ಗೋವಾ ನೈಟ್‌ ಕ್ಲಬ್‌ ಮಾಲೀಕರು ಭಾರತಕ್ಕೆ ಗಡೀಪಾರು

Kannadaprabha News   | Kannada Prabha
Published : Dec 17, 2025, 04:31 AM IST
 luthra brothers

ಸಾರಾಂಶ

ಡಿ.6ರಂದು 25 ಮಂದಿಯ ಸಾವಿಗೆ ಕಾರಣವಾಗಿದ್ದ ಗೋವಾದ ಬಿರ್ಚ್‌ ನೈಟ್‌ಕ್ಲಬ್‌ನ ಮಾಲೀಕರಾ ಸೌರಭ್‌ ಲೂಥ್ರಾ ಮತ್ತು ಗೌರವ್‌ ಲೂಥ್ರಾರನ್ನು ಥಾಯ್ಲೆಂಡ್‌ನಿಂದ ಗಡೀಪಾರು ಮಾಡಲಾಗಿದ್ದು, ದಿಲ್ಲಿಗೆ ಬಂದಿಳಿದ ಕೂಡಲೇ ಇಬ್ಬರನ್ನೂ ಬಂಧಿಸಲಾಗಿದೆ.

ನವದೆಹಲಿ : ಡಿ.6ರಂದು 25 ಮಂದಿಯ ಸಾವಿಗೆ ಕಾರಣವಾಗಿದ್ದ ಗೋವಾದ ಬಿರ್ಚ್‌ ನೈಟ್‌ಕ್ಲಬ್‌ನ ಮಾಲೀಕರಾ ಸೌರಭ್‌ ಲೂಥ್ರಾ ಮತ್ತು ಗೌರವ್‌ ಲೂಥ್ರಾರನ್ನು ಥಾಯ್ಲೆಂಡ್‌ನಿಂದ ಗಡೀಪಾರು ಮಾಡಲಾಗಿದ್ದು, ದಿಲ್ಲಿಗೆ ಬಂದಿಳಿದ ಕೂಡಲೇ ಇಬ್ಬರನ್ನೂ ಬಂಧಿಸಲಾಗಿದೆ.

ದಿಲ್ಲಿ, ಗೋವಾ ಪೊಲೀಸ್ ಜಂಟಿ ವಶಕ್ಕೆ

ಮೊದಲು ದಿಲ್ಲಿ ಹಾಗೂ ಗೋವಾ ಪೊಲೀಸರು ಜಂಟಿಯಾಗಿ ಇವರನ್ನು ಬಂಧಿಸಿದರು. ನಂತರ ಕೋರ್ಟು ಇವರನ್ನು 2 ದಿನ ಗೋವಾ ಪೊಲೀಸರ ವಶಕ್ಕೆ ಒಪ್ಪಿಸಿದೆ. ಇಬ್ಬರ ವಿರುದ್ಧ ಉದ್ದೇಶಪೂರ್ವಕವಲ್ಲದ ನರಮೇಧ ಹಾಗೂ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ತಮ್ಮ ನೈಟ್‌ಕ್ಲಬ್‌ನಲ್ಲಿ ಬೆಂಕಿ ದುರಂತ ಸಂಭವಿಸಿದ ಮಾಹಿತಿ ಸಿಗುತ್ತಿದ್ದಂತೆ ಗೌರವ್‌ ಹಾಗೂ ಸೌರಭ್‌ ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಅದಕ್ಕೆ ವೈದ್ಯಕೀಯ ಚಿಕಿತ್ಸೆ ಮತ್ತು ವ್ಯವಹಾರದ ಕಾರಣವನ್ನೂ ನೀಡಿದ್ದರು. ಆದರೆ ಭಾರತ ಸರ್ಕಾರ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ್ದು, ಇದನ್ನು ಆಧರಿಸಿ ಥಾಯ್ಲೆಂಡ್‌ ಅಧಿಕಾರಿಗಳು ಇಬ್ಬರನ್ನು ಡಿ.11ರಂದು ಫುಕೆಟ್‌ನಲ್ಲಿ ಬಂಧಿಸಿದ್ದರು. ಇತ್ತ ದೆಹಲಿ ಕೋರ್ಟ್‌, ಆರೋಪಿಗಳು ಸಲ್ಲಿದಿದ್ದ ಜಾಮೀನು ಅರ್ಜಿಯನ್ನೂ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಬ್ಬರನ್ನೂ ಭಾರತಕ್ಕೆ ಗಡೀಪಾರು ಮಾಡಲಾಗಿದೆ.

ಇನ್ನೊಂದು ರೆಸ್ಟೋರೆಂಟ್‌ಗೆ ಬೀಗ:

ಬಿರ್ಚ್‌ ದುರ್ಘಟನೆಯಿಂದ ಎಚ್ಚೆತ್ತಿರುವ ಗೋವಾ ಅಧಿಕಾರಿಗಳು, ಅಗ್ನಿ ಸುರಕ್ಷತೆ ಸೇರಿದಂತೆ ಹಲವು ಅಗತ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಗೋವಾದಲ್ಲಿರುವ ‘ದ ಕೇಪ್‌ ಗೋವಾ’ ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಸಣ್ಣ ಗುಡುಸಲಿನಂತಹ ರಚನೆಗಷ್ಟೇ ಅನುಮತಿ ಪಡೆದು, ಅದರ ಜಾಗದಲ್ಲಿ ದೊಡ್ಡ ರೆಸ್ಟೋರೆಂಟ್‌ ಕಟ್ಟದ್ದರು ಎಂಬುದೂ ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌: ರಾಗಾ, ಸೋನಿಯಾಗೆ ಭಾಗಶಃ ರಿಲೀಫ್‌
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ