ಸಿಐಡಿ ಕ್ರೈಂ ಬ್ರಾಂಚ್ ಅಧಿಕಾರಿಗಳು ವಸ್ತಾರಪುರ ಪೊಲೀಸ್ ಠಾಣೆಯಲ್ಲಿ ವಿದೇಶಿ ಮಹಿಳೆ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಹಲ್ಲೆಗೆ ಯತ್ನಿಸಿದ ಸಂಬಂಧ ದೂರು ದಾಖಲಿಸಿದ್ದಾರೆ.
ಅಹಮದಾಬಾದ್: ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ವಾಸವಿದ್ದ ಹೋಟೆಲ್ ಮೇಲೆ ಸಿಐಡಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಸ್ಪಾದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅಹಮದಾಬಾದ್ ನಗರದ ಹಲವು ಸ್ಪಾಗಳಲ್ಲಿ ಕಾಣಿಸಿಕೊಳ್ಳುತ್ತದ್ದ ವಿದೇಶಿ ಮಹಿಳೆಯ ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ್ದರು. ಪಾಸ್‌ಪೋರ್ಟ್ ನೀಡುವಂತೆ ಕೇಳಿದ್ದರಿಂದ ಕೋಪಗೊಂಡ ವಿದೇಶಿ ಮಹಿಳೆ ಪೊಲೀಸರಿಗೆ ಒದೆಯಲು ಬಂದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಪೊಲೀಸರ ಮೇಲೆ ಶೂ ಸಹ ಎಸೆದಿದ್ದಾಳೆ. ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ವಿದೇಶಿ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಾರು ನಾಲ್ಕು ಗಂಟೆ ಮಹಿಳೆ ದೊಡ್ಡ ಡ್ರಾಮಾ ಮಾಡಿದ್ದಾಳೆ. ಅಂತಿಮವಾಗಿ ಪೊಲೀಸರು ವಿದೇಶಿ ಮಹಿಳೆಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ವಿದೇಶಿ ಮಹಿಳೆ ಕಿರ್ಗಿಸ್ತಾನ್ ಮೂಲದವಳು ಎಂದು ವರದಿಯಾಗಿದೆ. ಅಹಮದಾಬಾದ್ ನಗರದ ಹಿಮಾಲಯನ್ ಮಾಲ್ ಬಳಿಯ ಶೈಲಿ ಇನ್ ಹೋಟೆಲ್ ಮೇಲೆ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿದ ವಿದೇಶಿ ಮಹಿಳೆಗೆ ಪಾಸ್‌ಪೋರ್ಟ್ ತೋರಿಸುವಂತೆ ಕೇಳಿದ್ದಾರೆ. ಈ ವಿದೇಶಿ ಮಹಿಳೆ ಅಹಮದಾಬಾದ್ ನಗರದ ಹಲವು ಸ್ಪಾಗಳಲ್ಲಿ ಸಿಕ್ಕಿಬಿದ್ದಿದ್ದಳು. ಹೀಗಾಗಿ ಆಕೆಯ ಪಾಸ್‌ಪೋರ್ಟ್ ದಾಖಲೆಯ ಪರಿಶೀಲನೆಗೆ ಅಧಿಕಾರಿಗಳು ತೆರಳಿದ್ದರು.
ಅಧಿಕಾರಿಗಳು ತೆರಳಿದ್ದಾಗ ಮಹಿಳೆ ಮದ್ಯ ಸೇವಿಸಿದ್ದಳು. ಪಾಸ್‌ಪೋರ್ಟ್ ಕೇಳಿದ್ದರಿಂದ ಮಹಿಳೆ ಅಧಿಕಾರಿಗಳ ಮೇಲೆಯೇ ಕೂಗಾಡಿದ್ದಾಳೆ. ಅಧಿಕಾರಿಗಳು ಮತ್ತು ಪೊಲೀಸರ ಜೊತೆಯಲ್ಲಿ ಮಹಿಳೆ ಅನುಚಿತವಾಗಿ ನಡೆದುಕೊಂಡಿದ್ದಾಳೆ. ಕೊನೆಯದಾಗಿ ಪೊಲೀಸರು ಮಹಿಳೆಯರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಸ್ತಾರಪುರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸಿಐಡಿ ಕ್ರೈಂ ಬ್ರಾಂಚ್ ಅಧಿಕಾರಿಗಳು ವಸ್ತಾರಪುರ ಪೊಲೀಸ್ ಠಾಣೆಯಲ್ಲಿ ವಿದೇಶಿ ಮಹಿಳೆ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಹಲ್ಲೆಗೆ ಯತ್ನಿಸಿದ ಸಂಬಂಧ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಮಹಾನಗರಗಳಲ್ಲಿ ಈ ದಂಧೆ ಹೆಚ್ಚಾಗುತ್ತಿದೆ. ಸ್ಪಾ ಹೆಸರಿನಲ್ಲಿ ಅನ್ಯ ರಾಜ್ಯ ಹಾಗೂ ವಿದೇಶಗಳಿಂದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ.
8 ಹುಡುಗಿಯರ ಜೊತೆ 3 ಹುಡುಗರ ಸರಸ ಸಲ್ಲಾಪ; ಬಾಗಿಲು ತರೆದವರಿಗೆ ಕಂಡಿದ್ದು ಬೆತ್ತಲೆ ಲೋಕ!
ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ
ಇದೇ ತಿಂಗಳು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ್ದರು. ಮುಧೋಳ ನಗರದ ನಾಲ್ಕು ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, 11 ಯುವತಿಯರನ್ನು ರಕ್ಷಣೆ ಮಾಡಿದ್ದರು. ಲಾಡ್ಜ್ ಮ್ಯಾನೇಜರ್ ಮತ್ತು ಮಾಲೀಕರು ಸೇರಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಧೋಳ ನಗರದ ಓಂಕಾರ, ಶಿವದುರ್ಗಾ,ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ಜಮಖಂಡಿ ಡಿವೈಎಸ್‌ಪಿ ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಗೆ ಮುಧೋಳ ಸಿಪಿಐ, ಇಬ್ಬರು ಪಿಎಸ್‌ಐ, ಲೋಕಾಪುರ ಪಿಎಸ್‌ಐ ಸೇರಿ ನಾಲ್ಕು ತಂಡಗಳ ರಚನೆ ಮಾಡಲಾಗಿತ್ತು.
ಯುವತಿಯರೆಲ್ಲರೂ 26, 27, 30 ವರ್ಷದವರಾಗಿದ್ದು,ಅಸ್ಸಾಂ,ಕಲ್ಕತ್ತಾ,ಮುಂಬೈ ಮೂಲದವರು. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ಈ ದಾಳಿ ನಡೆಸಿದ್ದರು. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಆರೋಪದ ಮೇರೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಮಂಜಿನ ನಗರಿ ಮಡಿಕೇರಿಯಲ್ಲಿ ಹಾಸನದ 19 ವರ್ಷದ ಯುವತಿ ಇಟ್ಟುಕೊಂಡು ನಕಲಿ ವೇಶ್ಯಾವಾಟಿಕೆ