
ನವದೆಹಲಿ(ಅ.22): ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತ(India) ಮತ್ತು ಚೀನಾಗಳ(China) ಮಧ್ಯೆ ಮುಸುಕಿನ ಗುದ್ದಾಟ ಮುಂದುವರಿದಿರುವ ನಡುವೆಯೇ, ಚೀನಾದ ಗಡಿ ಹಂಚಿಕೊಳ್ಳುವ ಅರುಣಾಚಲ ಪ್ರದೇಶದ(Arunachal Pradesh) ತವಾಂಗ್ ಸೆಕ್ಟರ್‌ನಲ್ಲಿ(Tawang Sector) ಭಾರತೀಯ ಸೇನೆಯು ಶತ್ರು ದೇಶದ ಟ್ಯಾಂಕರ್ ಅನ್ನು ಧ್ವಂಸಗೊಳಿಸುವ ತಾಲೀಮು ಪ್ರದರ್ಶಿಸಿತು. ತನ್ಮೂಲಕ ಗಡಿ ವಿಸ್ತರಣಾ ನೀತಿಯೊಂದಿಗೆ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಭಾರತ ಸಡ್ಡು ಹೊಡೆದಿದೆ.
ದಟ್ಟ ಮಂಜು ಆವರಿಸಿಕೊಂಡಿರುವ ಪರ್ವತ ಪ್ರದೇಶಗಳಲ್ಲಿ ಅಡಗಿ ಕುಳಿತು ಶತ್ರುದೇಶದ ಕಾರಾರಯಚರಣೆ ಮೇಲೆ ಕಣ್ಣಿಡುವ ಯೋಧರು, ಬಂಕರ್‌ಗಳ ಮರೆಯಲ್ಲಿ ನಿಂತು ಶಸ್ತ್ರಸಜ್ಜಿತರಾಗುವ ಸೈನಿಕರು, ಟ್ಯಾಂಕ್ ವಿರೋಧಿ ಮಾರ್ಗದರ್ಶನ ಕ್ಷಿಪಣಿಯನ್ನು ಸಕ್ರಿಯಗೊಳಿಸುವುದು. ಕೊನೆಗೆ ಈ ಕ್ಷಿಪಣಿ ಮುಖಾಂತರ ಶತ್ರುಗಳ ಟ್ಯಾಂಕರ್ ಅನ್ನು ಧ್ವಂಸಗೊಳಿದ ಭಾರತೀಯ ಸೇನೆಯ ತಾಲೀಮು ವಿಡಿಯೋವನ್ನು ಗುರುವಾರ ಬಹಿರಂಗಪಡಿಸಲಾಗಿದೆ.
ಅಲ್ಲದೆ ಎಟಿಜಿಎಂ ವ್ಯವಸ್ಥೆಯನ್ನು ನಿಷ್ಕಿ್ರಯಗೊಳಿಸುವ ಸೈನಿಕರು ಆ ಪ್ರದೇಶದಿಂದ ಮತ್ತೊಂದು ದಿಕ್ಕಿಗೆ ಓಡುತ್ತಾರೆ. ಯಾಕೆಂದರೆ ಆ ಸ್ಥಳದ ಮೇಲೆ ಶತ್ರುದೇಶ ದಾಳಿ ನಡೆಸುವ ಸಾಧ್ಯತೆಯಿದ್ದು, ಅದರಿಂದ ತಪ್ಪಿಸಿಕೊಳ್ಳಲು ಈ ಕ್ರಮ ಎಂದು ಸೈನಿಕರೊಬ್ಬರು ವಿವರಣೆ ನೀಡುತ್ತಾರೆ.
ಚೀನಾವನ್ನು ಟೀಕಿಸುವಾಗ ಭಾರತದ ಪ್ರತಿನಿಧಿ ಮೈಕ್ ಆಫ್: ವಿವಾದ
ಪಾಕಿಸ್ತಾನ ಮತ್ತು ಚೀನಾ ನಡುವೆ ಸಂಪರ್ಕ ಕಲ್ಪಿಸುವ ಚೀನಾ- ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಭಾರತದ ಪ್ರತಿನಿಧಿ ಆಕ್ಷೇಪ ವ್ಯಕ್ತಪಡಿಸುವ ಸಮಯದಲ್ಲಿ ಅವರ ಮೈಕ್ ಆಫ್ ಆಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಚೀನಾ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಂಡಿದೆ ಎಂದು ಭಾರತ ಆರೋಪಿಸಿದೆ.
ಚೀನಾದ ಈ ಬೃಹತ್ ಯೋಜನೆಯ ಕುರಿತು ಮಾತನಾಡಲು ಚೀನಾ ವಿಶ್ವಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿ ಪ್ರಿಯಾಂಕ ಸೊಹೋನಿ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಮೈಕ್ ಆಫ್ ಆಗಿದೆ. ಅಂತಾರಾಷ್ಟ್ರೀಯ ಲಾಭವನ್ನು ಸಮತೋಲಿತವಾಗಿ ತರಬೇಕು ಎಂದು ಭಾರತ ಬಯಸುತ್ತದೆ. ಆದರೆ ಈ ಯೋಜನೆಯಲ್ಲಿ ಚೀನಾ ತನ್ನ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ