
ಮದುವೆ (Wedding) ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಆದರೆ, ಕೆಲವೊಮ್ಮೆ ಕಚೇರಿಯ ಕೆಲಸದ ಒತ್ತಡ ಅಥವಾ 'ಟಾಕ್ಸಿಕ್' ಕೆಲಸದ ವಾತಾವರಣದಿಂದಾಗಿ ವೈಯಕ್ತಿಕ ಜೀವನಕ್ಕೂ ತೊಂದರೆಯಾಗುತ್ತದೆ. ಇಂಥಹುದೇ ಒಂದು ಘಟನೆ ರೆಡ್ಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮದುವೆ ಹಾಗೂ ಹನಿಮೂನ್‌ಗೆ ಕಂಪನಿಯು ರಜೆ ನೀಡಲು ನಿರಾಕರಿಸಿದ್ದರಿಂದ, ಉದ್ಯೋಗಿಯೊಬ್ಬರು ಕೆಲಸವನ್ನೇ ಬಿಡಲು ಸಿದ್ಧರಾಗಿದ್ದ ರೋಚಕ ಸಂಗತಿ ಬೆಳಕಿಗೆ ಬಂದಿದೆ.
ರೆಡ್ಡಿಟ್‌ನ 'r/jobs' ಎಂಬ ಫೋರಂನಲ್ಲಿ ಉದ್ಯೋಗಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಮ್ಮ ಮದುವೆಗಾಗಿ ಅಕ್ಟೋಬರ್ ತಿಂಗಳಲ್ಲಿ 7 ದಿನಗಳ ರಜೆಯನ್ನು ಕೋರಿ ಆಪರೇಷನ್ ಮ್ಯಾನೇಜ್‌ಮೆಂಟ್‌ಗೆ ಆಗಸ್ಟ್ ತಿಂಗಳಲ್ಲೇ (ಮಾರ್ಗಸೂಚಿ ಪ್ರಕಾರ) ಅರ್ಜಿ ಸಲ್ಲಿಸಿದ್ದರು. ಆದರೆ, ಮ್ಯಾನೇಜ್‌ಮೆಂಟ್ ಈ ರಜೆಯನ್ನು ಅನುಮೋದಿಸಲು ಹಿಂದೇಟು ಹಾಕಿತ್ತು. ಪ್ರಯಾಣದ ವ್ಯವಸ್ಥೆಗಳೆಲ್ಲಾ ಮುಗಿದ ನಂತರವೂ ಕಂಪನಿಯು ರಜೆ ನೀಡಲು ನಿರಾಕರಿಸಿದ್ದು ಉದ್ಯೋಗಿಗೆ ತೀವ್ರ ನಿರಾಶೆಯನ್ನುಂಟುಮಾಡಿತ್ತು.
ಕಂಪನಿಯ ಈ ಧೋರಣೆಯಿಂದ ಬೇಸತ್ತ ಉದ್ಯೋಗಿ, "ಇದು ನನ್ನ ಮದುವೆ ಮತ್ತು ಹನಿಮೂನ್. ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಬೇಕಾದರೆ ಕೆಲಸವೇ ಹೋದರೂ ಪರವಾಗಿಲ್ಲ, ರಜೆ ದಿನಗಳಲ್ಲಿ ನಾನು ಕಚೇರಿಗೆ ಬರುವುದಿಲ್ಲ" ಎಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಈ ಕುರಿತು ರೆಡ್ಡಿಟ್‌ನಲ್ಲಿ ಸಲಹೆ ಕೋರಿದ್ದ ಅವರಿಗೆ, ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಯಿತು. "ನಿಮ್ಮನ್ನು ಕೇವಲ ನಂಬರ್ ಎಂದು ಪರಿಗಣಿಸುವ ಇಂಥ ಕಂಪನಿಯಲ್ಲಿ ಮುಂದುವರಿಯುವುದು ವ್ಯರ್ಥ" ಎಂದು ಅನೇಕರು ಧೈರ್ಯ ತುಂಬಿದರು.
ಈ ವಿವಾದದ ಕುರಿತು ಉದ್ಯೋಗಿ ಮತ್ತೊಂದು ಅಪ್‌ಡೇಟ್ ನೀಡಿದ್ದಾರೆ. ನೇರವಾಗಿ ಡಿಪಾರ್ಟ್‌ಮೆಂಟ್ ಹೆಡ್ (Department Head) ಅವರನ್ನು ಸಂಪರ್ಕಿಸಿ ಮೈಕ್ರೋಸಾಫ್ಟ್ ಟೀಮ್ಸ್ (Microsoft Teams) ಮೂಲಕ ಸಭೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕಂಪನಿಯ ನಿಯಮಗಳ ಮೇರೆಗೆಯೇ ರಜೆ ಕೋರಿದ್ದಾಗಿ ತಿಳಿಸಿದರು.
ಉದ್ಯೋಗಿಯ ಮಾತಿಗೆ ಸ್ಪಂದಿಸಿದ ವಿಭಾಗದ ಮುಖ್ಯಸ್ಥರು, ಯಾವುದೇ ಚಿಂತೆ ಮಾಡಬೇDಿ, ರಜೆ ಮಂಜೂರಾಗುತ್ತದೆ ಎಂದು ಭರವಸೆ ನೀಡಿದರು. ಕೇವಲ ಒಂದು ಗಂಟೆಯೊಳಗೆ ರಜೆ ಅಧಿಕೃತವಾಗಿ ಅನುಮೋದನೆಗೊಂಡ ಇಮೇಲ್ ಉದ್ಯೋಗಿಗೆ ಬಂದಿತು. ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯೋಗಿ ಆ ಇಮೇಲ್ ಅನ್ನು ತಮ್ಮ ವೈಯಕ್ತಿಕ ಖಾತೆಗೆ ಫಾರ್ವರ್ಡ್ ಮಾಡಿಕೊಳ್ಳುವ ಮೂಲಕ ತಮ್ಮ ಸುರಕ್ಷತೆಯನ್ನು ('CYA' - Cover Your Ass) ಖಚಿತಪಡಿಸಿಕೊಂಡಿದ್ದಾರೆ.
ಉದ್ಯೋಗಿಗಳ ವೈಯಕ್ತಿಕ ಬದುಕಿಗೆ ಮೌಲ್ಯ ನೀಡದ ಕಂಪನಿಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಿದರೆ ನ್ಯಾಯ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ