
ನವದೆಹಲಿ: ಇಂದು ಕಾಲೇಜು ದಿನಗಳಲ್ಲಿ ಪ್ರೀತಿ, ಪ್ರೇಮ ಅನ್ನೋದು ಸಾಮಾನ್ಯ ಸಂಗತಿಯಾಗಿದೆ. ಆದ್ರೆ ಈ ದಿನಗಳಲ್ಲಿ ಮೊಳಕೆಯೊಡುಯವ ಪ್ರೀತಿ ಯಶಸ್ಸು ಕಾಣೋದು ತುಂಬಾ ವಿರಳ. ಕಾಲೇಜು ಮುಗಿಯುತ್ತಿದ್ದಂತೆ ಪ್ರೀತಿಯೂ ಸಹ ಬಹುತೇಕ ಅಂತ್ಯದ ಹಾದಿಯತ್ತ ಸಾಗುತ್ತದೆ. ಶಾಲಾ-ಕಾಲೇಜು ದಿನಗಳಲ್ಲಿ ಒಬ್ಬ ಹುಡುಗಿ ಹಿಂದೆ ಮೂರ್ನಾಲ್ಕು ಹುಡುಗರು ಸುತ್ತಾಡೋದು ಕಾಮನ್. ಕೆಲವೊಮ್ಮೆ ಇದೇ ವಿಷಯವಾಗಿ ಹುಡುಗರ ಮಧ್ಯೆ ಗಲಾಟೆ ಸಹ ಆಗತ್ತಿರುತ್ತದೆ. ಇಂತಹ ಲವ್‌ಸ್ಟೋರಿಗಳು ಸಾವಿನಲ್ಲಿಯೂ ಅಂತ್ಯವಾಗುತ್ತವೆ. ಆದ್ರೆ ನೊಯ್ಡಾದಲ್ಲಿ ಓರ್ವ ಹುಡುಗನಿಗಾಗಿ ಇಬ್ಬರು ಹುಡುಗಿಯರು ಕೂದಲು ಹಿಡಿದುಕೊಂಡು ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಕ್ಲಾಸ್‌ರೂಮ್‌ನಲ್ಲಿಯೇ ವಿದ್ಯಾರ್ಥಿಗಳು ಹೊಡೆದಾಡುಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕಾಲ ಬದಲಾಗಿದೆ ಎಂದು ಗುರು ಕಮೆಂಟ್ ಮಾಡುತ್ತಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ನೊಯ್ಡಾದ ಎನ್‌ಐಇಟಿ ಕಾಲೇಜಿನಲ್ಲಿ ನಡೆದಿದೆ. ಒಂದೇ ಕಾಲೇಜಿನ ಇಬ್ಬರು ಯುವತಿಯರು ಓರ್ವ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದರು. ಹಾಗಾಗಿ ಒಬ್ಬ ಯುವತಿ ತನ್ನ ಎಲ್ಲಾ ತಂಡದ ಜೊತೆ ಗೆಳಯನ ಮತ್ತೋರ್ವ ಗೆಳತಿಯ ಮೇಲೆ ಹಲ್ಲೆ ನಡೆಸಲು ಬಂದಿದ್ದಾಳೆ. ಕ್ಲಾಸ್‌ರೂಮ್‌ನಲ್ಲಿಯೇ ವಿದ್ಯಾರ್ಥಿಗಳು ಪರಸ್ಪರ ಹೊಡೆದುಕೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳು ಈ ಎಲ್ಲಾ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಪೋಷಕರು ಮಕ್ಕಳು ಚೆನ್ನಾಗಿ ಓದಲಿ ಅಂತ ಕಾಲೇಜಿಗೆ ಕಳುಹಿಸಿದ್ರೆ, ಇಂತಹ ರಂಪಾಟ ಮಾಡಿಕೊಳ್ಳುತ್ತಾರೆ. ಇಷ್ಟು ದೊಡ್ಡಮಟ್ಟದ ಗಲಾಟೆ ನಡೆದರೂ ಕಾಲೇಜು ಆಡಳಿತ ಮಂಡಳಿ ಏನು ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, ಈ ಹೋರಾಟದಲ್ಲಿ ಗೆದ್ದವರು ಯಾರು? ಇಬ್ಬರು ಯುವತಿಯರ ಪೈಕಿ ರೋಮಿಯೋ ಯಾರ ಪಾಲಾಗಿದ್ದಾನೆ ಎಂದು ಕೇಳಿದ್ದಾರೆ. ಕೆಲವರು ಇಷ್ಟು ಪ್ರೀತಿಸುವ ಹುಡುಗಿ ಸಿಕ್ಕಿರೋ ಹುಡುಗ ತುಂಬಾನೇ ಅದೃಷ್ಟವಂತ. ಆತನಿಗೆ ಮಚ್ಚೆ ಇರಬೇಕು ಎಂದು ಆತನ ಗುಣಗಾನ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ 'ನಾಗಿಣಿ'ಯಾಗಿ ಪತ್ತೆ; ವಿಡಿಯೋ ನೋಡಿ
ಇಬ್ಬರು ಯುವತಿಯರು ಓರ್ವ ಹುಡುಗನನ್ನು ಪ್ರೀತಿ ಮಾಡೋದು ಓಕೆ. ಆದ್ರೆ ಮತ್ತೊಬ್ಬಾಕೆ ಮೇಲೆ ಹಲ್ಲೆ ನಡೆಸಲು ಯುವತಿಗೆ ಸಹಾಯ ಮಾಡಲು ಹುಡಗರು ಬರಬಾರದಿತ್ತು. ಆ ಮೂವರೇ ಕುಳಿತು ಬಗೆಹರಿಸಿಕೊಳ್ಳಬಹುದಾದ ಸಮಸ್ಯೆ ಇದಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಎಲ್ಲಾ ಗಲಾಟೆ ನೋಡುತ್ತಾ ಸುಮ್ಮನೇ ಕುಳಿತ ವಿದ್ಯಾರ್ಥಿಗಳ ಸ್ಕ್ರೀನ್‌ಶಾಟ್ ಹಾಕಿ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಇವರೆಲ್ಲಾ ಆದರ್ಶ ವಿದ್ಯಾರ್ಥಿಗಳು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ನೋಯ್ಡಾದ ಕಾಲೇಜಿನ ಕ್ಯಾಂಟೀನ್‌ನಲ್ಲಿ ಕೆಲ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದರು. ಕ್ಯಾಂಟೀನ್‌ನಲ್ಲಿ ಕೆಲ ವಿದ್ಯಾರ್ಥಿಗಳು ಆಹಾರ ಸೇವನೆ ಮಾಡುತ್ತಾ ಓದುತ್ತಿದ್ದರು. ಹಿಂದಿನ ಟೇಬಲ್‌ನಲ್ಲಿ ಕುಳಿತಿದ್ದವರು ನೋಡ ನೋಡುತ್ತಿದ್ದಂತೆ ಒಬ್ಬರು ಮತ್ತೊಬ್ಬರ ಮೇಲೆ ಬಿದ್ದ ಏಟು ಕೊಟ್ಟಿದ್ದರು.
Watch... ವಧು ಸಿಗರೇಟ್ ಸೇದುತ್ತಿರುವಾಗಲೇ ಬಂದ ಸಂಬಂಧಿಕರು! ನೀವು ನಮ್ಮಂತೇನಾ ಎಂದ ಪೋಲಿಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ