wayanad landslide: ಯಾರಾದರೂ ಬಂದು ನಮ್ಮನ್ನು ಕಾಪಾಡಿ....! ಸಂಬಂಧಿಕರಿಗೆ ಕರೆ ಮಾಡಿ ಮಹಿಳೆಯ ಆರ್ತನಾದ

By Kannadaprabha News  |  First Published Jul 31, 2024, 9:01 AM IST

ಯಾರಾದರೂ, ದಯವಿಟ್ಟು ಬಂದು ನಮ್ಮನ್ನು ಕಾಪಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್‌ ಬದುಕಿದ್ದಾಳೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅಕೆ ಕೆಸರಿನಡಿ ಸಿಕ್ಕಿಬಿದ್ದಿದ್ದಾಳೆ.


ವಯನಾಡು (ಜು.31): ಯಾರಾದರೂ, ದಯವಿಟ್ಟು ಬಂದು ನಮ್ಮನ್ನು ಕಾಪಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್‌ ಬದುಕಿದ್ದಾಳೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅಕೆ ಕೆಸರಿನಡಿ ಸಿಕ್ಕಿಬಿದ್ದಿದ್ದಾಳೆ.

ಇದು ಭೀಕರ ಭೂಕುಸಿತಕ್ಕೆ ತುತ್ತಾದ ವಯನಾಡಿನ ಚೂರಲ್‌ಮಲ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಂಬಂಧಿಯೊಬ್ಬರಿಗೆ ಮೊಬೈಲ್‌ ಕರೆ ಮಾಡಿ ನೆರವಿಗಾಗಿ ಯಾಚಿಸಿದ ವೇಳೆ ಕೇಳಿಬಂದ ಮಾತುಗಳು. ಇಂಥದ್ದೇ ಹಲವಾರು ಆಡಿಯೋ ಕರೆಗಳು ಚೂರಲ್‌ಮಲ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಂದ ತಮ್ಮ ಆಪ್ತರಿಗೆ ಮಾಡಲ್ಪಟ್ಟಿದ್ದು ನೊಂದ ಜನರು ಅಸಹಾಯಕತೆಯಿಂದ ನೆರವಿಗಾಗಿ ಮೊರೆ ಇಟ್ಟ ಸಂದರ್ಭವನ್ನು ಜನರ ಮುಂದೆ ತೆರೆದಿಟ್ಟಿದೆ.

Tap to resize

Latest Videos

ಇದೇ ರೀತಿಯ ಇನ್ನೊಂದು ದೂರವಾಣಿ ಕರೆಯಲ್ಲಿ ವ್ಯಕ್ತಿಯೊಬ್ಬರು, ಈಗಲೂ ಇಲ್ಲಿ ಭೂಮಿ ಕಂಪಿಸುತ್ತಿದೆ. ಮುಂದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ನಮ್ಮ ಊರಿನಲ್ಲಿ ಭಾರೀ ಸದ್ದು ಕೇಳಿಬರುತ್ತಿದೆ. ಚೂರಲ್‌ಮಲ್‌ದಿಂದ ಹೊರಬರುವ ಯಾವುದೇ ಅವಕಾಶಗಳೂ ನಮಗೆ ಕಾಣಸಿಗುತ್ತಿಲ್ಲ ಎಂದು ಆತಂಕದಿಂದ ಹೇಳಿದ್ದಾರೆ.

ಮತ್ತೊಂದು ದೂರವಾಣಿ ಕರೆಯನ್ನು ಮುಂಡಕ್ಕಾಯ್‌ ಗ್ರಾಮದಿಂದ ಮಾಡಲಾಗಿದ್ದು, ‘ಇಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭೂಕುಸಿತದ ಮಣ್ಣು ಮತ್ತು ಕೆಸರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರೆಲ್ಲಾ ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ. ಮೇಪ್ಪಡಿ ಪ್ರದೇಶದಿಂದ ಯಾರಾದರೂ ವಾಹನದಲ್ಲಿ ಬಂದರೆ ಇಲ್ಲಿ ನೂರಾರು ಜನರ ಪ್ರಾಣ ಉಳಿಸಬಹುದು’ ಎಂದು ರಕ್ಷಣೆಗೆ ಮೊರೆ ಇಟ್ಟ ಪ್ರಕರಣವೂ ಬೆಳಕಿಗೆ ಬಂದಿದೆ.

Wayanad landslide: ಬದುಕಿನ ದಾರಿಗೆ ಅದೆಷ್ಟು ವಿಘ್ನ,ಇಡೀ ಊರೇ ನಿದ್ರಿಸುತ್ತಿದ್ದ ವೇಳೆ ಕುಸಿದ ಆ ಎರಡು ಬೆಟ್ಟ!

ಜೀವ ರಕ್ಷಣೆಗೆ ಮೊರೆ: ಇನ್ನೊಂದು ಭೀಕರ ದೃಶ್ಯದಲ್ಲಿ, ಭೂಕುಸಿತದ ವೇಳೆ ಕೆಸರಿನಲ್ಲಿ ಕೊಚ್ಚಿ ಹೋದ ವೃದ್ಧ ವ್ಯಕ್ತಿಯೊಬ್ಬರು ಅದು ಹೇಗೋ ದೊಡ್ಡ ಬಂಡೆಯೊಂದನ್ನು ಆಸರೆಯಾಗಿ ಹಿಡಿದುಕೊಂಡು ಜೀವ ಉಳಿಸಿಕೊಂಡ ರಕ್ಷಣೆಗೆ ಕಾದು ಕುಳಿತ ದೃಶ್ಯವೊಂದು ಎಲ್ಲರ ಮನ ಕಲುಕಿದೆ. ಆದರೆ ಘಟನಾ ಸ್ಥಳದಲ್ಲಿ ಭಾರೀ ಮಳೆ ಮತ್ತು ಕೆಸರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಕಾರಣ, ವೃದ್ಧ ಸಿಕ್ಕಿಬಿದ್ದಿರುವ ಸ್ಥಳಕ್ಕೆ ತೆರಳಲು ಇನ್ನೂ ರಕ್ಷಣಾ ಸಿಬ್ಬಂದಿ ಸಾಧ್ಯವಾಗಿಲ್ಲ. ಕೇವಲ ಈ ಘಟನೆಯೇ ದುರಂತಕ್ಕೆ ಸಿಕ್ಕಿಬಿದ್ದ ಎಲ್ಲಾ 4 ಗ್ರಾಮಗಳ ರಕ್ಷಣಾ ಕಾರ್ಯಚರಣೆ ಚಿತ್ರಣವನ್ನು ಮುಂದಿಟ್ಟಿದೆ.

ವಯನಾಡಿಗೆ ಪ್ರಿಯಾಂಕಾ, ರಾಗಾ ಭೇಟಿ ಮುಂದಕ್ಕೆ:
ಭೂಕುಸಿತ ದುರಂತ ಸಂಭವಿಸಿರುವ ಕೇರಳದ ವಯನಾಡಿಗೆ ಬುಧವಾರ ಭೇಟಿ ನೀಡಲು ಉದ್ದೇ​ಶಿ​ಸಿ​ದ್ದ ಕ್ಷೇತ್ರದ ಹಿಂದಿನ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ವಯನಾಡ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ, ತಮ್ಮ ಭೇಟಿ ಮುಂದೂ​ಡಿ​ದ್ದಾ​ರೆ. ಪ್ರತಿ​ಕೂಲ ಹವಾ​ಮಾನ ಇರುವ ಕಾರಣ ಹೆಲಿ​ಕಾ​ಪ್ಟರ್‌ ಲ್ಯಾಂಡಿಂಗ್‌ ಅಸಾಧ್ಯ ಎಂದು ಕೇರ​ಳದ ಅಧಿ​ಕಾ​ರಿ​ಗಳು ತಿಳಿ​ಸಿ​ರುವ ಕಾರಣ ಭೇಟಿ ಮುಂದೂ​ಡ​ಲಾ​ಗಿದೆ. ಆದರೂ ಪರಿ​ಸ್ಥಿ​ತಿ​ಯನ್ನು ನಾವು ಗಮ​ನಿಸಿ ರಕ್ಷಣಾ ಕಾರ‍್ಯಕ್ಕೆ ಸಲ​ಹೆ-ಸೂಚನೆ ನೀಡ​ಲಿ​ದ್ದೇವೆ ಎಂದು ರಾಹುಲ್‌ ಮಂಗ​ಳ​ವಾ​ರ ರಾತ್ರಿ ಹೇಳಿ​ದ್ದಾ​ರೆ.

ವಯನಾಡು ದುರಂತದ ಕಾರಣ ರಾಜ್ಯ ಆರೋಗ್ಯ ಇಲಾಖೆ ಕಂಟ್ರೋಲ್ ರೂಂ ತೆರೆದಿದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ತುರ್ತು ಸಹಾಯದ ಅಗತ್ಯವಿರುವವರು ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.

click me!