
ನವದೆಹಲಿ : ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆದ 3 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ ಸೇರಿ 5 ಕಡೆಯ ಕರಡು ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದ್ದು, ಒಟ್ಟಾರೆ 13.36 ಕೋಟಿ ಮತದಾರರಲ್ಲಿ 1 ಕೋಟಿ ಮತದಾರರ ಹೆಸರನ್ನು ಅಳಿಸಲಾಗಿದೆ. 12.32 ಕೋಟಿ ಮತದಾರರು ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ.ಸಾವು, ವಲಸೆ, ಅಕ್ರಮ, ಪುನರಾವರ್ತಿತ ಹೆಸರು, ಅರ್ಜಿ ಸಲ್ಲಿಸದೇ ಇರುವುದು- ಅನೇಕರ ಹೆಸರು ಅಳಿಸಲು ಕಾರಣ.
ಪಶ್ಚಿಮ ಬಂಗಾಳದಲ್ಲಿ, ಅಕ್ಟೋಬರ್ 27 ರ ವೇಳೆಗೆ 7.66 ಕೋಟಿ ಮತದಾರರಲ್ಲಿ, 7.08 ಕೋಟಿ ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ, ಇದು 58 ಲಕ್ಷ ಮತದಾರರ ಹೆಸರು ಕೈಬಿಡಲಾಗಿದೆ.
ರಾಜಸ್ಥಾನದಲ್ಲಿ 5.48 ಕೋಟಿ ಮತದಾರರಲ್ಲಿ, 5.04 ಕೋಟಿ ಜನರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು 44 ಲಕ್ಷ ಹೆಸರು ಅಳಿಸಲಾಗಿದೆ.ಗೋವಾದಲ್ಲಿ, 11.85 ಲಕ್ಷ ಮತದಾರರಲ್ಲಿ, 10.84 ಜನರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 1.01 ಲಕ್ಷ ಜನರ ಹೆಸರು ಅಳಿಸಲಾಗಿದೆ.
ಪುದುಚೇರಿಯಲ್ಲಿ, 10.21 ಲಕ್ಷ ಮತದಾರರಲ್ಲಿ, 9.18 ಲಕ್ಷ ಜನರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1.03 ಲಕ್ಷ ಮತದಾರರನ್ನು ಕಡಿತ ಮಾಡಲಾಗಿದೆ.
ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ 58,000 ಮತದಾರರ ಪೈಕಿ 56,384 ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಮಾರು 1600 ಮತದಾರರ ಹೆಸರು ಕೈಬಿಡಲಾಗಿದೆ.
ಹಾಗಂತ ಹೆಸರು ಸಂಪೂರ್ಣ ರದ್ದಾಗಿಲ್ಲ. ಮುಂದಿನ ವರ್ಷ ಫೆಬ್ರವರಿಯಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಮೊದಲು ಆಯಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಹೆಸರು ರದ್ದಾದವರು ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಿದರೆ ಹೆಸರು ಸೇರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.
ಕೋಲ್ಕತಾ: ಕರಡು ಮತದಾರ ಪಟ್ಟಿಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಸೂರ್ಯ ಡೇ ಅವರನ್ನು ಮೃತ ಎಂದು ಘೋಷಿಸಿ ಅವಾಂತರ ಮಾಡಲಾಗಿದೆ. ಇದನ್ನು ಖಂಡಿಸಿದ ಅವರು, ‘ನಾನು ಸತ್ತಿದ್ದೇನೆಂದು ಚುನಾವಣಾ ಆಯೋಗ ಹೇಳಿದೆ’ ಎಂದು ಕೋಲ್ಕತಾ ಬಳಿಯ ಸ್ಮಶಾನಕ್ಕೆ ನಡೆದು ತಮ್ಮ ಅಂತ್ಯಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ