
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ವೈರಾಣುವಿನ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ಸಹ ಜಾಗತಿಕ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಘೋಷಿಸಿದೆ. ಈ ಹಿನ್ನೆಲೆ 2 - 3 ವರ್ಷಗಳಿಂದ ಕೋವಿಡ್ - 19 ಸೋಂಕಿನಿಂದ ಭಯಭೀತರಾಗಿದ್ದ ಜನತೆ, ಈಗ ಹೊಸ ವೈರಾಣು ಸೋಂಕಿಗೆ ಹೆದರುವಂತಾಗಿದೆ. ಇನ್ನು, ಮಂಕಿಪಾಕ್ಸ್ ಹರಡದಂತೆ ತಡೆಯಲು ಜನತೆ ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಮಂಕಿಪಾಕ್ಸ್ ಪ್ರಕರಣಗಳನ್ನು ಹೆಚ್ಚು ಹರಡದಂತೆ ತಡೆಯಲು ನಾವು ಕೋವಿಡ್ - 19 ವಿರುದ್ಧದ ಸುರಕ್ಷತಾ ಪ್ರೋಟೋಕಾಲ್‌ಗಳನ್ನೇ ಪಾಲಿಸಬೇಕು ಎಂದು ದೆಹಲಿಯ ಲೋಕನಾಯಕ್ ಜಯ ಪ್ರಕಾಶ್ ಆಸ್ಪತ್ರೆಯ ವೈದ್ಯರು ಭಾನುವಾರ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗಿರುವ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಈ ಸೋಂಕಿತರ ಸಂಖ್ಯೆ 4 ಕ್ಕೆ ಏರಿಕೆಯಾಗಿರುವ ಹಿನ್ನೆಲೆ ಭಾರತ ಈ ವೈರಾಣುವನ್ನು ತಡೆಯಲು ಹೆಚ್ಚು ಜಾಗ್ರತೆ ವಹಿಸುತ್ತಿದೆ ಎಂದು ತಿಳಿದುಬಂದಿದೆ.
4th Monkeypox Case in India: ವಿದೇಶಕ್ಕೇ ಹೋಗದ ವ್ಯಕ್ತಿಗೆ ಬಂತು ಮಂಕಿಪಾಕ್ಸ್..!
ಮಂಕಿಪಾಕ್ಸ್ ಸೋಂಕಿಗೀಡಾಗಿರುವ ವ್ಯಕ್ತಿ 2 ದಿನಗಳ ಹಿಂದೆ ಜ್ವರ ಹಾಗೂ ಚರ್ಮ ಸೋಂಕು ಎಂದು ಆಸ್ಪತ್ರೆಗೆ ದಾಖಲಾಗಿದ್ದರು, ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಲೋಕನಾಯಕ್ ಜಯ ಪ್ರಕಾಶ್ ಆಸ್ಪತ್ರೆಯ ವೈದ್ಯ ಸುರೇಶ್ ಕುಮಾರ್ ಹೇಳಿದ್ದಾರೆ. ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 6 ಐಸೊಲೇಷನ್ ಬೆಡ್‌ಗಳಿವೆ. ಅಗತ್ಯವಿದ್ದಲ್ಲಿ, ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಹಾಗೂ, ಕೇರಳದಲ್ಲಿ ವೈರಾಣುವಿನ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಂದರೆ ಕಳೆದ ವಾರವೇ ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಮಂಕಿಪಾಕ್ಸ್ ಸೋಂಕಿತರನ್ನು ಹೇಗೆ ನೋಡಿಕೊಳ್ಳಬೇಕು, ಯಾವ ರೀತಿ ಚಿಕಿತ್ಸೆ ನೀಡಬೇಕೆಂದು ತರಬೇತಿ ನೀಡಲಾಗಿದೆ ಎಂದೂ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಸಿಬ್ಬಂದಿಗಳಿಗೆ ಈಗಾಗಲೇ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿದೆ ಎಂದೂ ಅವರು ಹೇಳಿದರು.
ಕೋವಿಡ್ - 19 ಸುರಕ್ಷತಾ ಪ್ರೊಟೋಕಾಲ್ ಪಾಲಿಸಿ: ವೈದ್ಯ
“ಮಂಕಿಪಾಕ್ಸ್ ಚಿಕಿತ್ಸೆಗಾಗಿ ಮಾಸ್ಕ್‌ಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರದ ವಿಷಯದಲ್ಲಿ - ಕೋವಿಡ್ -19 ನಂತೆಯೇ ಪ್ರೋಟೋಕಾಲ್ ಇರುತ್ತದೆ. ಈ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಮಾಸ್ಕ್‌ಗಳನ್ನು ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿ. ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ವೈದ್ಯರಿಗೆ ವರದಿ ಮಾಡಿ” ಎಂದು ಡಾ. ಕುಮಾರ್ ಸಲಹೆ ನೀಡಿದರು.
ಅಲ್ಲದೆ, ವಿದೇಶ ಪ್ರಯಾಣದ ಇತಿಹಾಸ ಹೊಂದಿರುವ ಜನರು ಈ ಸೋಂಕಿಗೀಡಾಗುವ ಹೆಚ್ಚು ಸಾಧ್ಯತೆ ಹೊಂದಿದ್ದಾರೆ ಎಂದೂ ಅವರು ವಿವರಿಸಿದರು. "ಕೋ ಮಾರ್ಬಿಡಿಟಿಯನ್ನು ಹೊಂದಿರುವವರು ವೈರಾಣು ಸೋಂಕಿಗೀಡಾಗುವ ಹೆಚ್ಚು ದುರ್ಬಲರಾಗಿದ್ದಾರೆ. ಇದು ಸ್ವಯಂ-ಸೀಮಿತಗೊಳಿಸುವ ರೋಗವಾಗಿದ್ದು, 99% ರಷ್ಟು ಗುಣಪಡಿಸುವ ದರವನ್ನು ಹೊಂದಿದೆ. ಮೃತಪಟ್ಟವರ ಶೇಕಡಾವಾರು ಕೇವಲ 1% ಆಗಿದೆ, ”ಎಂದು ಅವರು ಹೇಳಿದರು.
ದೆಹಲಿ ಸಿಎಂ ಟ್ವೀಟ್
"ನಮ್ಮ ಅತ್ಯುತ್ತಮ ತಂಡವು ಮಂಕಿಪಾಕ್ಸ್ ವೈರಾಣು ಹರಡುವುದನ್ನು ತಡೆಗಟ್ಟಲು ಮತ್ತು ದೆಹಲಿಯವರನ್ನು ರಕ್ಷಿಸಲು ಪ್ರಯತ್ನ ಮಾಡುತ್ತಿದೆ’’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮಂಕಿಪಾಕ್ಸ್, ಕೋವಿಡ್ - 19 ಮಾತ್ರವಲ್ಲ ಈ ರೋಗಗಳ ಬಗ್ಗೆಯೂ ಎಚ್ಚರವಿರಲಿ..!
WHO ಶನಿವಾರ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಪರೋಕ್ಷ ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತದೆ. ಮುಖಾಮುಖಿ, ಚರ್ಮದಿಂದ ಚರ್ಮ ಮತ್ತು ಉಸಿರಾಟದ ದ್ರವ ಸೇರಿದಂತೆ ಸಾಂಕ್ರಾಮಿಕ ಚರ್ಮ ಅಥವಾ ಗಾಯಗಳೊಂದಿಗೆ ನೇರ ಸಂಪರ್ಕದ ಮೂಲಕ ಒಬ್ಬರು ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವಿಕೆ ಸಂಭವಿಸಬಹುದು.
ಜಾಗತಿಕವಾಗಿ, 75 ದೇಶಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು ಇದುವರೆಗೆ ಸೋಂಕಿಗೆ ಐದು ಸಾವುಗಳು ಸಂಭವಿಸಿವೆ. ಆಗ್ನೇಯ ಏಷ್ಯಾ ಪ್ರದೇಶದಲ್ಲಿ, ಭಾರತವನ್ನು ಹೊರತುಪಡಿಸಿ, ಥೈಲ್ಯಾಂಡ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ