ಕೊರೋನಾ ಕೇರ್ ಸೆಂಟರ್‌ಗೆ ಬಿಗ್ ಬಿ  2 ಕೋಟಿ ದೇಣಿಗೆ

By Suvarna NewsFirst Published May 10, 2021, 3:24 PM IST
Highlights

ದೇಶವನ್ನು ಕಾಡುತ್ತಿರುವ ಕೊರೋನಾ ಎರಡನೇ ಅಲೆ/ ಕೊವೀಡ್ ಕೇರ್ ಕೇಂದ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್  2  ಕೋಟಿ ರೂ ದೇಣಿಗೆ/   ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾರಿಂದ ಮಾಹಿತಿ

ನವದೆಹಲಿ(ಮೇ 10) ನವದೆಹಲಿಯ ರಕಾಬ್ ಗಂಜ್ ನ ಗುರುದ್ವಾರದಲ್ಲಿ ಸಿದ್ಧವಾಗುತ್ತಿರುವ ಕೊವೀಡ್ ಕೇರ್ ಕೇಂದ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್  2  ಕೋಟಿ ರೂ ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

ದಿಲ್ಲಿಯಲ್ಲಿನ ಕೋರೋನಾ ಪರಿಸ್ಥಿತಿಗೆ ಸಂಬಂಧಿಸಿ ಮೇರುನಟ ನನಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡರು ಎಂದು ಹೇಳಿದ್ದಾರೆ.

ರಕಾಬ್ ಗಂಜ್ ನ ಗುರುದ್ವಾರದಲ್ಲಿ  ಕೇರ್ ಸೆಂಟರ್ ತೆರೆಯಲಾಗುತ್ತಿದ್ದು 300  ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡುವ ತೀರ್ಮಾನ ಮಾಡಲಾಗಿದೆ.

ಕೊರೋನಾ ಜತೆಗೆ ಕ್ಯಾನ್ಸರ್ ಗುಣಪಡಿಸಬಲ್ಲ ಲಸಿಕೆ ಮಾರುಕಟ್ಟೆಗೆ

ತಮ್ಮ ಬ್ಲಾಗ್ ನಲ್ಲಿ ಅಮಿತಾಬ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಸಾರ್ವಜನಿಕವಾಗಿ ಇದನ್ನು ಮಾತನಾಡಿ ಈ ಸಂದರ್ಭದಲ್ಲಿ ಪ್ರಚಾರ ಪಡೆದುಕೊಳ್ಳುವುದು ಬೇಡ ಎಂದು ಎನಿಸಿತು ಎಂಬುದನ್ನು ತಿಳಿಸಿದ್ದಾರೆ.

ಅಮಿತಾಬ್ ಬಚ್ಚನ್, ಬೆನ್ ಅಫ್ಲೆಕ್, ಕ್ರಿಸ್ಸಿ ಟೀಜೆನ್, ಜಿಮ್ಮಿ ಕಿಮ್ಮೆಲ್, ಸೀನ್ ಪೆನ್, ಡೇವಿಡ್ ಲೆಟರ್‌ಮ್ಯಾನ್  ರಂತಹ ದಿಗ್ಗಜರು ವಾಕ್ಸ್ ಲೈವ್ ನಲ್ಲಿ  ಸಂವಾದ ನಡೆಸಿದ್ದರು. ಕೊರೋನಾದಿಂದ ಜಗತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ಬಲ್ ಸಿಟಿಜನ್ ನಿಧಿಸಂಗ್ರಹ ಕನ್ಸರ್ಟ್ 302 ಮಿಲಿಯನ್ ಡಾಲರ್ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಬಿಗ್ ಬಿ ಹೊರತಾಗಿ, ಸೆಲೆನಾ ಗೊಮೆಜ್ ಆಯೋಜಿಸಿದ್ದ ಸಂವಾದದಲ್ಲಿ ಎಡ್ಡಿ ವೆಡ್ಡರ್, ಫೂ ಫೈಟರ್ಸ್, ಜೆ ಬಾಲ್ವಿನ್, ಎಚ್.ಇ.ಆರ್.,  ಲೋಪೆಜ್ ಭಾಗವಹಿದಿದ್ದು ಈ ತಿಂಗಳ ಆರಂಭದಲ್ಲಿಯೇ ಶೂಟ್ ಆಗಿತ್ತು.

ದೇಶದಲ್ಲಿ ಪ್ರತಿ ದಿನ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿವೆ. ಈ ಸಂದರ್ಭದಲ್ಲಿ ಬಿಗ್ ಬಿ ಮಾದರಿ ನಡೆಯನ್ನು ಹಾಕಿಕೊಟ್ಟಿದ್ದಾರೆ.  ನಟ ಸೋನು ಸೂದ್ ಕೊರೋನಾ ಆರಂಭದಿಂದಲೂ ನೆರವು ನೀಡಿಕೊಂಡೇ ಬಂದಿದ್ದರು. 

T 3900 - Privileged to be a part of the concert .. and the fight for India .. pic.twitter.com/vlyhKVc6QG

— Amitabh Bachchan (@SrBachchan)

He often said;
“आप पैसों की चिंता मत कीजिए... बस कोशिश करिये कि हम ज़्यादा से ज़्यादा जानें बचा पाएँ!” Ji contributed a huge Amt & also took the pain to ensure oxygen concentrators get shipped frm abroad & reach on time

He is not just a REEL Hero but a Real life Hero https://t.co/5NEFgsZid5 pic.twitter.com/DA1onuT4RE

— Manjinder Singh Sirsa (@mssirsa)

 

 

click me!