'ಸಂಜಯ್ ರಾವತ್‌ಗೆ ಕಿಮ್ಮತ್ತಿಲ್ಲ, ಪಾಲುದಾರ ಪಕ್ಷದ ಅಧ್ಯಕ್ಷರಿಂದಲೇ ತಪರಾಕಿ!

By Suvarna NewsFirst Published May 10, 2021, 4:58 PM IST
Highlights

ಮರಾಠ ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯ/ ಮೀಸಲಾತಿ ವಿಚಾರದಲ್ಲಿ ಬಿಜೆಪಿಯದ್ದೇ ತಪ್ಪು ಎಂದ ಕಾಂಗ್ರೆಸ್/  ಜತೆಗಾರ ಪಕ್ಷದ ನಾಐಕ ಸಂಜಯ್ ರಾವತ್ ಮೇಲೂ ವಾಗ್ದಾಳಿ/ ಸಂಜಯ್ ರಾವತ್ ಮಾತಿಗೆ ಬೆಲೆ ಕೊಡುವ ಅಗತ್ಯ  ಇಲ್ಲ

ಮುಂಬೈ(ಮೇ 10)  ಮೀಸಲಾತಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಸಿಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಮೀಸಲು ಪ್ರಮಾಣ ಯಾವ ಕಾರಣಕ್ಕೂ ಶೇ.  50  ನ್ನು ಮೀರಬಾರದು ಎಂದು ತಿಳಿಸಿದೆ.

ಆದರೆ ಈ ವಿಚಾರ ಮಾಹಾರಾಷ್ಟ್ರದಲ್ಲಿ ರಾಜಕೀಯ ವಾಕ್ ಸಮರಕ್ಕೆ ವೇದಿಕೆ ಮಾಡಿಕೊಟ್ಟಿದೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾತೋಳೆ ಬಿಜೆಪಿ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮೇಲೆ ನೇರ ಆರೋಪ ಮಾಡಿದ್ದಾರೆ. ಮರಾಠ ಸಮುದಾಯಕ್ಕೆ ನ ಬಿಜೆಪಿಯಿಂದ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

ಮರಾಠಾ ಸಮುದಾಯಕ್ಕೆ  ಮೀಸಲು ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ಪ್ರಯತ್ನ ಮಾಡಬೇಕೋ ಎಲ್ಲವನ್ನು ಮಾಡಿದೆ. ಕಾಂಗ್ರೆಸ್ ಮುಂದೆ  ನಿಂತು ಹೋರಾಟ ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮಾರ್ಗದರ್ಶನ ನೀಡಬೇಕಿದ್ದು ಏನೂ ಕೇಳಿಸದಂತೆ ಕುಳಿತುಕೊಂಡಿದೆ ಎಂದು ಆರೋಪಿಸಿದ್ದಾರೆ.

'ನೆಹರು-ಗಾಂಧಿ ಕುಟುಂಬಗಳು ರೂಪಿಸಿದ ಯೋಜನೆ ಭಾರತವನ್ನು ಕಾಪಾಡುತ್ತಿದೆ'

ಇನ್ನೊಂದು ಕಡೆ ಮೈತ್ರಿ ಪಕ್ಷ ಶಿವಸೇನೆಯ ಸಂಜಯ್ ರಾವತ್ ಮೇಲೆಯೂ ಕಿಡಿಕಾರಿರುವ ನಾನಾ, ಸಂಜಯ್ ರಾವತ್ ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾವು ಯಾರೂ ಗಮನ ನೀಡಬೇಕಿಲ್ಲ, ನಾವು ಶಿವಸೇನೆ ಮುಖವಾಣಿ ಸಾಮ್ನಾ ಓದಬೇಕಿಲ್ಲ.  ಸಂಜಯ್ ರಾವತ್ ಬೇರೆಯವರನ್ನು ಟೀಕೆ ಮಾಡುವುದನ್ನೇ ಬೆಳವಣಿಗೆ ಎಂದುಕೊಂಡಿದ್ದಾರೆ. ಟೀಖೆ ಮಾಡುವುದರಿಂದ ಪಕ್ಷ ಬೆಳೆಯುತ್ತದೆ ಎಂದರೆ ಅದು ಅವರ ಮೂರ್ಖತನ ಎಂದಿದ್ದಾರೆ.

 

click me!