ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್ ಆದೇಶ, ದೆಹಲಿ ಮಾತ್ರವಲ್ಲ ದೇಶದದೆಲ್ಲೆಡೆ ಪಟಾಕಿ ನಿಷೇಧ!

By Suvarna NewsFirst Published Nov 7, 2023, 1:25 PM IST
Highlights

ದೆಹಲಿ ವಾಯುಮಾಲಿನ್ಯ ವಿಪರೀತವಾಗಿರುವ ಕಾರಣ ಪಟಾಕಿ ಮೇಲಿನ ನಿಷೇಧ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಈ ನಿಷೇಧ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ, ದೇಶದ ಎಲ್ಲಾ ಭಾಗದಲ್ಲೂ ಅನ್ವಯಿಸಲಿದೆ ಎಂದು ಮಹತ್ವದ ಸೂಚನೆ ನೀಡಿದೆ

ನವದೆಹಲಿ(ನ.07) ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದೆಹಲಿ ಹಾಗೂ ಪಂಜಾಬ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದರ ಬೆನ್ನಲ್ಲೇ ದೀಪಾವಳಿ ಹಬ್ಬಕ್ಕೂ ಕೆಲ ನಿರ್ಬಂಧ ಮುಂದುವರಿಸಿದೆ. ದೆಹಲಿಯಲ್ಲಿ ಪಟಾಕಿ ನಿಷೇಧ ನಿರ್ಬಂಧ ತೆರವುಗೊಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದೇ ವೇಳೆ ಮತ್ತೊಂದು ಮಹತ್ವದ ಸೂಚನೆಯನ್ನೂ ನೀಡಿದೆ. ಪಟಾಕಿ ನಿಷೇಧ ಕೇವಲ ದೆಹಲಿ ಮಾತ್ರ ಸೀಮಿತವಲ್ಲ, ಇದು ದೇಶದ ಇತರ ಭಾಗಕ್ಕೂ ಅನ್ವಯಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಾಯು ಮಾಲಿನ್ಯ ಇದೀಗ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ನಗರ ಪ್ರದೇಶದಲ್ಲಿ ಮಾಲಿನ್ಯ ವಿಪರೀತವಾಗುತ್ತಿದೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಪ್ರಮಾಣ ಅತಿಯಾಗಲಿದೆ. ಹೀಗಾಗಿ ಪಟಾಕಿ ನಿಷೇಧವನ್ನು ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ನಿಷೇಧಿತ ರಾಸಾಯನಿಕಗಳು ಮತ್ತು ಬೇರಿಯಂ ಲವಣಗಳಿರುವ ಪಟಾಕಿ ಬಳಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಡಿಕೆ ಮಾಲಿನ್ಯಕಾರಣ ಅಥಾವ ಹಸಿರುವ ಪಟಾಕಿ ಬಳಕೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗಲಿದೆ. ವಾಯು ಮಾಲಿನ್ಯ ನಿಯಂತ್ರಣ ಕೋರ್ಟ್ ಮಾತ್ರ ಕೆಲಸ ಎಂದುಕೊಳ್ಳಬೇಡಿ. ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ನಾಗರೀಕರು ತಮ್ಮ ಕೊಡುಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

ದೆಹಲಿ ಮಾಲಿನ್ಯಕ್ಕೆ ಸುಪ್ರೀಂ ಕೋರ್ಟ್ ಕಳವಳ, ಆಪ್ ಸರ್ಕಾರಕ್ಕೆ ಲಾಸ್ಟ್ ವಾರ್ನಿಂಗ್!

ಕಳೆದ ವರ್ಷವೂ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧ ತೆರವಿನ ಕುರಿತು ಮಹತ್ವದ ಆದೇಶ ನೀಡಿತ್ತು. ಪಟಾಕಿ ನಿಷೇಧ ತೆರವು ಸಾಧ್ಯವಿಲ್ಲ ಎಂದಿತ್ತು. ಇದೀಗ ಈ ಬಾರಿಯೂ ಪಟಾಕಿ ನಿಷೇಧ ತೆರವು ಮಾಡುದಿಲ್ಲ ಎಂದಿದೆ. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ, ಹೊಸ ವರ್ಷಾಚರಣೆಗೂ ದೆಹಲಿಯಲ್ಲೂ ಪಟಾಕಿ ಸಿಡಿಸಿಲು ಅವಕಾಶವಿಲ್ಲ.

ದೆಹಲಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ 450ಕ್ಕೆ ಕುಸಿದಿದೆ. ದೆಹಲಿಯ ವಾಯು ಗುಣಮಟ್ಟ ವಿಷಮಕ್ಕೆ ಸೂಚ್ಯಂಕ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಆಪ್ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದೆ. ಆಪ್ ಸರ್ಕಾರ ದೆಹಲಿ ಮಾಲಿನ್ಯಕ್ಕೆ ಬಿಜೆಪಿ ಆಡಳಿತದ ರಾಜ್ಯಗಳು ಕಾರಣ ಎಂದು ಆರೋಪ ಮಾಡಿತ್ತು. ಈ ವಿಚಾರದ ಕುರಿತು ಸುಪ್ರೀಂ ಕೋರ್ಟ್ ಆಪ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇಲ್ಲಿ ರಾಜಕೀಯ ಸಮರಕ್ಕೆ ಅವಕಾಶವಿಲ್ಲ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಬೇಡಿ. ತಕ್ಷಣವೇ ಕಳೆಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸಿ ಎಂದು ಪಂಜಾಬ್ ಹಾಗೂ ದೆಹಲಿಯ ಆಪ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಆರ್ಟಿಫೀಶಿಯಲ್ ಮಳೆ ಪ್ರಸ್ತಾವನೆ ಮುಂದಿಟ್ಟ ಐಐಟಿ ಕಾನ್ಪುರ!

click me!