
ನವದೆಹಲಿ: ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ವಯನಾಡ್ ಲೋಕಸಭಾ ಕ್ಷೇತ್ರ ತೆರವಾಗಿರುವುದನ್ನು ಲೋಕಸಭೆಯ ವೆಬ್‌ಸೈಟ್‌ನಲ್ಲಿ ನಮೂದು ಮಾಡಲಾಗಿದೆ. ಈ ಮೂಲಕ ಖಾಲಿಯಿದ್ದ 2 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 3 ಎಂದು ತೋರಿಸಲಾಗುತ್ತಿದೆ. 2019 ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ ರಾಹುಲ್ ಲೋಕಸಭೆಗೆ ಆಯ್ಕೆಯಾಗಿದ್ದರು. ಜಲಂಧರ್ ಕ್ಷೇತ್ರದ ಸಂಸದ ಕಾಂಗ್ರೆಸ್ಸಿನ ಸಂತೋಖ್ ಸಿಂಗ್ ನಿಧನದಿಂದ ಹಾಗೂ ಪ್ರಕರಣವೊಂದರಲ್ಲಿ ಎನ್‌ಸಿಪಿಯ ಮೊಹಮ್ಮದ್ ಫೈಸಲ್ ಪಿ.ಪಿ ಜೈಲು ಸೇರಿರುವ ಕಾರಣ ಲಕ್ಷದ್ವೀಪ ಕ್ಷೇತ್ರಗಳು ತೆರವಾಗಿದ್ದವು. ಇದೀಗ ಮಾನನಷ್ಟಪ್ರಕರಣದಲ್ಲಿ ಅನರ್ಹಗೊಂಡಿರುವ ರಾಹುಲ್ ಕ್ಷೇತ್ರ ಕೂಡ ತೆರವಾಗಿದೆ.
ರಾಹುಲ್ ಅನರ್ಹತೆಗೆ ಅಮೆರಿಕ ಸಂಸದ ವಿರೋಧ
ವಾಷಿಂಗ್ಟನ್: ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಭಾರತೀಯ ಮೂಲಕ ಅಮೆರಿಕ ಸಂಸದ ರೋ ಖನ್ನಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಗಾಂಧಿ ತತ್ವಗಳು ಮತ್ತು ಭಾರತದ ಉನ್ನತ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಆದೇಶವನ್ನು ತಡೆಹಿಡಿಯುವ ಅಧಿಕಾರ ನಿಮಗಿದೆ ಮೋದಿ ಅವರೇ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ರಾಹುಲ್ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್ ಪಿತ್ರೋಡಾ ಆಕ್ರೋಶ
ರಾಹುಲ್ ಮುಂದಿನ ಕಾನೂನು ಹಾದಿಗಳೇನು?
ರಾಹುಲ್ ಏನೇನು ಕಳೆದುಕೊಳ್ಳುತ್ತಾರೆ?
ಇದನ್ನೂ ಓದಿ: Sorry Politics: ರಾಹುಲ್ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ