ಮಹಿಳಾ ಸಂಸದರನ್ನು ತಳ್ಳಾಡಿದ ಮಾರ್ಷಲ್: ಕಾಂಗ್ರೆಸ್ ಪ್ರತಿಭಟನೆ!

By Web DeskFirst Published Nov 25, 2019, 2:46 PM IST
Highlights

ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾದ ಮಹಾರಾಷ್ಟ್ರ ಹೈಡ್ರಾಮಾ| ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರೀ ಪ್ರತಿಭಟನೆ| ಪ್ರತಿಭಟನಾನಿರತ ಮಹಿಳಾ ಸಂಸದರನ್ನು ತಳ್ಳಾಡಿದ ಮಾರ್ಷಲ್’ಗಳು| ಈವ್ರ ಗದ್ದಲ ನಡೆಸುತ್ತಿದ್ದ ಮಹಿಳಾ ಸಂಸದರನ್ನು ಹೊರ ಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಆದೇಶ| ಮಹಿಳಾ ಸಂಸದರನ್ನು ತಳ್ಳಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ| ಮಾರ್ಷಲ್’ಗಳ ವರ್ತನೆ ಖಂಡಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ| ತಮಿಳುನಾಡಿನ ಸಂಸದೆ ಜ್ಯೋತಿಮಣಿ ಹಾಗೂ ಕೇರಳದ ರಮ್ಯಾ ಹರಿದಾಸ್|

ನವದೆಹಲಿ(ನ.25): ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಖಂಡಿಸಿ ಲೋಕಸಭೆಯಕ್ಕು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ವೇಳೆ, ಇಬ್ಬರು ಮಹಿಳಾ ಸಂಸದರನ್ನು ಮಾರ್ಷಲ್’ಗಳು ಒತ್ತಾಯಪೂರ್ವಕವಾಗಿ ತಳ್ಳಾಡಿದ ಘಟನೆ ನಡೆದಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ತೀವ್ರ ಗದ್ದಲ ನಡೆಸುತ್ತಿದ್ದ ಮಹಿಳಾ ಸಂಸದರನ್ನು ಹೊರ ಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಆದೇಶ ನೀಡಿದ್ದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಸಂಸತ್ತಿನ ಮೊಗಸಾಲೆಯಲ್ಲಿ ರಾಹುಲ್ ಘರ್ಜನೆ!

ಸ್ಪೀಕರ್ ಆದೇಶದನ್ವಯ ಸದನಸ ಬಾವಿಗಿಳಿದ ಮಾರ್ಷಲ್’ಗಳು, ಮಹಿಳಾ ಸಂಸದರನ್ನು ಒತ್ತಾಯಪೂರ್ವಕವಾಗಿ ಹೊರಗೆ ಹಾಕಲು ಪ್ರಯತ್ನಿಸಿದರು.

ಕಾಂಗ್ರೆಸ್ ಸಂಸದರೊಡನೆ ಸೇರಿ ತಮಿಳುನಾಡಿನ ಸಂಸದೆ ಜ್ಯೋತಿಮಣಿ ಹಾಗೂ ಕೇರಳದ ರಮ್ಯಾ ಹರಿದಾಸ್ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮಾರ್ಷಲ್’ಗಳು ಅವರನ್ನು ತಳ್ಳಿದ ಘಟನೆ ನಡೆದಿದೆ.

Sonia Gandhi leads Congress protest on the Maharashtra issue in Parliament premises

Read Story | https://t.co/qOLNQdEMWg pic.twitter.com/nuXnDJbaGz

— ANI Digital (@ani_digital)

ಮಾರ್ಷಲ್’ಗಳ ನಡುವಳಿಕೆಯಿಂದ ಕೆರಳಿದ ಕಾಂಗ್ರೆಸ್, ಮತ್ತೆ ಪ್ರತಿಭಟನೆ ಚುರುಕುಗೊಳಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಮಾರ್ಷಲ್’ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಅಲ್ಲದೇ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಮಹಿಳೆಯರನ್ನು ತಳ್ಳಾಡಿದ ಘಟನೆ ಸದನದ ಇತಿಹಾಸಕ್ಕೆ ಕಪ್ಪುಚುಕ್ಕೆ ಎಂದು ಹರಿಹಾಯ್ದರು.

ಮತ್ತೊಂದು ದಿನ ಫಡ್ನವೀಸ್‌ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!

ಆದರೆ ಸ್ಪೀಕರ್ ಆದೇಶ ಮತ್ತು ಮಾರ್ಷಲ್’ಗಳ ನಡುವಳಿಕೆಯನ್ನು ಬೆಂಬಲಿಸಿರುವ ಬಿಜೆಪಿ ನಾಯಕಾರದ ರಾಜನಾಥ್ ಸಿಂಗ್ ಹಾಗೂ ರವಿಶಂಕರ್ ಪ್ರಸಾದ್, ಸದನದಲ್ಲಿ ಅನುಚಿತ  ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

Uproar also continues in Lok Sabha over https://t.co/QLPJHVK3CP

— ANI (@ANI)

ಸದ್ಯ ತೀವ್ರ ಗದ್ದಲದ ಪರಿಣಾಮ ರಾಜ್ಯಸಭೆಯನ್ನು ನಾಳೆವರೆಗೆ ಮುಂದೂಡಲಾಗಿದ್ದು, ಲೋಕಸಭೆ ಕಲಾಪವನ್ನು ಕೂಡ ಮುಂದೂಡಲಾಗಿದೆ.

click me!