ನಮ್ಮವರು ಇರಬಹುದು ಮೆಲ್ಲನೆ ಅಗೆಯಿರಿ: ಯುವಕನ ಮನಮಿಡಿಯುವ ಮನವಿಗೆ ಹಿಟಾಚಿ ಚಾಲಕ ಭಾವುಕ

By Kannadaprabha News  |  First Published Aug 6, 2024, 1:47 PM IST

ಭೂಕುಸಿತದಿಂದಾಗಿ ಮಣ್ಣಿನಡಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿರುವವರ ತಂಡ ಅಲ್ಲಿನ ಮನಕಲಕುವ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಮಣ್ಣಿನಡಿ ಏನಿದೆ ಎಂದು ತಿಳಿಯದ ಕಾರಣ ಹಿಟಾಚಿ ಸೇರಿದಂತೆ ಇತರ ಯಂತ್ರಗಳನ್ನು ಎಚ್ಚರಿಕೆಯಿಂದ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.


ವಯನಾಡ್: ಭೂಕುಸಿತದಿಂದಾಗಿ ಮಣ್ಣಿನಡಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿರುವವರ ತಂಡ ಅಲ್ಲಿನ ಮನಕಲಕುವ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಮಣ್ಣಿನಡಿ ಏನಿದೆ ಎಂದು ತಿಳಿಯದ ಕಾರಣ ಹಿಟಾಚಿ ಸೇರಿದಂತೆ ಇತರ ಯಂತ್ರಗಳನ್ನು ಎಚ್ಚರಿಕೆಯಿಂದ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

'ನನ್ನ ಬಳಿ ಬಂದ ಯುವಕನೊಬ್ಬ ತನ್ನ ಮನೆಯತ್ತ ಬೊಟ್ಟು ಮಾಡುತ್ತ, ಅವಶೇಷಗಳಡಿಯಲ್ಲಿ ತನ್ನ ಪರಿವಾರದವರು ಇರಬಹುದಾದ ಕಾರಣ ಮೆಲ್ಲನೆ ಆಗೆಯುವಂತೆ ವಿನಂತಿಸಿದ. ನಾನು ಯಂತ್ರ ಚಲಾಯಿಸಿದಂತೆ ಆತ ಕಣ್ಣೀರಾಕಿದ ಎಂದು ಓರ್ವ ಹಿಟಾಚಿ ಆಪರೇಟರ್‌ ತಮ್ಮ ಅನುಭವವನ್ನು ಹಂಚಿ ಕೊಂಡಿದ್ದಾರೆ. 'ಜನರ ಅವಶೇಷಗಳನ್ನು ಹುಡುಕಿ ತೆಗೆಯುವ ಬಹಳ ದೊಡ್ಡ ಜವಾಬ್ದಾರಿ ನನ್ನದಾಗಿತ್ತು' ಎಂದಿದ್ದಾರೆ.

Tap to resize

Latest Videos

ನಿರಾಶ್ರಿತ ಶಿಬಿರಗಳಲ್ಲಿ 2500 ಸಂತ್ರಸ್ತರು ವಾಸ

ವಯನಾಡು: ಕಳೆದ ವಾರ ಕೇರಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರಾದ 2500ಕ್ಕೂ ಹೆಚ್ಚು ಜನ ಇಲ್ಲಿನ ತಾತ್ಕಾಲಿಕವಾಗಿ ನಿರ್ಮಿಸಿರುವ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸಿಎಂ ಕಚೇರಿ ಮಾಹಿತಿ ಪ್ರಕಾರ, ಒಟ್ಟು 16 ನಿರಾಶ್ರಿತ ಶಿಬಿರಗಳಿವೆ. ಈ ಶಿಬಿರಗಳಲ್ಲಿ ಪ್ರಮುಖವಾಗಿ 723 ಕುಟುಂಬಗಳಿಗೆ ಸೇರಿದ 2,514 ಜನರು ತಂಗಿದ್ದಾರೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಹಾಗೂ 6 ಗರ್ಭಿಣಿ ಸ್ತ್ರೀಯರು ಆಶ್ರಯ ಪಡೆದಿದ್ದಾರೆ.

ವಯನಾಡು ಭೂಕುಸಿತ: ಯದ್ವಾತದ್ವಾ ಕಿರುಚಾಡಿ ಹಲವು ಕುಟುಂಬಗಳನ್ನು ಉಳಿಸಿದ ಗಿಳಿ..!

ಗುರುತು ಪತ್ತೆಯಾಗದ ಶವಗಳಿಗೆ ಸಾಮೂಹಿಕ ಅಂತ್ಯ ಸಂಸ್ಕಾರ.

ವಯನಾಡು: ಕೇರಳ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ 31 ಅಪರಿಚಿತ ಮೃತದೇಹಗಳು ಹಾಗೂ 158 ದೇಹದ ಭಾಗಗಳನ್ನು ಇಲ್ಲಿನ ಟಿ ಎಸ್ಟೇಟ್ ನಲ್ಲಿ ಸೋಮವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಭಾಗಗಳ ಡಿಎನ್ಎ ಮಾದರಿಯನ್ನು ಸಂಗ್ರಹಿಸಿ ಬಳಿಕ ಪ್ರತಿಯೊಂದನ್ನು ಪ್ರತ್ಯೇಕವಾಗಿ ಸಮಾಧಿ ಮಾಡಲಾಯಿತು. ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಜೀವ ಕಳೆದುಕೊಂಡಿರುವ ಕಾರಣ ಅವರ ಶವಗಳನ್ನು ಪಡೆಯಲು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಅನ್ನ ಹಾಕಿದ ಒಡತಿಯ ಮೃತದೇಹ ಪತ್ತೆ ಹಚ್ಚಿದ ನಾಯಿ, ತುಂಡಾದ ಶವ ಹೊರತೆಗೆದ ರಕ್ಷಣಾ ತಂಡ!

click me!