ಕೇಂದ್ರ ಸಂಪುಟ ಪುನಾರಚನೆ ವೇಳೆ ಕೊಕ್, ರಾಜಕೀಯಕ್ಕೆ ಗುಡ್‌ಬೈ ಹೇಳಿದ ಬಬೂಲ್ ಸುಪ್ರಿಯೋ!

By Suvarna NewsFirst Published Jul 31, 2021, 6:33 PM IST
Highlights
  • ಬಿಜೆಪಿ ನಾಯಕ, ಪಶ್ಚಿಮ ಬಂಗಾಳ ಅಸನೂಲ್ ಕ್ಷೇತ್ರ ಸಂಸದನ ಅಚ್ಚರಿ ನಿರ್ಧಾರ
  • ರಾಜಕೀಯಕ್ಕೆ ಗುಡ್ ಬೈ ಹೇಳಿದ ಬಬೂಲ್ ಸುಪ್ರಿಯೋ
  • ಸಂಪುಟ ಪುನಾರಚನೆ ವೇಳೆ ಬಬೂಲ್‌ಗೆ ಕೊಕ್ ನೀಡಿದ್ದ ಕೇಂದ್ರ

ನವದೆಹಲಿ(ಜು.31): ಮಾಜಿ ಸಚಿವ, ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಬಬೂಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದಾರೆ. ಫೇಸ್‌ಬುಕ್ ಮೂಲಕ ವಿದಾಯದ ಪೋಸ್ಟ್ ಹಾಕಿ ರಾಜಕೀಯಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. 50ರ ಹರೆಯದ ಬಬೂಲ್ ಸುಪ್ರಿಯೋ ನಿರ್ಧಾರ ಸ್ವತಃ ಬಿಜೆಪಿಗೆ ಶಾಕ್ ನೀಡಿದೆ. 

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸೋಲು

ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದೇನೆ, ತಂದೆ, ತಾಯಿ, ಪತ್ನಿ, ಪುತ್ರಿ, ಇಬ್ಬರು ಗೆಳೆಯರು, ಎಲ್ಲರ ಸಲಹೆ ಬಳಿಕ ಹೇಳುತ್ತಿದ್ದೇನೆ. ನಾನು ಇತರ ಯಾವುದೇ ಪಕ್ಷ ಸೇರಿಕೊಳ್ಳಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಎಂ ಎಲ್ಲಿಯೂ ಹೋಗಲ್ಲ. ನಾನು ಟೀಂ ಪ್ಲೇಯರ್. ನಾನು ಯಾವತ್ತೂ ಒಂದೇ ತಂಡಕ್ಕೆ ಬೆಂಬಲಿಸಿದ್ದೇನೆ. ಅದು ಮೋಹನ್ ಬಗಾನ್. ನಾನು ಒಂದೇ ಪಕ್ಷಕ್ಕೆ ಬೆಂಬಲಿಸಿದ್ದೇನೆ ಅದು ಬಿಜೆಪಿ. ಇಷ್ಟೇ. ನಾನು ರಾಜಕಿಯಂದಿ ದೂರ ಸರಿಯುತ್ತಿದ್ದೇನೆ ಎಂದು ಫೇಸ್‌ಬುಕ್ ಫೋಸ್ಟ್ ಮಾಡಿದ್ದಾರೆ.

 

ಸಾಮಾಜಿಕ ಕೆಲಸ ಮಾಡಲು ರಾಜಕೀಯದಲ್ಲಿ ಇರಲೇಬೇಕು ಎಂದಿಲ್ಲ ಎಂದು ಸುಪ್ರಿಯೋ ಹೇಳಿದ್ದಾರೆ. ಬಬೂಲ್ ಸುಪ್ರಿಯೋ ನಿರ್ಧಾರ ಬೆಂಬಲಿಗರು, ಪಶ್ಚಿಮ ಬಂಗಾಳ ಬಿಜೆಪಿ ಹಾಗೂ ಕೇಂದ್ರಕ್ಕೆ ಅಚ್ಚರಿ ನೀಡಿದೆ. ಸುಪ್ರಿಯೋ ತಮ್ಮ ವಿದಾಯದ ಪೋಸ್ಟ್‌ನಲ್ಲಿ ಸೂಕ್ತ ಕಾರಣಗಳನ್ನು ಬಹಿರಂಗ ಪಡಿಲಿಲ್ಲ.

ಬಿಜೆಪಿ ಶಾಸಕ ಬಾಬುಲ್ ಸುಪ್ರಿಯೋ ವಿರುದ್ಧ ಚಾರ್ಜ್'ಶೀಟ್ ದಾಖಲು

ಕೇಂದ್ರದ ರಾಜ್ಯ ಪರಿಸರ ಖಾತೆ ಸಚಿವ ಸ್ಥಾನದಲ್ಲಿದ್ದ ಬಬೂಲ್ ಸುಪ್ರಿಯೋಗೆ ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನಾರಚನೆಯಲ್ಲಿ ಕೊಕ್ ನೀಡಲಾಗಿತ್ತು. ಇದೇ ಕಾರಣಕ್ಕೆ ಅಸಮಾಧಾನಗೊಂಡಿದ್ದ ಸುಪ್ರಿಯೋ ಇದೀಗ ರಾಜೀನಾಮೆ ನೀಡಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಬೂಲ್ ಸುಪ್ರಿಯೋ ಟೊಲಿಗುಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಪ್ರಿಯೋ 50,000 ಮತಗಳ ಅಂತರಿದಂದ ಸೋಲು ಕಂಡಿದ್ದರು. ಹೀಗಾಗಿ ಕೇಂದ್ರ ಸಂಪುಟ ಪುನಾರಚನೆಯಲ್ಲಿ ಸುಪ್ರಿಯೋಗೆ ಕೊಕ್ ನೀಡಲಾಗಿತ್ತು ಎನ್ನಲಾಗುತ್ತಿದೆ. ಈ ಎಲ್ಲಾ ಬೆಳವಣಿಗಳೇ ಬಬೂಲ್ ಸುಪ್ರಿಯೋ ರಾಜಕೀಯ ವಿದಾಯಕ್ಕೆ ಕಾರಣವಾಗಿದೆ ಎಂದು ಸುಪ್ರಿಯೋ ಆಪ್ತರು ಹೇಳಿದ್ದಾರೆ.
 

click me!