Binoy Viswam: ಕ್ಷಮೆ ಕೇಳಲು ನಾವು ಸಾವರ್ಕರ್‌ ಅಲ್ಲ : ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ!

By Suvarna NewsFirst Published Dec 1, 2021, 1:10 PM IST
Highlights

*ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ
*ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್
*ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ : ಸಂಸದ!

ನವದೆಹಲಿ(ಡಿ. 01): ಸಂಸತ್ತಿನ  ಮುಂಗಾರು ಅಧಿವೇಶನದಲ್ಲಿ (Parliament Winter Session) ದುರ್ವರ್ತನೆ ತೋರಿದ ಕಾರಣಕ್ಕಾಗಿ ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡ 12 ರಾಜ್ಯಸಭಾ ಸದಸ್ಯರ ( Suspension Rajya Sabha Members) ಮೇಲಿನ ಶಿಸ್ತು ಕ್ರಮವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ. ಆದರೆ, ಸದಸ್ಯರು ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿದರೆ (apologise) ಅಮಾನತು ರದ್ದು ವಿಷಯವನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮತ್ತು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪೀಯೂಷ್‌ ಗೋಯಲ್‌ (Piyush Goyal) ಭರವಸೆ ನೀಡಿದ್ದಾರೆ.

ಈ ಬೆನ್ನಲ್ಲೇ ಅಮಾನತುಗೊಂಡ ಸದಸ್ಯರಲ್ಲಿ ಒಬ್ಬರಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (Communist Party of India)ನ ಬಿನೋಯ್ ವಿಶ್ವಂ ( Binoy Viswam) ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಷಮೆಯಾಚಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. “ಯಾವ ಕ್ಷಮೆಯಾಚನೆ? ಕ್ಷಮೆ ಕೇಳಲು ನಾವು ಸಾವರ್ಕರ್ ಅಲ್ಲ. ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ’’ ಎಂದು ವಿಶ್ವಂ ಹೇಳಿದ್ದಾರೆ.

Suspension of 12 Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

"ಇದು ಸಂಸತ್ತಿನ ಕಾರ್ಯವಿಧಾನವನ್ನು ಮತ್ತು ಪ್ರತಿಪಕ್ಷಗಳನ್ನು ಕೀಳಾಗಿ ನೋಡುವ ಸರ್ಕಾರವಾಗಿದೆ. ಇದು ವಿರೋಧದ ಅಗತ್ಯವಿಲ್ಲ ಎಂದು ನಂಬುವ ಸರ್ಕಾರವಾಗಿದೆ. ನಾವು ಅವರ ಮುಂದೆ ಬಾಗುವುದಿಲ್ಲ" ಎಂದು ಬಿನೋಯ್ ಹೇಳಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಲು ಕಾನೂನು ಮಾರ್ಗದಲ್ಲಿ ಹೋರಾಟ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಆದರೆ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಮತ್ತು ಅನಿಲ್ ದೇಸಾಯಿ (Anil Desai) ಈ ಹೇಳಿಕೆಯಿಂದ ದೂರ ಉಳಿದಿದ್ದಾರೆ.

ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್!

"ಯಾವುದಕ್ಕೆ ಕ್ಷಮೆಯಾಚಿಸಬೇಕು? ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ? ಎಂದಿಗೂ ಇಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ (Rahul Gandhi Tweet) ಮಾಡಿದ್ದಾರೆ. ನವೆಂಬರ್ 29, ಸೋಮವಾರದಂದು ಸಂಪೂರ್ಣ ಚಳಿಗಾಲದ ಅಧಿವೇಶನಕ್ಕೆ ಅಮಾನತುಗೊಂಡಿರುವ 12 ಸಂಸದರಲ್ಲಿ ಕಾಂಗ್ರೆಸ್‌ನ (Congress) ಆರು, ಟಿಎಂಸಿ (TMC) ಮತ್ತು ಶಿವಸೇನೆಯಿಂದ (Shivasena) ತಲಾ ಇಬ್ಬರು ಮತ್ತು ಸಿಪಿಐ(ಎಂ) ಮತ್ತು ಸಿಪಿಐನ (CPI) ತಲಾ ಒಬ್ಬರು ಇದ್ದಾರೆ.

 

किस बात की माफ़ी?
संसद में जनता की बात उठाने की?

बिलकुल नहीं!

— Rahul Gandhi (@RahulGandhi)

 

ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು

ಅಧಿವೇಶನದಿಂದ ಹೊರನಡೆದ ನಂತರ, ಪ್ರತಿಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದೊಳಗಿನ ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು, ಸರ್ಕಾರ ಮತ್ತು ಅದರ "ಸರ್ವಾಧಿಕಾರಿ ಧೋರಣೆ" ವಿರುದ್ಧ ಘೋಷಣೆಗಳನ್ನು ಎತ್ತಿದರು ಜತೆಗೆ ಈ ವಿಷಯದ ಬಗ್ಗೆ ತಮ್ಮ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಹೇಳಿದರು. ಮಧ್ಯಾಹ್ನ ಭೋಜನದ ನಂತರ ಸದನ ಪುನರಾರಂಭವಾದಾಗ, ಸದನದ ನಾಯಕ ಪಿಯೂಷ್ ಗೋಯಲ್ ಅವರು ಸೋಮವಾರ 12 ಸದಸ್ಯರನ್ನು ಸದನದಿಂದ ಅಮಾನತುಗೊಳಿಸಿರುವುದನ್ನು ವಿವರಿಸಿದರು, ಈ ಉದ್ದೇಶಕ್ಕಾಗಿ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು. ಮುಂಗಾರು ಅಧಿವೇಶನದಲ್ಲಿ ಸದನಕ್ಕೆ ಅಡ್ಡಿಪಡಿಸಿದ ತಪ್ಪಿತಸ್ಥರೆಲ್ಲರೂ ಸಭಾಪತಿಯ ಬಳಿ ಮಾತ್ರವಲ್ಲದೆ ಸದನ ಮತ್ತು ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

Tathagata Roy Tweet: ಬಿಜೆಪಿ ಕಾರ್ಯಕರ್ತರಿಂದ ತೃಣಮೂಲ ಕಾಂಗ್ರೆಸ್‌ ಪರ ಕೆಲಸ: ತಿಂಗಳಿಗೆ 13,000 ಸಂಬಳ!

ಮಂಗಳವಾರ (ನ. 30) ರಾಜ್ಯಸಭೆ ಕಲಾಪ ಆರಂಭವಾಗುತ್ತಲೇ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು 12 ಸದಸ್ಯರ ಅಮಾನತು ಆದೇಶ ರದ್ದುಪಡಿಸಬೇಕು. ರಾಜ್ಯಸಭೆಯ ಕಲಾಪದ ನಿಯಮಗಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

click me!