ಕೊರೋನಾ: ಬಟ್ಟೆ ಒಗೆದು ಕೈ ನೋವು ಹೋಯ್ತು ಎಂದ ಸಿಎಂ ಚೌಹಾಣ್..!

Suvarna News   | Asianet News
Published : Jul 28, 2020, 03:41 PM ISTUpdated : Jul 28, 2020, 03:43 PM IST
ಕೊರೋನಾ: ಬಟ್ಟೆ ಒಗೆದು ಕೈ ನೋವು ಹೋಯ್ತು ಎಂದ ಸಿಎಂ ಚೌಹಾಣ್..!

ಸಾರಾಂಶ

ಕೊರೋನಾ ಪಾಸಿಟಿವ್ ಬಂದಾಗಿನಿಂದಲೂ ನನ್ನ ಬಟ್ಟೆಗಳನ್ನು ನಾನೇ ಒಗೆಯುತ್ತಿದ್ದು, ಇದು ನನ್ನ ಕೈಗಳಿಗೇ ಗುಣವಾಗಿ ಪರಿಣಮಿಸಿದೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಭೋಪಾಲ್(ಜು.28): ಕೊರೋನಾ ಪಾಸಿಟಿವ್ ಬಂದಾಗಿನಿಂದಲೂ ನನ್ನ ಬಟ್ಟೆಗಳನ್ನು ನಾನೇ ಒಗೆಯುತ್ತಿದ್ದು, ಇದು ನನ್ನ ಕೈಗಳಿಗೇ ಗುಣವಾಗಿ ಪರಿಣಮಿಸಿದೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ನನ್ನ ಕೈಗೆ ಇತ್ತೀಚೆಗಷ್ಟೇ ಸರ್ಜರಿಯಾಗಿತ್ತು. ಇದರಿಂದ ಕೈಗಳನ್ನು ಮಡಚಿ ಮುಷ್ಠಿ ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಫಿಸಿಯೋ ಥೆರಪಿಯೂ ದೊಡ್ಡ ಪರಿಣಾಮವೇನೂ ಮಾಡಲಿಲ್ಲ.  ಆದರೆ ಸತತವಾಗಿ ಬಟ್ಟೆ ಒಗೆದ ಪರಿಣಾಮ ಕೈ ನೋವು ವಾಸಿಯಾಗಿದೆ ಎಂದಿದ್ದಾರೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್‌ ಚೌಹಾಣ್'ಗೂ ಕೊರೋನಾ ಪಾಸಿಟಿವ್!

ಚೌಹಾಣ್ ಅವರಿಗೆ ಕಳೆದ ವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ಮಂಗಳವಾರ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಕ್ಯಾಬಿನೆಟ್ ಸಭೆಯನ್ನೂ ನಡೆಸಿದ್ದಾರೆ. ವಿಡಿಯೋ ಮೂಲಕ ಮಾತನಾಡಿದ ಅವರು, ಕೊರೋನಾ ಸೋಂಕು ಪಾಸಿಟಿವ್ ಬಂದ ಮೇಲೆ ನನ್ನ ಬಟ್ಟೆ ನಾನೇ ಒಗೆಯುತ್ತಿದ್ದೇನೆ ಎಂದಿದ್ದಾರೆ.

ಇದು ನನಗೆ ಬಹಳ ಪ್ರಯೋಜನವಾಯಿತು. ಹಲವು ಬಾರಿ ಫಿಸಿಯೋಥೆರಪಿ ಚಿಕಿತ್ಸೆಯ ನಂತರವೂ ನನಗೆ ಬೆರಳು ಒಗ್ಗೂಡಿಸಿ ಮುಷ್ಠಿ ಮಾಡಲು ಆಗುತ್ತಿರಲಿಲ್ಲ. ಆದರೆ ಈಗ ಇದು ಸಂಪೂರ್ಣ ಗುಣವಾಗಿದೆ ಎಂದಿದ್ದಾರೆ.

ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದ ಚೌಹಾಣ್

ಸರಣಿ ಟ್ವೀಟ್ ಮಾಡಿದ ಸಿಎಂ, ಕೊರೋನಾ ಲಕ್ಷಣ ಕಂಡು ಬಂದರೆ ಅದನ್ನು ಮುಚ್ಚಿಡಬೇಡಿ, ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಕೊರೋನಾ ಪಾಸಿಟಿವ್ ಬಂದರೆ ಹೆದರಬೇಕಿಲ್ಲ. ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿ. ಚಿಕಿತ್ಸೆ ತೆಗೆದುಕೊಳ್ಳಿ. ಸಕಾಲದಲ್ಲಿ ಸಿಗುವ ಚಿಕಿತ್ಸೆ ಕೋರೋನಾ ಗುಣಪಡಿಸುತ್ತದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌