ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಆಗಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅವರ ಪುತ್ರಿ ಉಮಾಹರ್ತಿ ಐಎಎಸ್ ಅಧಿಕಾರಿಯಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆಲಂಗಾಣದ ಪೊಲೀಸ್ ಅಕಾಡೆಮಿಗೆ ಆಗಮಿಸಿದ್ದರು.
ತೆಲಂಗಾಣ: ಮಕ್ಕಳು ತಮಗಿಂತ ಹೆಚ್ಚು ಸಾಧನೆ ಮಾಡಬೇಕು ತಮ್ಮಿಂದ ಎತ್ತರಕ್ಕೆ ಬೆಳೆಯಬೇಕು ಎಂದು ಪ್ರತಿಯೊಬ್ಬರು ಪೋಷಕರು ಬಯಸುತ್ತಾರೆ. ಆದರೆ ತಾವು ಪ್ರೀತಿಯಿಂದ ಸಾಕಿದ್ದ ಮಗಳೋ ಮಗನೋ ತಾನು ಕೆಲಸ ಮಾಡುವ ಇಲಾಖೆಗೆ ಆಗಮಿಸಿ, ಉನ್ನತಾಧಿಕಾರಿಯಾಗಿ ಕಾಣಿಸಿಕೊಂಡು ತಮ್ಮಿಂದಲೇ ಸೆಲ್ಯೂಟ್ ಹೊಡೆಸಿಕೊಂಡರೆ ಹೇಗಿರುತ್ತದೆ? ಇಂತಹ ಅಪರೂಪದ ಅನುಭೂತಿಗೆ ಬೆಲೆ ಕಟ್ಟಲಾಗದು. ಈ ರೀತಿಯ ಅಪರೂಪದ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ ತೆಲಂಗಾಣದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ.
ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಆಗಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅವರ ಪುತ್ರಿ ಉಮಾಹರ್ತಿ ಐಎಎಸ್ ಅಧಿಕಾರಿಯಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆಲಂಗಾಣದ ಪೊಲೀಸ್ ಅಕಾಡೆಮಿಗೆ ಆಗಮಿಸಿದ್ದರು. ಈ ವೇಳೆ ಹುದ್ದೆಯಲ್ಲಿ ತನಗಿಂತ ಉನ್ನತ ಸ್ತರದಲ್ಲಿದ್ದ ಮಗಳಿಗೆ ಸೆಲ್ಯೂಟ್ ಹೊಡೆಯುವ ಹೆಮ್ಮೆಯ ಕ್ಷಣ ಈ ಅಪ್ಪನದ್ದಾಗಿತ್ತು.
undefined
ಅಪ್ಪ ಅಮ್ಮ ಇಬ್ಬರೂ ಐಎಎಸ್: ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಹಾರಿ ಮಗಳು ಸಾವಿಗೆ ಶರಣು
ಐಎಎಸ್ ಅಧಿಕಾರಿಯಾಗಿರುವ ಉಮಾಹರ್ತಿ ಅವರು ತೆಲಂಗಾಣ ಪೊಲೀಸ್ ಅಕಾಡೆಮಿಗೆ ತರಬೇತಿಯ ಸಲುವಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರ ತಂದೆ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅಲ್ಲಿ ಪೊಲೀಸ್ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಅವರು ಅಲ್ಲಿ ತಮ್ಮ ಮಗಳಿಗೆ ಸೆಲ್ಯೂಟ್ ಹೊಡೆದು ಹೂಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ಅಂದಹಾಗೆ ಐಎಎಸ್ ಅಧಿಕಾರಿಯಾಗಿರುವ ಉಮಾಹರ್ತಿ ಅವರು ವಿಕರಾಬಾದ್‌ನಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅಪ್ಪ ಮಗಳ ಈ ಅಪೂರ್ವ ಸಮ್ಮಿಲನದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮತ್ತೊಬ್ಬ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿ ರತ್ನಪ್ರಭಾ ಅವರು ಈ ಪೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಉಮಾಹರ್ತಿ ಐಎಎಸ್ ಅವರು ಅವರ ಹೆಮ್ಮೆಯ ತಂದೆಯಿಂದ ಸೆಲ್ಯೂಟ್ ಹೊಡೆಸಿಕೊಂಡ ಕ್ಷಣ. ಎಂತಹ ಹೃದಯಸ್ಪರ್ಶಿ ಕ್ಷಣ ಎಂದು ರತ್ನಪ್ರಭಾ ಬರೆದುಕೊಂಡಿದ್ದಾರೆ. ಪೋಸ್ಟ್‌ನ್ನು ಸಾವಿರಾರು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೀಷ್ ಟೀಚರ್ ಆಗಿ ಪಾಠ ಮಾಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ ಜಿಲ್ಲಾಧಿಕಾರಿ ದಿವ್ಯಪ್ರಭು!
Ms Umaharthi IAS being saluted by her proud father. What a touching moment. pic.twitter.com/rRfnhE9r2w
— Ratna Prabha (@Ratnaprabha_IAS)