹೇಳಿಕೆ, ಮಮತಾ ವಿರುದ್ಧ ರಾಜ್ಯಪಾಲ ಸೇರಿ ಬಿಜೆಪಿ ಗರಂ!

ಆದರೆ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ. ‘ಈಗ ದ್ರೌಪದಿ ಹೆಸರು ಘೋಷಣೆಯಾಗಿದೆ. ರಾಷ್ಟ್ರಪತಿ ಚುನಾವಣೆಯ ಹೊಸ್ತಿಲಲ್ಲಿ ಮಮತಾ ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಕೈಬಿಡುತ್ತಾರಾ?’ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ ಮಾಳವೀಯ ಪ್ರಶ್ನಿಸಿದ್ದಾರೆ. ವಿಪಕ್ಷಗಳೆಲ್ಲ ಒಟ್ಟುಗೂಡಿ ಟಿಎಂಸಿ ನಾಯಕ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?