ನಾವು 25 ಕೋಟಿ, ಭಾರತದ ಸಂವಿಧಾನ ಕಿತ್ತು ಶರಿಯಾ ಕಾನೂನು ತರುತ್ತೇವೆ: ಸೋಷಿಯಲ್ ಮೀಡಿಯಾದ ಈ ವೀಡಿಯೋ ಡೀಪ್ ಫೇಕಾ?

Published : Nov 07, 2023, 03:48 PM ISTUpdated : Nov 08, 2023, 09:52 PM IST
ನಾವು 25 ಕೋಟಿ, ಭಾರತದ ಸಂವಿಧಾನ ಕಿತ್ತು ಶರಿಯಾ ಕಾನೂನು ತರುತ್ತೇವೆ: ಸೋಷಿಯಲ್ ಮೀಡಿಯಾದ ಈ ವೀಡಿಯೋ ಡೀಪ್ ಫೇಕಾ?

ಸಾರಾಂಶ

ಒಟ್ಟ 5 ಲಕ್ಷದಷ್ಟಿರುವ ಹಮಾಸ್ ಇಸ್ರೇಲ್ ನಡುಗಿಸುತ್ತಿದೆ. ನಾವು 25 ಕೋಟಿ ಇದ್ದೇವೆ. ಮೋದಿ, ಅಮಿತ್ ಶಾ ಕೇಳಿಸಿಕೊಳ್ಳಿ, ಭಾರತದ ಸಂವಿಧಾನ ಕಿತ್ತು ಹಾಕಿ ಶರಿಯಾ ಕಾನೂನು ಜಾರಿಗೆ ತರುತ್ತೇವೆ. ಮುಸ್ಲಿಂ ವ್ಯಕ್ತಿ ಹೇಳಿಕೆ ನೀಡಲಾಗಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಹೇಳಿಕೆಗೆ ಆಕ್ರೋಶಗಳು ವ್ಯಕ್ತವಾಗಿದೆ. 

ನವದೆಹಲಿ(ನ.07) ಸಾಮಾಜಿಕ ಮಾಧ್ಯಮದಲ್ಲೊಂದು ವಿಡಿಯೋ ಹರಿದಾಡುತ್ತಿದೆ. ಮುಸ್ಲಿಂ ವ್ಯಕ್ತಿ ನೀಡಿದ ಹೇಳಿಕೆ ಅನ್ನೋ ಈ ವಿಡಿಯೋ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಭಾರತದಲ್ಲಿ  ಶರಿಯಾ ಕಾನೂನು ಜಾರಿಗೆ ತರುತ್ತೇವೆ. ಭಾರತದ ಸಂವಿದಾನ ಕಿತ್ತುಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ವಿವಾದವೂ ಜೋರಾಗಿದೆ. ಸಂವಿಧಾನ ಕಿತ್ತು ಹಾಕುವ ಬೆದರಿಕೆ ಹಾಕುತ್ತಿರುವ ಜಿಹಾದಿಗಳ ಕತೆ ಮುಗಿಸಿದದಿದ್ದರೆ, ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ಉಗ್ರರು ಕೇವಲ 5 ಲಕ್ಷ ಮಾತ್ರ. ಆದರೆ ನಾವು 25 ಕೋಟಿ ಮಂದಿ ಇದ್ದೇವೆ. ಮೋದಿ ಹಾಗೂ ಅಮಿತ್ ಶಾ ಸರಿಯಾಗಿ ಕೇಳಿಸಿಕೊಳ್ಳಿ. 25 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಮಂದಿ ಹೋರಾಟದಲ್ಲಿ ಪ್ರಾಣ ನೀಡಿದರೂ ನಾವು 20 ಕೋಟಿ ಇರುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಬದಲಿಸಿ,ಶರಿಯಾ ಕಾನೂನು ಜಾರಿಗೆ ತರುತ್ತೇವೆ ಎಂದಿರುವ ವಿಡಿಯೋ ಇದಾಗಿದೆ.

ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ

ಈ ಮಾತು ಹೇಳುತ್ತಿದ್ದಂತೆ ನರೆದಿದ್ದ ಈ ಮುಖಂಡನ ಬೆಂಬಲಿಗರು ಚಪ್ಪಾಳೆ, ಶಿಳ್ಳಿ ಹೊಡೆದು ಈ ಮಾತನ್ನು ಸ್ವಾಗತಿಸಿದ್ದಾರೆ. ಈ ವಿಡಿಯೋಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವು ಮೂಲಭೂತವಾದಿಗಳು ಶರಿಯಾ ಕಾನೂನು ಅಗತ್ಯವಿದೆ. ನಾವು ಅಲ್ಪಸಂಖ್ಯಾತರಲ್ಲ ಅನ್ನೋ ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ವೇಳೆ ಹೇಳಿಕೆಗೆ ಭಾರಿ ವಿರೋಧವೂ ವ್ಯಕ್ತವಾಗಿದೆ.

 

 

ಹಲವು ದೇಶದ ನಾಗರೀಕತೆಗಳೂ ಇಲ್ಲವಾಗಿದೆ. ಅಲ್ಲಿನ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಆಹಾರ ಪದ್ದತಿಗಳು ಕಾಣೆಯಾಗಿ ಮುಸ್ಲಿಂ ದೇಶಗಳಾಗಿದೆ. ಕೆಲವೇ ವರ್ಷಗಳಲ್ಲಿ ಯೂರೋಪ್ ಕೂಡ ಇದೇ ಪರಿಸ್ಥಿತಿ ತಲುಪುವತ್ತ ಸಾಗುತ್ತಿದೆ. ಹೀಗಾಗಿ ಭಾರತಕ್ಕೆ ಈ ಹೇಳಿಕೆ ಎಚ್ಚರಿಕೆಯಾಗಿದೆ. ಇಂತಹ ಜಿಹಾದಿಗಳನ್ನು ಮಟ್ಟಹಾಕದಿದ್ದರೆ  ಭಾರತಕ್ಕೂ ಅಪಾಯ ಕಾದಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲವರು ಇದು ಡೀಪ್ ಫೇಕ್ ವಿಡಿಯೋ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ರು: ಜಮೀರ್ ಅಹಮ್ಮದ್ ಖಾನ್

ಎಕ್ಸ್(ಟ್ವಿಟರ್), ರಿಡೆಟ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ಸತ್ಯಾಸತ್ಯತೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಇಂತದೊಂದು ವಿಡಿಯೋ ಹರಿದಾಡುತ್ತಿದ್ದು, ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!