ಕಲ್ಪೆಟ್ಟ: ಸದಾ ಫೈಲುಗಳ ಮಧ್ಯೆಯೇ ಬ್ಯುಸಿಯಾಗಿದ್ದ ಕೇರಳದ ವಯನಾಡಿನ ಜಿಲ್ಲಾಧಿಕಾರಿ ಫೈಲುಗಳನ್ನೆಲ್ಲಾ ಪಕ್ಕಕಿರಿಸಿ ದಮಯಂತಿ ವೇಷ ಧರಿಸಿ ವೇದಿಕೆ ಮೇಲೆ ಪ್ರದರ್ಶನ ನೀಡಿದರು. ಶನಿವಾರ ವಯನಾಡಿನ (Wayanad) ಮಾನಂತವಾಡಿಯ (Mananthavady) ಪ್ರಸಿದ್ಧ ವಲ್ಲಿಯೂರ್ಕಾವು (Valliyoorkavu) ದೇವಸ್ಥಾನದಲ್ಲಿ ತಮ್ಮ ಆತ್ಮೀಯ ಜಿಲ್ಲಾಧಿಕಾರಿ ವೇದಿಕೆಯ ಮೇಲೆ 'ದಮಯಂತಿ' ಆಗಿದ್ದನ್ನು ನೋಡಿ ಅಲ್ಲಿನ ಜನರು ಪುಳಕಿತರಾದರು.
ಜಿಲ್ಲಾಧಿಕಾರಿ ಎ ಗೀತಾ (A Geetha) ಅವರು ಜಿಲ್ಲಾ ಯೋಜನಾ ಅಧಿಕಾರಿ ಸುಭದ್ರಾ ನಾಯರ್ (Subhadra Nair) ಮತ್ತು ರತಿ ಸುಧೀರ್ (Rathi Sudheer) ಅವರೊಂದಿಗೆ ದಮಯಂತಿ ಮತ್ತು ಅವರ ಸ್ನೇಹಿತರು ಉದ್ಯಾನವನ್ನು ಪ್ರವೇಶಿಸುವ ಅಧ್ಯಾಯವಾದ 'ನಳಚರಿತಂ ಓಂನಂ ದಿವಸಂ' ಅನ್ನು ಕಥಕ್ಕಳಿಯ ರೂಪದಲ್ಲಿ ವೇದಿಕೆ ಮೇಲೆ ತೆರೆದಿಟ್ಟರು. ಸುಭದ್ರ ಮತ್ತು ರತಿ ಇಬ್ಬರೂ ದಮಯಂತಿಯ ದಾಸಿಯಾಗಿ ಕಾಣಿಸಿಕೊಂಡರು. ಈ ಕಾರ್ಯಕ್ರಮಕ್ಕಾಗಿ ಮೂವರು ಕೊಟ್ಟಕ್ಕಲ್ ಉನ್ನಿಕೃಷ್ಣನ್ (Kottakkal Unnikrishnan) ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದಾರೆ.
ಅರ್ಧದಲ್ಲೇ ಪ್ರದರ್ಶನ ತಡೆದ ಜಡ್ಜ್ ಪಾಶಾ: ವೇದಿಕೆಯಲ್ಲೇ ಕಣ್ಣೀರಿಟ್ಟ ಖ್ಯಾತ ಮೋಹಿನಿಯಟ್ಟಂ ನರ್ತಕಿ
ಗೀತಾ ಅವರು ತಮ್ಮ ಬಿಡುವಿಲ್ಲದ ಕೆಲಸದ ನಡುವೆ ರಾತ್ರಿಯಲ್ಲಿ ಹೆಚ್ಚಾಗಿ ಆನ್‌ಲೈನ್‌ನಲ್ಲಿ ನಡೆದ ಕಥಕ್ಕಳಿ ತರಬೇತಿಗೆ ಸಮಯ ಹೊಂದಿಸುವಲ್ಲಿ ಯಶಸ್ವಿಯಾದರು. ಇವರ ತರಬೇತಿ ಕೆಲ ದಿನಗಳಲ್ಲಿ ಮುಂಜಾನೆಯವರೆಗೂ ವಿಸ್ತರಿಸಿತ್ತು. ಇವರು ವೇದಿಕೆಯಲ್ಲಿ ಪ್ರದರ್ಶನ ನೀಡಲು ಅಧಿಕೃತ ಅನುಮತಿಯನ್ನು ಪಡೆದಿದ್ದರು.
'ನಾನು ಅನೇಕ ವೇದಿಕೆಗಳಲ್ಲಿ ಭರತನಾಟ್ಯವನ್ನು ಕಲಿತು ಪ್ರದರ್ಶನ ನೀಡಿದ್ದೆ. ಕಥಕ್ಕಳಿ ಒಂದು ಕಲೆ, ಅದರ ಬಗ್ಗೆ ನನಗೆ ಆಳವಾದ ಉತ್ಸಾಹವಿದೆ. ಆದಾಗ್ಯೂ, ನಾನು ಅದನ್ನು ಎಂದಿಗೂ ಗಂಭೀರವಾಗಿ ಅನುಸರಿಸಲು ಸಾಧ್ಯವಾಗಲಿಲ್ಲ. ಈಗ ಒಂದು ಅವಕಾಶ ಬಂದಿದೆ ಮತ್ತು ನಾನು ಅದನ್ನು ಪ್ರಯತ್ನಿಸಲು ನಿರ್ಧರಿಸಿದೆ' ಎಂದು ಗೀತಾ ಹೇಳಿದರು.
ಜಿಲ್ಲಾಧಿಕಾರಿಗಳ ಚೊಚ್ಚಲ ಕಥಕ್ಕಳಿ (Kathakali) ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು, ಕಳೆದ ನವೆಂಬರ್‌ನಲ್ಲಿ ವಯನಾಡ್‌ನಲ್ಲಿರುವ ಸರ್ಕಾರಿ ಆಶ್ರಯ ಮನೆಯಲ್ಲಿ ವಾಸವಿದ್ದವರ ವಿವಾಹದ ಸಂದರ್ಭದಲ್ಲಿ ಅವರನ್ನು ಆಶೀರ್ವದಿಸಲು ಸ್ಥಳಕ್ಕೆ ಭೇಟಿ ನೀಡಿದಾಗ ಗೀತಾ ಅವರು ಆರಾಮವಾಗಿ ಶಾಸ್ತ್ರೀಯ ನೃತ್ಯವನ್ನು (classical dance) ಅಲ್ಲಿ ಪ್ರದರ್ಶಿಸಿದರು.
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ; ಸರ್ಪ್ರೈಸ್ ಅತಿಥಿ ಭಾವನ ಎಂಟ್ರಿಗೆ ಅದ್ದೂರಿ ಸ್ವಾಗತ
ಕಥಕ್ಕಳಿಯು ಅತ್ಯಂತ ಶೈಲೀಕೃತವಾದ ಶಾಸ್ತ್ರೀಯ ಭಾರತೀಯ ನೃತ್ಯ ನಾಟಕವಾಗಿದೆ. ಪಾತ್ರಧಾರಿಗಳ ಆಕರ್ಷಕ ಅಲಂಕಾರ, ವೈಭವವಾದ ವೇಷಭೂಷಣ, ವಿಶದವಾದ ಭಾವಭಂಗಿಗಳು ಮತ್ತು ಅತಿ ಸ್ಪಷ್ಟವಾದ ಆಂಗಿಕ ಚಲನೆಗಳು, ಹಿನ್ನೆಲೆ ಸಂಗೀತ ಮತ್ತು ಪೂರಕವಾದ ತಾಳವಾದ್ಯದೊಂದಿಗೆ ಹದವಾಗಿ ಬೆರೆತಿರುವಂತೆ ಇದನ್ನು ಪ್ರಸ್ತುತಪಡಿಸಲಾಗುತ್ತದೆ. ಭಾರತದ ಇಂದಿನ ಕೇರಳ ರಾಜ್ಯದಲ್ಲಿ ಸುಮಾರು 17ನೇ ಶತಮಾನದಲ್ಲಿ ಇದು ಹುಟ್ಟಿಕೊಂಡಿತು. ಕಾಲಕ್ರಮೇಣ ಸುಧಾರಿತ ನೋಟಗಳು, ಪರಿಷ್ಕೃತ ಭಾವ ಭಂಗಿಗಳು ಮತ್ತು ಹೆಚ್ಚುವರಿ ವಿಷಯ ವಸ್ತುವಿನೊಂದಿಗೆ, ಅಲಂಕೃತ ಹಾಡುಗಾರಿಕೆ ಹಾಗೂ ನಿಖರವಾದ ತಾಳ ಮದ್ದಲೆಯೂ ಸೇರಿಕೊಂಡು ಮತ್ತಷ್ಟು ವಿಕಸನಗೊಂಡಿತು.
ಕಥಕ್ಕಳಿ ಎಂಬ ಹೆಸರು ಬರುವುದಕ್ಕೂ ಮೊದಲು ನೃತ್ಯ ನಾಟಕ ರೂಪವಾದ ರಾಮನಾಟ್ಟಂ ಹಾಗೂ ಕೃಷ್ಣನಾಟ್ಟಂನಿಂದ ಕೆಲವು ತಂತ್ರಗಳನ್ನು ಈ ಕಲಾ ಸ್ವರೂಪ ಬಳುವಳಿ ತೆಗೆದುಕೊಂಡಿತು. 'ಆಟ್ಟಂ' ಎಂದರೆ ಅಭಿನಯಿಸುವುದು ಎಂದರ್ಥ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಥಕ್ಕಳಿಗೆ ಮೊದಲಿನ ಈ ಎರಡೂ ಸ್ವರೂಪಗಳು ಹಿಂದೂ ದೇವರುಗಳಾದ ರಾಮ ಮತ್ತು ಕೃಷ್ಣನ ಕಥೆಗಳನ್ನು ಪ್ರಸ್ತುತಪಡಿಸುವುದಕ್ಕೆ ಸಂಬಂಧಿಸಿದ್ದವು ಆಗಿವೆ.
ಕಥಕ್ಕಳಿಯು ವೀಟ್ಟಟ್ಟನಾಡ್‌ನಲ್ಲಿ ಉಗಮಗೊಂಡಿದೆ ಎನ್ನಬಹುದು. ಇಲ್ಲಿ ವಿಟ್ಟತು ತಂಬುರನ್ , ಕೊಟ್ಟಯತು ತಂಬುರನ್ (ಇದು ಮಲಬಾರ್‌ನಲ್ಲಿರುವ ಕೊಟ್ಟಾಯಂ) ಮತ್ತು ಛತು ಪಣಿಕ್ಕರ್ ಅವರಂತಹ ಇನ್ನೂ ಅನೇಕ ಸಮರ್ಪಣಾಭಾವದ ಕಲಾವಿದರು ಸೇರಿ ಇಂದು ನಾವು ಯಾವುದನ್ನು ಕಥಕ್ಕಳಿ ಎನ್ನುತ್ತೇವೆಯೋ ಅದಕ್ಕೆ ನೆಲೆಗಟ್ಟನ್ನು ಒದಗಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ