
ನವದೆಹಲಿ : ಭಾರತದಲ್ಲಿ ನಿಸ್ತೇಜವಾಗಿರುವ ಪ್ರಜಾಪ್ರಭುತ್ವದ ವಿಷಯದಲ್ಲಿ ವಿದೇಶಗಳು ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವುದೇ ಹಂತದಲ್ಲೂ ಕರೆಕೊಟ್ಟಿಲ್ಲ. ಸುಳ್ಳು ಮತ್ತು ತಪ್ಪು ಮಾಹಿತಿಗಳ ಮೂಲಕ ರಾಹುಲ್ ವಿರುದ್ಧ ಅತ್ಯಂತ ಯೋಜಿತ ರೀತಿಯಲ್ಲಿ ವೈಯಕ್ತಿಕ ದಾಳಿ ನಡೆಸಲಾಗುತ್ತದೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಹೇಳಿಕೆ ಕುರಿತು ದೇಶವ್ಯಾಪಿ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಪಿತ್ರೋಡಾ (Sam Pitroda) ‘ರಾಹುಲ್ ಗಾಂಧಿ ಲಂಡನ್‌ನಲ್ಲಿ (London) ಆಡಿದ ಮಾತುಗಳ ಬಗ್ಗೆ ಸುಳ್ಳನ್ನು ಉತ್ತೇಜಿಸುವ, ಸುಳ್ಳನ್ನು ಹರಡುವ ಕೆಲಸವನ್ನು ದಯವಿಟ್ಟು ನಿಲ್ಲಿಸಿ. ಇಂಥ ಆರೋಪ ಮಾಡುವವರು ರಾಹುಲ್ ಗಾಂಧಿ ಭಾಷಣದ ಸ್ಥಳದಲ್ಲಿ ಇದ್ದರಾ? ಅವರು ರಾಹುಲ್ ಗಾಂಧಿ ಭಾಷಣದ ವಿಡಿಯೋಗಳನ್ನು (Speech Video) ನೋಡಿದ್ದಾರಾ? ಅವರು ಏನು ಹೇಳಿದ್ದಾರೆಂದು ನಿಮಗೆ ನಿಜವಾಗಿಯೋ ಗೊತ್ತಿದೆಯಾ?’ ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.
ಇದನ್ನು ಓದಿ: SORRY POLITICS: ರಾಹುಲ್ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..!
ಜೊತೆಗೆ, ‘ರಾಹುಲ್ ಗಾಂಧಿ ಹೇಳಿದ್ದೇನೆಂದರೆ 1. ಭಾರತದ ಪ್ರಜಾಪ್ರಭುತ್ವ ಜಾಗತಿಕ ಪರಿಣಾಮಗಳನ್ನು ಹೊಂದಿದೆ. 2. ಭಾರತದ ಪ್ರಜಾಪ್ರಭುತ್ವದ ಪರಿಸ್ಥಿತಿ ಕಳವಳಕಾರಿಯಾಗಿದೆ. 3. ಅದು ಭಾರತದ ಸಮಸ್ಯೆ, ಮತ್ತು ನಾವದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು. ಇದರ ಹೊರತಾಗಿ ಅವರೆಂದೂ ವಿದೇಶಗಳನ್ನು ಭಾರತದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಕರೆಕೊಟ್ಟಿಲ್ಲ. ಹೀಗಿರುವಾಗ ಸುಳ್ಳು ಮಾಹಿತಿಗಳನ್ನು ಆಧರಿಸಿ ರಾಹುಲ್ ಗಾಂಧಿ ಅವರ ಮೇಲೆ ಅತ್ಯಂತ ಯೋಜಿತ ಸ್ವರೂಪದಲ್ಲಿ ದಾಳಿ ನಡೆಸುವ ಅವಶ್ಯಕತೆಯಾದರೂ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭಾರತದ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಉಸಿರುಗಟ್ಟಿಸುವ ಸ್ಥಿತಿ; ಬಿಜೆಪಿಯದ್ದು ಹೇಡಿತನದ ಸಿದ್ಧಾಂತ: ರಾಹುಲ್ ಗಾಂಧಿ ಆರೋಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ