ಟಿಎಂಸಿ ಮುಖಂಡನ ಮನೆಯಲ್ಲಿ ಬಾಂಬ್‌ ಸ್ಫೋಟ: 3 ಸಾವು

By Kannadaprabha NewsFirst Published Dec 4, 2022, 7:02 AM IST
Highlights

ಟಿಎಂಸಿ ಮುಖಂಡನ ಮನೆಯಲ್ಲಿ ಬಾಂಬ್‌ ಸ್ಪೋಟ ಸಂಭವಿಸಿ 3 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತಾ: ಟಿಎಂಸಿ ಮುಖಂಡನ ಮನೆಯಲ್ಲಿ ಬಾಂಬ್‌ ಸ್ಪೋಟ ಸಂಭವಿಸಿ 3 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರ ರಾಲಿ ನಿಗದಿಯಾಗಿದ್ದ ಪೂರ್ವ ಮಿಡ್ನಾಪುರದಿಂದ 1.5 ಕಿ.ಮೀ ದೂರದಲ್ಲಿರುವ ನಾರ‍್ಯಂಬಿಲ ಗ್ರಾಮದ ಟಿಎಂಸಿ ಬೂತ್‌ ಅಧ್ಯಕ್ಷನ ಮನೆಯಲ್ಲಿ ಘಟನೆ ಸಂಭವಿಸಿದೆ. ಶುಕ್ರವಾರ ರಾತ್ರಿ 11.15ರ ಹೊತ್ತಿಗೆ ನಡೆದ ಬಾಂಬ್‌ ಸ್ಫೋಟದಿಂದಾಗಿ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಸ್ಫೋಟದ ಹಿಂದಿನ ಉದ್ಧೇಶ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿ ಆರೋಪ:

ಟಿಎಂಸಿ ನಾಯಕನ (TMC Leader) ಮನೆಯಲ್ಲಿ ಬಾಂಬ್‌ (Bomb) ತಯಾರಿಸಲಾಗುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ (West Bengal) ಬಾಂಬ್‌ ತಯಾರಿಕೆ ಉದ್ಯಮ ಮಾತ್ರ ಅಭಿವೃದ್ಧಿಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್‌ ಘೋಷ್‌ (Dilip Ghosh) ಆರೋಪಿಸಿದ್ದಾರೆ. ಈ ಘಟನೆಯ ಕುರಿತಂತೆ ಸಿಎಂ ಮಮತಾ ಬ್ಯಾನರ್ಜಿ ಯಾಕೆ ಮೌನವಹಿಸಿದ್ದಾರೆ ಎಂದು ಟಿಎಂಸಿ ಹಿರಿಯ ನಾಯಕ ಸುಜನ್‌ ಚಕ್ರವರ್ತಿ ಪ್ರಶ್ನಿಸಿದ್ದಾರೆ. ಆದರೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಟಿಎಂಸಿ ರಾಜ್ಯ ಕಾರ್ಯದರ್ಶಿ ಕುನಾಲ್‌ ಘೋಷ್‌ (Kunal Ghosh)‘ಯಾವುದೇ ಪುರಾವೆಗಳಿಲ್ಲದೇ ಆಡಳಿತ ಪಕ್ಷವನ್ನು ದೂರುವುದು ವಿರೋಧ ಪಕ್ಷಗಳಿಗೆ ಚಾಳಿಯಾಗಿಬಿಟ್ಟಿದೆ’ ಎಂದು ತಿರುಗೇಟು ನೀಡಿದ್ದಾರೆ.

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್, ಝಲ್ದಾ ವಿಶ್ವಾಸಮತ ಕಳೆದುಕೊಂಡ ಟಿಎಂಸಿ!

'ಆತ್ಮಾಹುತಿ ಬಾಂಬ್' ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್: ಶಾರೀಕ್ ಜೊತೆ ಲಿಂಕ್?

 

click me!