
ಲಕ್ನೋ[ಡಿ.22]: ಪೌರತ್ವ ತಿದ್ದುಪಡಿ ಕಾಯ್ದೆಗೆ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಿರುವಾಗ ಫಿರೋಜಾಬಾದ್ ನಲ್ಲಿ ಬೆಚ್ಚಿ ಬಿಳಿಸುವ ಘಟನೆ ನಡೆದಿದೆ. ಪೌರತ್ವ ಕಾಯ್ದೆ ವಿರೋಧಿಸಿ ಶುಕ್ರವಾರ ಇಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್ ಅವರ ಕಿಸೆಯಲ್ಲಿದ್ದ ನಾಣ್ಯ ಪ್ರಾಣ ಕಾಪಾಡಿದೆ.
ವಾಟ್ ಎ ಮ್ಯಾನ್: ಪ್ರಶಾಂತ್ ಕಿಶೋರ್ ಕೊಟ್ರು CAA-NRC ತಡೆಯುವ ಪ್ಲ್ಯಾನ್!
ಹೌದು ಪೊಲೀಸ್ ಸಿಬ್ಬಂದಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ್‌ದರೂ, ಅವರ ಮೇಲೆ ಹಾರಿಸಲಾಗಿದ್ದ ಗುಂಡು ಜಾಕೆಟ್ ಸೀಳಿ ಹೊಕ್ಕಿದೆ. ಹೀಗಿರುವಾಗ ಅವರ ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಪರ್ಸ್ ನಲ್ಲಿದ್ದ ನಾಣ್ಯ ಅವರ ಜೀವ ರಕ್ಷಿಸಿದೆ. ಈ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್ ವಿಜೇಂದ್ರ ಕುಮಾರ್ ತಮ್ಮ ತಂಡದೊಂದಿಗೆ ಡ್ಯೂಟಿಯಲ್ಲಿದ್ದರು. ಹೀಗಿರುವಾಗಲೇ ಗುಂಡಿನ ದಾಳಿ ನಡೆದಿದ್ದು, ಅವದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ಇನ್ನು ವಿಜೇಂದ್ರ ಕುಮಾರ್ ತನ್ನ ಪರ್ಸ್ ಶರ್ಟ್ ಕಿಸೆಯಲ್ಲಿಟ್ಟಿದ್ದರೆನ್ನಲಾಗಿದೆ. ತನ್ನ ಪರ್ಸ್ ನಲ್ಲಿ ಬಹಳಷ್ಟು ನಾಣ್ಯಗಳಿದ್ದವು. ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ಪರ್ಸ್ ಸೀಳಿ ಗುಂಡು ಒಳಹೊಕ್ಕಿದ್ದರೂ ನಾಣ್ಯ ಅದನ್ನು ತಡೆದಿದೆ. ಹೀಗಾಗಿ ಪ್ರಾಣ ಉಳಿದಿದೆ ಎಂಬುವುದು ವಿಜೇಂದ್ರ ಕುಮಾರ್ ಮಾತಾಗಿದೆ. ಈ ನಾಣ್ಯಗಳು ನನಗೆ ಎರಡನೇ ಜೀವ ಕೊಟ್ಟಿದೆ ಎಂದಿದ್ದಾರೆ.
ಒಂದು ಜನಾಂಗ ವಿರೋಧಿಯಾಗಿ ಪೌರತ್ವ ಮಸೂದೆ ಜಾರಿ : CM ಲಿಂಗಪ್ಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ