ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಎರಡು ದಿನಗಳ ಹಿಂದಷ್ಟೇ ಭೂಮಿಯಲ್ಲಿ ಭೂಕಂಪನ ಸಂಭವಿಸಿತ್ತು. ಇದೀಗ ದೆಹಲಿಯಲ್ಲಿ ಪ್ರಬಲ ಭೂಕಂಪನವಾಗಿದೆ.
ನವದೆಹಲಿ(ನ.06) ವಾಯು ಮಾಲಿನ್ಯದಿಂದ ತತ್ತರಿಸಿರುವ ಜನತೆಗೆ ಪದೇ ಪದೇ ಭೂಕಂಪದ ಆತಂಕವೂ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಭೂಕಂಪನ ಸಂಭವಿಸಿತ್ತು. ಇದೀಗ ಮತ್ತೆ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ಈ ಬಾರಿ ಪ್ರಬಲ ಭೂಕಂಪನವಾಗಿದೆ ಎಂದು ವರದಿಗಳು ಹೇಳುತ್ತಿದೆ. ದೆಹಲಿ ಸುತ್ತಮುತ್ತಲಿನ ವಲಯದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ದೆಹಲಿ ಭೂಕಂಪದ ಕೇಂದ್ರ ಬಿಂದು ನೇಪಾಳ. ನೇಪಾಳದಲ್ಲಿನ ಭೂಕಂಪದ ತೀವ್ರತೆ 5.2 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಈ ಪ್ರಬಲ ಭೂಕಂಪದಿಂದ ದೆಹಲಿಯ್ಲೂ ಭೂಮಿ ಕಂಪಿಸಿದೆ. ಶುಕ್ರವಾರ ರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪನವಾಗಿತ್ತು. ಈ ಕಂಪನದಿಂದ ದೆಹಲಿಯಲ್ಲೂ ಭೂಮಿ ಕಂಪಿಸಿತ್ತು. ಆದರೆ ತೀವ್ರತೆ ಕಡಿಮೆ ಇತ್ತು. ಇದೀಗ ದೆಹಲಿಯಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ.
ಈ ಭೂಕಂಪದ ಪರಿಣಾಮ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭೂಕಂಪನದ ಅನುಭವವಾಗುತ್ತಿದ್ದಂತೆ ಜನರು ತಮ್ಮ ತಮ್ಮ ಮನೆ, ಕಟ್ಟಡ, ಕಚೇರಿಯಿಂದ ಹೊರಬಂದಿದ್ದಾರೆ.
ಶುಕ್ರವಾರ ತಡರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆಯಿಂದ ರಾಷ್ಟ್ರ ರಾಜಧಾನಿ ವಲಯದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಭೂಕಂಪದ ಕೇಂದ್ರಸ್ಥಾನ 10 ಕಿ.ಮೀ. ಆಳದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿದ ವರದಿಯಾಗಿಲ್ಲ. ದೆಹಲಿ ಹಾಗೂ ಸುತ್ತಮುತ್ತಲ ವಲಯದ ಜನ ಭೂಮಿ ಕಂಪಿಸಿದ ಬೆನ್ನಲ್ಲೇ ಮನೆಗಳಿಂದ ಹೊರಬಂದಿದ್ದಾರೆ. ಅ.3ರಂದು ಸಹ ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆಯೂ ದೆಹಲಿಯಲ್ಲಿ ಕಂಪನದ ಅನುಭವವಾಗಿತ್ತು. ಕಳೆದ 1 ತಿಂಗಳ ಅವಧಿಯಲ್ಲಿ ನೇಪಾಳದಲ್ಲಿ ಒಟ್ಟು 4ನೇ ಬಾರಿ ಭೂಕಂಪ ಸಂಭವಿಸುತ್ತಿದೆ.
ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ ಪಶ್ಚಿಮಕ್ಕೆ 500 ಕಿ.ಮೀ. ದೂರದಲ್ಲಿರುವ ಜಾಜರ್‌ಕೋಟ್ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರಬಿಂದುವಿದ್ದು, ಶುಕ್ರವಾರ ರಾತ್ರಿ 11.47ಕ್ಕೆ ಭೂಮಿ ಕಂಪಿಸಿದೆ. 6.4 ತೀವ್ರತೆಯ ಕಂಪನ ಇದಾಗಿದ್ದರಿಂದ ನೂರಾರು ಮನೆಗಳು ನೆಲಕಚ್ಚಿವೆ.
ದೆಹಲಿ, ರಾಜಧಾನಿ ವ್ಯಾಪ್ತಿ, ಬಿಹಾರ ಸೇರಿದಂತೆ ಕೆಲ ವಲಯದಲ್ಲೂ ಭೂಕಂಪನದ ಅನುಭವವಾಗಿತ್ತು.