48 ಗಂಟೆಗಳಲ್ಲಿ ಒಂದು ಸಾವಿರ ಕೊರೋನಾ ಕೇಸ್.. ಕುಂಭಮೇಳಕ್ಕೆ ತೆರೆ?

By Suvarna News  |  First Published Apr 14, 2021, 6:15 PM IST

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ/ ಉತ್ತರ ಖಂಡ್ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ/ ಅಖಾಡಗಳ ಧಾರ್ಮಿಕ ಮುಖಂಡರ ಜೊತೆ ಸಭೆ ನಡೆಸಲು ಮುಂದಾಗಿರುವ ಸರ್ಕಾರ/ ಕಳೆದ 48 ಗಂಟೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹರಿದ್ವಾರದಿಂದ ವರದಿ


ಹರಿದ್ವಾರ(ಏ.  14)  ಹರಿದ್ವಾರಲ್ಲಿ ಕೊರೋನಾ ಅಬ್ಬರಿಸಿದೆ. ಕುಂಭಮೇಳಕ್ಕೆ ನಿಗದಿಗಿಂತ ಮುಂಚೆಯೇ  ತೆರೆ ಎಳೆಯಲು ನಿರ್ಧಾರ ಮಾಡಲಾಗಿದೆ.  ಉತ್ತರ ಖಂಡ್ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ದಲ್ಲಿ ಲಕ್ಷ ಲಕ್ಷ ಸಾಧುಗಳು ಪಾಳ್ಗೊಂಡಿದ್ದಾರೆ.

ಧಾರ್ಮಿಕ ಮುಖಂಡರ ಜೊತೆ ಸಭೆ ನಡೆಸಲು ಮುಂದಾಗಿರುವ ಸರ್ಕಾರ   ತೀರ್ಮಾನ ತೆಗೆದುಕೊಳ್ಳಲಿದೆ.  ಕಳೆದ 48 ಗಂಟೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹರಿದ್ವಾರದಿಂದ ವರದಿಯಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ. 

Tap to resize

Latest Videos

undefined

ಕುಂಭಮೇಳಕ್ಕೂ ಮರ್ಕಜ್ ಗೂ ಹೋಲಿಕೆ ಇಲ್ಲ

ಘಾಟ್ ಗಳಲ್ಲಿ ಒತ್ತಾಯಪೂರ್ವಕವಾಗಿ ಅಂತರ ಕಾಯ್ದುಕೊಳ್ಳುವುದಕ್ಕೆ ಯತ್ನಿಸಿದರೆ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಬಹುದು ಆದ್ದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಕೊರೋನಾ  ಎರಡನೇ ಅಲೆ ವ್ಯಾಪಿಸುತ್ತಿದ್ದು ಬಾಲಿವುಡ್ ನ  ಅನೇಕರಿಗೂ ತಗುಲಿದೆ. ಅಕ್ಷಯ್ ಕುಮಾರ್ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಎರಡನೇ ಅಲೆ ನಿಯಂಣತ್ರಣಕ್ಕೆ ಸರ್ಕಾರಗಳು ಹರಸಾಹಸ ಮಾಡುತ್ತಿವೆ.

"

click me!