ಐಪಿಎಸ್‌ ಅಧಿಕಾರಿ ಜ್ಯೋತಿ ಜೊತೆ ಪಂಜಾಬ್ ಸಚಿವ ಹರ್ಜೋತ್‌ ಸಪ್ತಪದಿ: ಮದುವೆಯಾಗಲು ಕ್ಯೂನಲ್ಲಿ ಆಪ್‌ ಶಾಸಕರು..!

By Kannadaprabha News  |  First Published Mar 14, 2023, 11:31 AM IST

2022 ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ಹರ್ಜೋತ್‌ ಬೈನ್ಸ್ ಅವರು ಅಧಿಕಾರದಲ್ಲಿರುವಾಗ ಮದುವೆಯಾಗುತ್ತಿರುವ ಎರಡನೇ ಸಚಿವ ಎನಿಸಿಕೊಳ್ಳಲಿದ್ದಾರೆ.


ಚಂಡೀಗಢ: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು ಒಂದು ಕಡೆ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದ್ದರೆ, ಮತ್ತೊಂದು ಕಡೆ ಎಎಪಿಯ ಯುವ ನಾಯಕರು ಹಸೆಮಣೆ ಏರಲು ಸಜ್ಜಾಗ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಶೀಘ್ರದಲ್ಲೇ ಹಲವರು ಯುವ ನಾಯಕರು ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ವಿವಾಹಿತ ಎಎಪಿ ಶಾಸಕರ ಕ್ಲಬ್‌ಗೆ ಪಂಜಾಬ್‌ನ ಆಪ್‌ ಕ್ಷಣ ಸಚಿವ ಹರ್ಜೋತ್ ಬೈನ್ಸ್ ಅವರು ಒಂದೆರಡು ವಾರಗಳಲ್ಲಿ ಪಂಜಾಬ್-ಕೇಡರ್ ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರನ್ನು ವರಿಸಲಿದ್ದು, ಭಾನುವಾರ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

ಪಂಜಾಬ್‌ ಸರ್ಕಾರದಲ್ಲಿ (Punjab Government) ಶಿಕ್ಷಣ ಸಚಿವರಾಗಿರುವ (Education Minister) ಆಮ್‌ ಆದ್ಮಿ ಪಕ್ಷದ (Aam Aadmi Party) ಹರ್ಜೋತ್‌ ಸಿಂಗ್‌ ಬೈನ್ಸ್‌ (Harjoth Singh Bains) , ಶೀಘ್ರವೇ ರಾಜ್ಯದ ಐಪಿಎಸ್‌ ಅಧಿಕಾರಿ ಜ್ಯೋತಿ ಯಾದವ್‌ (Jyoti Yadav) ಅವರನ್ನು ವರಿಸಲಿದ್ದಾರೆ. ಇತ್ತೀಚೆಗೆ ಇಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಹರ್ಜೋತ್‌ 2017ರಲ್ಲಿ ಮೊದಲ ಬಾರಿ ಚುನಾವಣೆಗೆ ನಿಂತು ಸೋತಿದ್ದರು. ಬಳಿಕ ಇತ್ತೀಚಿನ ಚುನಾವಣೆಯಲ್ಲಿ ಆನಂದಪುರ ಸಾಹಿಬ್ ಕ್ಚೇತ್ರದಲ್ಲಿ ಆಯ್ಕೆಯಾಗಿದ್ದರು. ಈ ಮೊದಲು ಆಪ್‌ನ ಯುವ ಮೋರ್ಚಾವನ್ನು ಹರ್ಜೋತ್‌ ಬೈನ್ಸ್ ಮುನ್ನಡೆಸಿದ್ದರು. 

Tap to resize

Latest Videos

ಇದನ್ನು ಓದಿ: ಫತ್ವಾಗೆ ಡೋಂಟ್‌ ಕೇರ್‌: ಹೆಣ್ಮಕ್ಳಿಗೆ ಆಸ್ತಿ ವರ್ಗಾಯಿಸಲು ಮತ್ತೆ ವಿವಾಹವಾದ ಮುಸ್ಲಿಂ ದಂಪತಿ..!

2022 ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ಹರ್ಜೋತ್‌ ಬೈನ್ಸ್ ಅವರು ಅಧಿಕಾರದಲ್ಲಿರುವಾಗ ಮದುವೆಯಾಗುತ್ತಿರುವ ಎರಡನೇ ಸಚಿವ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು, ಕಳೆದ ಜುಲೈನಲ್ಲಿ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯವರಾದ ಡಾ. ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದರು. ಇದು ಭಗವಂತ ಮಾನ್ ಅವರ ಎರಡನೇ ಮದುವೆಯಾಗಿದ್ದು, 2015ರಲ್ಲಿ ಮೊದಲ ಪತ್ನಿಯಿಂದ ಬೇರ್ಪಟ್ಟಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಇನ್ನೊಂದೆಡೆ, ನರೀಂದರ್ ಕೌರ್ ಭರಾಜ್, ರಣವೀರ್ ಸಿಂಗ್ ಭುಲ್ಲರ್ ಮತ್ತು ನರಿಂದರ್‌ಪಾಲ್ ಸಿಂಗ್ ಸಾವ್ನಾ ಸೇರಿದಂತೆ ಕನಿಷ್ಠ ಮೂವರು ಆಡಳಿತ ಪಕ್ಷದ ಶಾಸಕರು ಎಎಪಿ ಸರ್ಕಾರ ರಚಿಸಿದ ನಂತರ ವಿವಾಹವಾಗಿದ್ದರು. ಸಂಗ್ರೂರ್‌ನ ಪಕ್ಷದ ಕಿರಿಯ ಶಾಸಕ 29 ವರ್ಷದ ನರೀಂದರ್ ಕೌರ್ ಭರಾಜ್ ಕಳೆದ ವರ್ಷ ಅಕ್ಟೋಬರ್ 8 ರಂದು ಎಎಪಿ ನಾಯಕ ಮಂದೀಪ್ ಸಿಂಗ್ ಲಖೇವಾಲ್ ಅವರನ್ನು ವಿವಾಹವಾದರೆ, ಫಿರೋಜ್‌ಪುರ ನಗರ ಕ್ಷೇತ್ರದ 62 ವರ್ಷದ ಶಾಸಕ ರಣಬೀರ್ ಸಿಂಗ್ ಭುಲ್ಲಾರ್ ಈ ವರ್ಷದ ಜನವರಿ 30 ರಂದು ಮರು ವಿವಾಹವಾದರು. ಭುಲ್ಲಾರ್ ಅವರ ಪತ್ನಿ ಸುಮಾರು ಎರಡೂವರೆ ವರ್ಷಗಳ ಹಿಂದೆ ನಿಧನರಾಗಿದ್ದರು. ಅಲ್ಲದೆ, ಫಾಜಿಲ್ಕಾ ಶಾಸಕ ಸಾವ್ನಾ ಅವರು ಈ ವರ್ಷದ ಗಣರಾಜ್ಯೋತ್ಸವದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

ಬೇನ್ಸ್ ನಂತರ, ಎಎಪಿಯ ಬಘಪುರಾಣ ಶಾಸಕ ಅಮೃತಪಾಲ್ ಸಿಂಗ್ ಸುಖಾನಂದ್ ಸಹ ಮದುವೆಯಾಗಲಿದ್ದು,  ಕೆನಡಾದ ಖಾಯಂ ರೆಸಿಡೆನ್ಸಿ (PR) ಹೊಂದಿರುವ ಹುಡುಗಿಯೊಂದಿಗೆ ಸುಖಾನಂದ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪಂಜಾಬ್ ವಿಧಾನಸಭೆಯಲ್ಲಿ 11 ಎಎಪಿ ಶಾಸಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

click me!