ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ಒಬ್ಬ ದಲಿತ ಅಥವಾ ಆದಿವಾಸಿ ಮಹಿಳೆಯ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಇಂತಹ ಯೋಚನೆಗಳು ಕೇವಲ ‘ಬಾಲ ಬುದ್ಧಿ’ ಉಳ್ಳವರಿಗೆ ಬರಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಆ.26): ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ಒಬ್ಬ ದಲಿತ ಅಥವಾ ಆದಿವಾಸಿ ಮಹಿಳೆಯ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಇಂತಹ ಯೋಚನೆಗಳು ಕೇವಲ ‘ಬಾಲ ಬುದ್ಧಿ’ ಉಳ್ಳವರಿಗೆ ಬರಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
‘ಮಿಸ್ ಇಂಡಿಯಾ ಸ್ಪರ್ಧೆ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರಗಳು ಸರ್ಕಾರದ ಕೈಲಿಲ್ಲ. ಅಲ್ಲೂ ರಾಹುಲ್ ಮೀಸಲಾತಿ ಬಯಸಿದ್ದಾರೆ. ಇದಕ್ಕೆ ಬಾಲಬುದ್ಧಿ ಮಾತ್ರವಲ್ಲ, ಅವರನ್ನು ಪ್ರೋತ್ಸಾಹಿಸುವವರೂ ಸಹ ಅಷ್ಟೇ ಜವಾಬ್ದಾರರು. ನಿಮ್ಮ ವಿಭಜಕ ನೀತಿಗಳಿಗಾಗಿ ಹಿಂದುಳಿದ ವರ್ಗಗಳನ್ನು ಅಣಕಿಸಬೇಡಿ’ ಎಂದು ರಿಜಿಜು ಕಿಡಿ ಕಾರಿದ್ದಾರೆ.
ಜಾತ್ಯತೀತ ನಾಗರಿಕ ಸಂಹಿತೆ ಬಗ್ಗೆ ಮತ್ತೆ ಪ್ರಧಾನಿ ಪ್ರಸ್ತಾಪ : ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪರೋಕ್ಷ ಆಗ್ರಹ
ಜೊತೆಗೆ, ದ್ರೌಪದಿ ಮುರ್ಮು ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ರಾಷ್ಟ್ರಪತಿ. ಮೋದಿ ಒಬಿಸಿಗೆ ಸಮುದಾಯಕ್ಕೆ ಸೇರಿದವರು ಹಾಗೂ ಸಚಿವ ಸಂಪುಟದಲ್ಲಿಯೂ ಎಸ್‌ಸಿ, ಎಸ್ಟಿಗೆ ಸೇರಿದ ಹಲವರಿದ್ದಾರೆ ಎಂದು ರಿಜಿಜು ಹೇಳಿದರು.