ತಮಾಷೆಯೇ ಅಲ್ಲ! ಕೊರೋನಾಪೀಡಿತನ ಚಿಕಿತ್ಸೆಗಾಗಿ ಪಿಪಿಇ ಕಿಟ್‌ ಧರಿಸಿ ಬೈಕ್‌ ಸವಾರಿ

By Kannadaprabha News  |  First Published Aug 14, 2020, 7:26 PM IST

ಕೊರೋನಾ ವೈರಸ್‌ ಸೋಂಕಿತರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಬೇಕು. ಆದರೆ, ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಜಿಲ್ಲೆಯಲ್ಲಿ ವಲಸೆ ಕಾರ್ಮಿಕನೊಬ್ಬ ಜ್ವರದಿಂದ ಬಳಲುತ್ತಿದ್ದು, ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಆ್ಯಂಬುಲೆನ್ಸ್‌ ಸಿಗದೇ ಪರದಾಡುತ್ತಿದ್ದ. 


ಕಲ್ಕತ್ತಾ (ಆ. 14): ಕೊರೋನಾ ವೈರಸ್‌ ಸೋಂಕಿತರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಬೇಕು. ಆದರೆ, ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಜಿಲ್ಲೆಯಲ್ಲಿ ವಲಸೆ ಕಾರ್ಮಿಕನೊಬ್ಬ ಜ್ವರದಿಂದ ಬಳಲುತ್ತಿದ್ದು, ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಆ್ಯಂಬುಲೆನ್ಸ್‌ ಸಿಗದೇ ಪರದಾಡುತ್ತಿದ್ದ.

ಈ ಸುದ್ದಿಯನ್ನು ತಿಳಿದ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡ ಸತ್ಯಕಾಮ್‌ ಪಟ್ನಾಯಕ್‌ ಎನ್ನುವವರು ಪಿಪಿಇ ಕಿಟ್‌ ಖರೀದಿಸಿ, ಬೈಕ್‌ನಲ್ಲಿ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಟಿಎಂಸಿ ಮುಖಂಡನ ಮಾನವೀಯ ಕೃತ್ಯ ಪ್ರಶಂಸೆಗೆ ಪಾತ್ರವಾಗಿದೆ.

Latest Videos

ಕೊರೊನಾ ನಿಯಂತ್ರಣಕ್ಕೆ ಹೊಸ ಯಂತ್ರ ಅಳವಡಿಕೆ; ಬೆಂಗಳೂರು ರೈಲು ನಿಲ್ದಾಣಕ್ಕೆ ಎಲ್ಲರ ಮೆಚ್ಚುಗೆ!

click me!