ಯುದ್ಧದ ಕಾರಣ - ಎಲ್‌ಪಿಜಿ ಪೂರೈಕೆ : ಕೇಂದ್ರ ಸರ್ಕಾರದಿಂದ ದೊಡ್ಡ ವಾರ್ನಿಂಗ್

Kannadaprabha News   | Kannada Prabha
Published : Mar 18, 2026, 04:35 AM IST
LPG

ಸಾರಾಂಶ

‘ಎಲ್‌ಪಿಜಿ ಪೂರೈಕೆ ಇನ್ನೂ ಕಳವಳಕಾರಿಯಾಗಿಯೇ ಇದೆ. ಹಿತಮಿತವಾಗಿ ಬಳಕೆ ಮಾಡಿ’ ಎಂದು ಕೇಂದ್ರ ಸರ್ಕಾರ ಜನತೆಗೆ ಮನವಿ ಮಾಡಿದೆ. ಇದೇ ವೇಳೆ, ಎಲ್‌ಪಿಜಿ ಬದಲಿಗೆ ಪಿಎನ್‌ಜಿ (ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌) ಬಳಕೆಯನ್ನು ಆರಂಭಿಸುವಂತೆಯೂ ಸಲಹೆ ನೀಡಿದೆ.

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ದೇಶದಲ್ಲಿ ಎಲ್‌ಪಿಜಿ ಕೊರತೆ ಮುಂದುವರಿದಿರುವ ನಡುವೆಯೇ, ‘ಎಲ್‌ಪಿಜಿ ಪೂರೈಕೆ ಇನ್ನೂ ಕಳವಳಕಾರಿಯಾಗಿಯೇ ಇದೆ. ಹಿತಮಿತವಾಗಿ ಬಳಕೆ ಮಾಡಿ’ ಎಂದು ಕೇಂದ್ರ ಸರ್ಕಾರ ಜನತೆಗೆ ಮನವಿ ಮಾಡಿದೆ. ಇದೇ ವೇಳೆ, ಎಲ್‌ಪಿಜಿ ಬದಲಿಗೆ ಪಿಎನ್‌ಜಿ (ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌) ಬಳಕೆಯನ್ನು ಆರಂಭಿಸುವಂತೆಯೂ ಸಲಹೆ ನೀಡಿದೆ.

ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಇನ್ನೂ ಕಳವಳಕಾರಿ

ಸದ್ಯದ ಬೆಳವಣಿಗೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಇನ್ನೂ ಕಳವಳಕಾರಿಯಾಗಿಯೇ ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಆದರೆ ನೈಸರ್ಗಿಕ ಅನಿಲದ ವಿಷಯದಲ್ಲಿ ಹಾಗಲ್ಲ. ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಎಲ್‌ಪಿಜಿಯನ್ನು ಹಿತಮಿತವಾಗಿ ಬಳಸುವ ಅಗತ್ಯವಿದೆ. ವಾಣಿಜ್ಯ ಎಲ್‌ಪಿಜಿ ಗ್ರಾಹಕರು ಪಿಎನ್‌ಜಿಗೆ ಬದಲಾಯಿಸಿದರೆ ಉತ್ತಮ’ ಎಂದರು.

ಪ್ಯಾನಿಕ್‌ ಬುಕಿಂಗ್‌ ಇಳಿಕೆ:

ಈ ನಡುವೆ, ‘ಗ್ರಾಹಕರು ಆತಂಕಕ್ಕೆ ಒಳಗಾಗಿ ಎಲ್‌ಪಿಜಿ ಬುಕಿಂಗ್‌ ಮಾಡುವುದು ಕಡಿಮೆಯಾಗಿದೆ. ಮಾ.13ರಂದು 87.7 ಲಕ್ಷ ಸಿಲಿಂಡರ್‌ ಬುಕ್‌ ಆಗಿತ್ತು. ಮಾ.16ಕ್ಕೆ ಈ ಸಂಖ್ಯೆ 70 ಲಕ್ಷಕ್ಕೆ ಇಳಿದಿದೆ. ಯುದ್ಧಪೂರ್ವದಲ್ಲಿ ದಿನಕ್ಕೆ 55 ಲಕ್ಷ ಸಿಲಿಂಡರ್‌ ಬುಕ್‌ ಆಗುತ್ತಿತ್ತು. ಜನ ಈಗ ಆತಂಕದಿಂದ ಹೊರಬಂದು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ’ ಎಂದು ಸುಜಾತಾ ಶರ್ಮಾ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು
ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​: ಬುಕಿಂಗ್​ ಸಮಸ್ಯೆಗೆ ಭರ್ಜರಿ ಪರಿಹಾರ- ನಿಮಿಷಕ್ಕೆ ಒಂದೂವರೆ ಲಕ್ಷ ಟಿಕೆಟ್​ ಲಭ್ಯ