ಮದುವೆಯಿಂದ ಆರಂಭ.. ಬೀದಿಯಲ್ಲೂ ಹಿಗ್ಗಾಮುಗ್ಗಾ ಹೊಡೆದಾಟ ವಿಡಿಯೋ ವೈರಲ್‌

By Suvarna News  |  First Published Feb 21, 2022, 5:40 PM IST
  • ಮದುವೆ ಆರತಕ್ಷತೆ ನಂತರ ಗಲಾಟೆ
  • ಬೀದಿಯಲ್ಲಿ ಹೊಡೆದಾಡಿಕೊಂಡ ಅತಿಥಿಗಳು
  • ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
     

ಮದುವೆಗಳು ಅಂದುಕೊಂಡಂತೆ ಎಂದಿಗೂ ಮುಗಿಯುವುದೇ ಇಲ್ಲ. ಕೆಲವೊಮ್ಮೆ, ವಿಷಯಗಳು ಕೈ ಮೀರಿ ಹೋಗಬಹುದು. ಮದುವೆಯಲ್ಲಿ ನಡೆಯುವ ಕಿತ್ತಾಟ ಒದ್ದಾಟ ಹೊಡೆದಾಟ ಬಡಿದಾಟಗಳು ಬರೀ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ಕೂಡ ಮದುವೆ ಆರತಕ್ಷತೆಯ ನಂತರ ದೊಡ್ಡ ಹೊಡೆದಾಟ ನಡೆದಿದ್ದು, ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕೆಲವೊಂದು ಮದುವೆಗಳಲ್ಲಿ ನಡೆಯುವ ಹೊಡೆದಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಆ ಪಟ್ಟಿಗೆ ಈಗ ನಾವು ಹೇಳುತ್ತಿರುವ ಸ್ಟೋರಿಯೂ ಸೇರಿದೆ. ಸಿಡ್ನಿ(Sydney) ಉಪನಗರದಲ್ಲಿ ಮದುವೆಯೊಂದರ ನಂತರ ಅತಿಥಿಗಳು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

ವಿಡಿಯೋದಲ್ಲಿ ಕಾಣಿಸುವಂತೆ ಔಪಾಚಾರಿಕ ಉಡುಪು ಧರಿಸಿದ್ದ ಡಜನ್‌ಗೂ ಹೆಚ್ಚಿರುವ ಜನರು ಪರಸ್ಪರ ಹೊಡೆದಾಡಿಕೊಂಡಿದ್ದು ಶನಿವಾರ ರಾತ್ರಿ ಸಿಡ್ನಿಯ ಮೊಸ್‌ಮನ್‌ನಲ್ಲಿ (Mosman) ಘಟನೆ ನಡೆದಿದೆ. ಹೊಡೆದಾಟದಿಂದಾಗಿ ಓರ್ವ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದರಿಂದ ಆ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. 

Lavender Marriage ಅಂದ್ರೇನು? ಗೇ ಜೊತೆ ನಡೆಯುತ್ತೆ ಲೆಸ್ಬಿಯನ್ ಮದುವೆ

ವರದಿಗಳ ಪ್ರಕಾರ 30ಕ್ಕೂ ಹೆಚ್ಚು ಜನ ರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದು, ಈ ವೇಳೆ ನೋಡುತ್ತಾ ನಿಂತಿದ್ದ ಸಾರ್ವಜನಿಕರು ಯಾರೋ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಗಲಾಟೆಯಿಂದ ಕೆಳಗೆ ಬಿದ್ದ ಓರ್ವ ವ್ಯಕ್ತಿಯ ಮೂಗಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ಬೋಳು ತಲೆಯ ವ್ಯಕ್ತಿಯೊಬ್ಬ ಇನ್ನೊಬ್ಬ ಅತಿಥಿಯತ್ತ ಧಾವಿಸುವ ಮೊದಲು ಮಹಿಳೆಯನ್ನು ನೆಲಕ್ಕೆ ತಳ್ಳುತ್ತಿರುವುದು ಕಂಡುಬಂದಿದೆ.

ಸೆಂಚುರಿ ಬಾರಿಸಿ ಮರು ಮದುವೆಯಾದ ತಾತ... ಮೊಮ್ಮಕ್ಕಳಿಂದಲೇ ವಿವಾಹ ಆಯೋಜನೆ

ಇದು ಮದುವೆಯ ನಂತರ ನಡೆದ ಗಲಾಟೆಯಾಗಿದ್ದು, ಏಕೆ ಕಿತ್ತಾಟ ಶುರುವಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ. ಆದರೆ ವರನ ಕಡೆಯವರು ಹಾಗೂ ಅಥಿತಿಗಳು ಗಲಾಟೆ ಮಾಡುತ್ತಿದ್ದರು ಎಂದು ಈ ದೃಶ್ಯವನ್ನು ಚಿತ್ರೀಕರಿಸಿದವರು ಹೇಳಿದ್ದಾರೆ. ಮೋಸ್ಮನ್/ಬಾಲ್ಮೋರಲ್ ಸೇತುವೆ ಬದಿಯಲ್ಲಿರುವ ಎರಡು ಜನಪ್ರಿಯ ವಿವಾಹ ಸ್ಥಳಗಳ ಹೊರಗೆ ಈ ಘಟನೆ ನಡೆದಿದೆ. ನಾನು ಸೇತುವೆ ಮೇಲೆ  ದೀಪಗಳು ಬದಲಾಗುವುದನ್ನು ನೋಡುತ್ತಿದ್ದೆ, ಆದರೆ ಇದು ಹಾಸ್ಯಾಸ್ಪದವಾಗಿದೆ ಎಂದು ಅವ್ಯವಸ್ಥೆಗೆ ಸಾಕ್ಷಿಯಾದ ವ್ಯಕ್ತಿಯೊಬ್ಬರು ಹೇಳಿದರು.

ಶೌಚಾಲಯಕ್ಕೆ ಹೋಗಿ ಬರುವೆ ಎಂದು ವಧು ಎಸ್ಕೇಪ್‌
ಛತ್ತೀಸ್‌ಗಢದ ಯುವತಿಯೊಬ್ಬಳು ಮದುವೆಯಾಗಿ ಗಂಡನ ಮನೆಗೆ ತೆರಳುವಾಗ ದಾರಿಯ ಮಧ್ಯೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿದ್ದಾಳೆ. ಅವಳಿಗಾಗಿ ಮಾರ್ಗಮಧ್ಯೆ ದಿಬ್ಬಣವನ್ನು ನಿಲ್ಲಿಸಲಾಯಿತು. ಆದರೆ, ಶೌಚಾಲಯಕ್ಕೆ ಹೋದವಳು ಎಷ್ಟು ಹೊತ್ತಾದರೂ ವಾಪಾಸ್ ಬರಲೇ ಇಲ್ಲ. ಇದರಿಂದ ವರನ ಮನೆಯವರಿಗೆ ಆತಂಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿದಾಗ ಆ ಯುವತಿ ತನ್ನ ಮದುವೆಯಾದ ನಂತರ ಗಂಡನ ಮನೆಗೆ ಹೋಗುವ ಬದಲು ತನ್ನ ಪ್ರಿಯಕರ ಜೊತೆ ಓಡಿ ಹೋಗಿದ್ದಾಳೆ ಎಂಬ ವಿಷಯ ಬಯಲಾಗಿದೆ.

ಛತ್ತೀಸ್‌ಗಢದ ಕಂಕೇರ್‌ನಲ್ಲಿ ವಧುವಿನ ಕುಟುಂಬದವರು ಆಕೆಯ ಪ್ರೀತಿಗೆ ಒಪ್ಪಿರಲಿಲ್ಲ. ತಾವು ನೋಡಿದ ಹುಡುಗನ ಜೊತೆ ಆಕೆಯ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ, ಅನಿವಾರ್ಯವಾಗಿ ಮದುವೆಗೆ ಒಪ್ಪಿದ ಆಕೆ ತನ್ನ ಸಮಯಕ್ಕಾಗಿ ಕಾಯುತ್ತಿದ್ದಳು. ತವರು ಮನೆಯಿಂದ ಬೀಳ್ಕೊಟ್ಟು ಗಂಡನ ಮನೆಗೆ ಹೋಗುವಾಗ ಮೊದಲೇ ಪ್ಲಾನ್ ಮಾಡಿದಂತೆ ಆಕೆ ಶೌಚಾಲಯಕ್ಕೆ ಹೋಗಬೇಕೆಂದು ನಾಟಕವಾಡಿದ್ದಳು. ಅದರಂತೆ ವಾಹನವನ್ನು ನಿಲ್ಲಿಸಿದಾಗ ಅಲ್ಲಿಂದ ತನ್ನ ಬಾಯ್​ಫ್ರೆಂಡ್ ಜೊತೆ ಆಕೆ ಓಡಿಹೋಗಿದ್ದಾಳೆ.
 

click me!