
ಹೈದರಾಬಾದ್: ಮದ್ವೆಯಾದ ನಂತರ ಪತ್ನಿಗೆ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇರಿಸಿ ಕಿರುಕುಳ ನೀಡುವುದು, ಪತ್ನಿಯನ್ನು ಇದಕ್ಕಾಗಿಯೇ ತವರು ಮನೆಗೆ ಕಳುಹಿಸುವುದು, ವರನ ಕಡೆಯವರು ಮದ್ವೆಗೂ ಮೊದಲು ವಧುವಿನ ಕಡೆಯವರಿಗೆ ಹೆಚ್ಚಿನ ವರದಕ್ಷಿಣೆ ನೀಡುವಂತೆ ಆಗ್ರಹಿಸಿ ಮದ್ವೆ ರದ್ದು ಮಾಡಿಸುವುದು ಇದೆಲ್ಲಾ ಇದುವರೆಗೆ ಕೇಳಿ ಬಂದಿರುವ ವರದಕ್ಷಿಣೆಗೆ ಸಂಬಂಧಿಸಿ ಹಲವು ವಿಚಾರಗಳು. ಆದರೆ ವಧು ದಕ್ಷಿಣೆ ಹೆಚ್ಚು ನೀಡುವಂತೆ ಕೇಳಿದ ಕಾರಣಕ್ಕೆ ಮದ್ವೆ ನಿಂತು ಹೋದ ವಿಚಿತ್ರ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ವಧು ಹೆಚ್ಚಿನ ಡೌರಿ ನೀಡುವಂತೆ ಕೇಳಿದ ಕಾರಣಕ್ಕೆ ಈ ಮದ್ವೆ ನಿಂತಿದೆ ಎಂದು ತಿಳಿದು ಬಂದಿದೆ. ಹಿಮ್ಮುಖ ವರದಕ್ಷಿಣೆ ಸಂಪ್ರದಾಯದಂತೆ ಈಗಾಗಲೇ ವಧುವಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡಲಾಗಿತ್ತು. ಹಿಮ್ಮುಖ ವರದಕ್ಷಿಣೆ ಸಂಪ್ರದಾಯದಂತೆ ತಮ್ಮ ಭಾವಿ ವಧುವಿಗೆ ಗಂಡಿನ ಕಡೆಯವರು ಹಣ ಬಂಗಾರ ನೀಡುತ್ತಾರೆ. ಆದರಂತೆ ಈ ಹುಡುಗಿಗೆ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡಲಾಗಿತ್ತು. ಆದರೆ ಈ ಹಣದಿಂದ ವಧು ಸಮಾಧಾನಗೊಂಡಿರಲಿಲ್ಲ. ಹೀಗಾಗಿ ಕೊನೆಯದಾಗಿ ಮದ್ವೆ ರದ್ದಾಗಿತ್ತು. ಅಲ್ಲದೇ ವಧುವಿಗೆ ಈ ಮದ್ವೆಯ ಮೇಲೆ ಆಸಕ್ತಿಯೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಬೆಳಗಾವಿ ಮೂಲದ ನವ ವಿವಾಹಿತೆ ಗ್ರಾಮಲೆಕ್ಕಿಗೆ ಮೈಸೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!
ಕುಟುಂಬಗಳ ನಡುವಿನ ಮಾತುಕತೆಯ ನಂತರ ಈ ಮದ್ವೆ ಹೈದರಾಬಾದ್‌ನ (Hyderabad) ಘಟ್‌ಕೇಸರ್‌ನಲ್ಲಿ (Ghatkesar) ನಡೆಯಬೇಕಾಗಿತ್ತು. ವಧು ತನ್ನ ಊರಾದ ಭದ್ರಾದ್ರಿ ಕೊತ್ತಗುಡಂನ (Kothagudem) ಅಶ್ವರಾವ್‌ಪೇಟೆ (Aswaraopet) ಗ್ರಾಮದಿಂದ ಇಲ್ಲಿಗೆ ಬರಬೇಕಾಗಿತ್ತು. ಆದರೆ ಇತ್ತ ಮದುವೆ ರದ್ದುಪಡಿಸಿದ ವಧುವಿನ ನಿರ್ಧಾರದಿಂದ ಸಿಟ್ಟುಗೊಂಡಿದ್ದ ವರನ ಪೋಷಕರು ಹೊಟೇಲ್‌ಗೆ ಧಾವಿಸಿ ಬಂದು ಏಕೆ ವಿವಾಹ ರದ್ದುಪಡಿಸಿದ್ದು ಎಂದು ಕೇಳಿದಾಗ ವಧುವಿನ ಕಡೆಯವರು ಆಕೆಗೆ ನೀಡಿದ ವಧುದಕ್ಷಿಣೆ ಕಡಿಮೆ ಆಗಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ವರನ ಕಡೆಯವರು ಶಾಕ್ ಆಗಿದ್ದು, ಕೂಡಲೇ ಮದ್ವೆ ಮಂಟಪದಿಂದ ತೆರಳಿದ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ ಪೊಲೀಸರು ವಧುವಿನ ಮನೆಯವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.
Bengaluru: ವರದಕ್ಷಿಣೆ ತರದ್ದಕ್ಕೆ ಮಧ್ಯರಾತ್ರಿ ಪತ್ನಿಯನ್ನು ಬಿಟ್ಟು ಹೋದ ಪತಿ
ನಂತರ ಈ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎರಡು ಕುಟುಂಬಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ತಮ್ಮಲೇ ಇತ್ಯರ್ಥಪಡಿಸಿಕೊಂಡು ಮದುವೆಯನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಹಾಗೂ ಯಾರನ್ನು ಬಂಧಿಸಿಲ್ಲ. ಮದುವೆಗೆ ಆಸಕ್ತಿ ಇಲ್ಲದ ಕಾರಣಕ್ಕೆ ವಧು ಹೆಚ್ಚಿನ ಡೌರಿಯನ್ನು ಕೇಳಿದ್ದು, ನಂತರ ಮಂಟಪಕ್ಕೆ ಬಾರದೇ ಮದ್ವೆ ರದ್ದುಪಡಿಸಿಕೊಂಡಿದ್ದಾಳೆ ಎಂದರು. ಆದರೆ ಸಾಮಾಜಿಕ ಜಾಲತಾಣದಲ್ಲಿ (Social media) ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನೇಕರು ಆಕೆಗೂ ವರದಕ್ಷಿಣೆ ತಡೆ ಕಾಯ್ದೆ 1961ರ ಅಡಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ