ಮಿಗ್ ತರಬೇತಿ ವಿಮಾನ ಪತನ: ಅಪಾಯದಿಂದ ಪಾರಾದ ಇಬ್ಬರು ಪೈಲೆಟ್!

Published : Nov 16, 2019, 02:05 PM IST
ಮಿಗ್ ತರಬೇತಿ ವಿಮಾನ ಪತನ: ಅಪಾಯದಿಂದ ಪಾರಾದ ಇಬ್ಬರು ಪೈಲೆಟ್!

ಸಾರಾಂಶ

ನೌಕಾಪಡೆಯ ಮಿಗ್ ತರಬೇತಿ ವಿಮಾನ ಪತನ| ಗೋವಾದ ಗ್ರಾಮವೊಂದರಲ್ಲಿಅಪಘಾತಕ್ಕೀಡಾದ ಮಿಗ್ ತರಬೇತಿ ವಿಮಾನ| ಪ್ಯಾರಾಚೂಟ್‌ ಸಹಾಯದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾದ ಇಬ್ಬರು ಪೈಲೆಟ್|  ರೇರ್ ಅಡ್ಮಿರಲ್ ಫಿಲಿಪೊಸ್ ಜಾರ್ಜ್ ಪೈನುಮೂಟಿಲ್ ಮಾಹಿತಿ| 

ಪಣಜಿ(ನ.16): ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಗೋವಾದ ಗ್ರಾಮವೊಂದರಲ್ಲಿಅಪಘಾತಕ್ಕೀಡಾಗಿದೆ.

ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಪ್ಯಾರಾಚೂಟ್‌ನಿಂದ ಸುರಕ್ಷಿತವಾಗಿ ಹಾರಿದ ಪರಿಣಾಮ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಗೋವಾ ವಿಭಾಗದ ಭಾರತೀಯ ನೌಕಾಪಡೆ ಅಧಿಕಾರಿ ರೇರ್ ಅಡ್ಮಿರಲ್ ಫಿಲಿಪೊಸ್ ಜಾರ್ಜ್ ಪೈನುಮೂಟಿಲ್, ಅಪಘಾತದ ಮುನ್ಸೂಚನೆ ಅರಿತ ಪೈಲೆಟ್‌ಗಳು ಪ್ಯಾರಾಚೂಟ್ ಸಹಾಯದಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?