ಮದ್ವೆ ಎಲ್ಲರ ಬದುಕಿನಲ್ಲಿ ಬರುವ ಒಂದು ವಿಶೇಷದ ದಿನ. ಈ ಮದ್ವೆ ದಿನವನ್ನು ಜನ ಚಿರಕಾಲ ನೆನಪಿನಲ್ಲಿರಿಸಿಕೊಳ್ಳುತ್ತಾರೆ. ಆದರೆ ಹರಿಯಾಣದಲ್ಲಿ ನಡೆದ ಮದ್ವೆಯೊಂದು ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ.
ಹರಿಯಾಣ: ಮದ್ವೆ ಎಲ್ಲರ ಬದುಕಿನಲ್ಲಿ ಬರುವ ಒಂದು ವಿಶೇಷದ ದಿನ. ಈ ಮದ್ವೆ ದಿನವನ್ನು ಜನ ಚಿರಕಾಲ ನೆನಪಿನಲ್ಲಿರಿಸಿಕೊಳ್ಳುತ್ತಾರೆ. ಆದರೆ ಹರಿಯಾಣದಲ್ಲಿ ನಡೆದ ಮದ್ವೆಯೊಂದು ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಇಲ್ಲಿ ಮಂಗಳಮುಖಿ ತಾಯಿಯೊಬ್ಬರು ಮಗಳ ಕನ್ಯಾದಾನವನ್ನು ನೆರವೇರಿಸಿಕೊಟ್ಟಿದ್ದಾರೆ. ಇದು ನೋಡುಗರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿದೆ. ಜೈವಿಕವಾಗಿ ವಧುವಿಗೆ ಆಕೆ ತಾಯಿಯಲ್ಲದಿದ್ದರೂ ಚಿಕ್ಕ ಹುಡುಗಿಯಿರುವಾಗಿನಿಂದ ಆಕೆಯನ್ನು ಅವರೇ ತಾಯಿಯಂತೆ ಬೆಳೆಸಿದ್ದರು. ಅಲ್ಲದೇ ಭಾರಿ ಖುಷಿಯೊಂದಿಗೆ ಆಕೆಯನ್ನು ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ವಧು ವರರ ಜ್ಯುವೆಲ್ಲರಿಯಿಂದ ಹಿಡಿದು, ಆರತಕ್ಷತೆಯಿಂದ ಆಹಾರದವರೆಗೆಈ ಮದ್ವೆಯ ಎಲ್ಲಾ ಜವಾಬ್ದಾರಿಗಳನ್ನು ಅವರು ವಹಿಸಿಕೊಂಡಿದ್ದರು.
ತನ್ನ ಮಗಳು ಜಿನ್ನತ್ (Jannat) ಇಷ್ಟೊಂದು ಸಡಗರದಿಂದ ಮದುವೆಯಾಗುತ್ತಾಳೆ ಎಂದು ತಾನು ಎಂದು ಯೋಚಿಸಿರಲಿಲ್ಲ ಎಂದು ವಧುವಿನ ತಾಯಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ಮದುವೆಯ ನಂತರ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ವೇಳೆ ಮಗಳನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ನನ್ನ ಮಗಳ ಖುಷಿ ಹಾಗೂ ಆಕೆ ಖುಷಿಯಾಗಿರುವುದರ ಹೊರತಾಗಿ ನನಗೆ ಬೇರೇನೂ ಬೇಡ ಎಂದು ಅವರು ಹೇಳಿದರು. ತಾನೊಬ್ಬಳು ಟ್ರಾನ್ಸ್ಜಂಡರ್ ಆಗಿದ್ದು, ಮಗಳು ಜನ್ನತ್ ಬಾಲ್ಯದಿಂದಲೂ ನನ್ನೊಂದಿಗೆ ವಾಸಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಅವಳ ಮದ್ವೆಯನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದೆ ಎಂದು ಅವರು ಹೇಳಿದ್ದಾರೆ. ಈ ವಿಶೇಷ ಮದ್ವೆಯನ್ನು ನೋಡಿ ಅನೇಕರು ಅಚ್ಚರಿಗೆ ಒಳಗಾಗಿದ್ದರು.
ಭಿಕ್ಷಾಟನೆ, ಸೆಕ್ಸ್ ವರ್ಕ್ ಬಿಟ್ಟು ಹೋಟೆಲ್ ಆರಂಭ: ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಂಗಳಮುಖಿಯರು !
ಅಂದಹಾಗೆ ಮಂಗಳಮುಖಿ ಸಮುದಾಯ ಈ ಹಿಂದೆಯೂ ಇದೇ ರೀತಿ ಮತ್ತೊಂದು ವಿಭಿನ್ನ ಪ್ರಯತ್ನ ಮಾಡಿತ್ತು. ಬಡ ಕುಟುಂಬದಿಂದ ಬಂದ ಐದು ಹಿಂದೂ ಹಾಗೂ ಮುಸ್ಲಿಂ ತರುಣಿಯರ ವಿವಾಹವನ್ನು ಅವರು ಮಾಡಿದ್ದಾರೆ.
ವರದಿಗಳ ಪ್ರಕಾರ, ಮಂಗಳಮುಖಿ ಸಮುದಾಯದ (transgender community) ಮುಖ್ಯಸ್ಥೆ ನೀತು ಬಾಯಿ (Nettu Bai) ಎಂಬುವವರು 2012ರಿಂದಲೂ ಈ ರೀತಿಯ ವಿವಾಹಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಬಡ ಕುಟುಂಬದ ಅದರಲ್ಲೂ ಮದ್ವೆ ಮಾಡಲು ಸಾಧ್ಯವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ಪೋಷಕರ ಮಕ್ಕಳಿಗೆ ಮದುವೆ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಈ ಗುಂಪು ಮದ್ವೆ ಮನೆ ಅಲಂಕಾರ, ಅತಿಥಿಗಳಿಗೆ ಆಹಾರ (food), ವಧುವರರ ವೇಷ ಭೂಷಣ ಸೇರಿದಂತೆ ಎಲ್ಲದರ ಜವಾಬ್ದಾರಿ ಹೊರುತ್ತಿದ್ದರು. ಈ ನೀತುಬಾಯಿ ಎಂಬುವವರು ನವಂಬರ್ 2014ರಲ್ಲಿ ರಾಜಸ್ಥಾನದ (Rajasthan) ಭರತ್‌ಪುರದಲ್ಲಿ (Bharatpur)ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸಿ ವಾರ್ಡ್ 29ರ ಸದಸ್ಯರಾಗಿ ಆಯ್ಕೆಯಾಗಿದ್ದರು.
Bengaluru: ಪಾರ್ಟಿ ಮುಗಿಸಿ ಹೊರಟವನ ಬೆತ್ತಲೆಗೊಳಿಸಿ ಹಣ ಸುಲಿದ ಮಂಗಳಮುಖಿಯರು: ದೂರು
ಸಮಾಜ ಸೇವಕಿಯಾಗಿರುವ ನೀತು ಬಾಯಿ ಅವರು ತಮ್ಮ ಇಡೀ ಜೀವನವನ್ನು ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಮುಡಿಪಾಗಿರಿಸಿದ್ದು, ಅವರು ತಮ್ಮ ವಾರ್ಡ್‌ನಲ್ಲಿರುವ 60 ಬಡ ಮುಸ್ಲಿಂ ಹಾಗೂ ಹಿಂದೂ ಹೆಣ್ಣು ಮಕ್ಕಳ ವಿವಾಹವನ್ನು ಮಾಡಿದ್ದಾರೆ. ಅಲ್ಲದೇ ವಾರ್ಷಿಕವಾಗಿ ನಡೆಸುವ ಸಮೂಹಿಕ ವಿವಾಹ ಕಾರ್ಯಕ್ಕಾಗಿ ಅವರು ದಿನವೂ 4000 ರೂಪಾಯಿಯನ್ನು ಡಿಪಾಸಿಟ್ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಬಲರಲ್ಲದ ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಲ್ಲಿ 10 ಜನರನ್ನು ಆಯ್ಕೆ ಮಾಡಿ ಪ್ರತಿವರ್ಷವೂ ವಿವಾಹ ಮಾಡುತ್ತಿರುವುದಾಗಿ ಹೇಳಿದರು.