ವಿಸ್ತಾರ ವಿಮಾನಗಳಲ್ಲಿ ವೈದ್ಯರು, ನರ್ಸ್‌ಗಳಿಗೆ ದೇಶಾದ್ಯಂತ ಉಚಿತ ಪ್ರಯಾಣ

By Suvarna NewsFirst Published Apr 26, 2021, 4:05 PM IST
Highlights

ಕೊರೋನಾ ಎರಡನೇ ಅಲೆ, ಅತ್ಯಧಿಕ ಕೇಸ್‌ಗಳ ಜೊತೆ ಭಾರತ ಹೋರಾಡುತ್ತಿರುವ ಸಂದರ್ಭದಲ್ಲಿ ವಿಸ್ತಾರ ವಿಮಾನಗಳು ದೇಶಾದ್ಯಂತ ವೈದ್ಯರು, ದಾದಿಯರನ್ನು ಉಚಿತ ಪ್ರಯಾಣ ನೀಡಲು ಮುಂದಾಗಿದೆ.

ದೆಹಲಿ(ಏ.26): ಕೊರೋನವೈರಸ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ, ವಿಸ್ತಾರ ವಿಮಾನಗಳು ವೈದ್ಯರು ಮತ್ತು ದಾದಿಯರಿಗೆ ದೇಶಾದ್ಯಂತ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡಲಿವೆ. 

ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ವಿಸ್ತಾರಾ ಕೊರೋನಾ ಎದುರಿಸುವಲ್ಲಿ ತಾವೂ ಕೈಜೋಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಫ್ರಂಟ್‌ಲೈನ್ ಸ್ಟಾಫ್‌ಗಳನ್ನು ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ಕೊಡುವುದಾಗಿ ಹೇಳಿದ್ದಾರೆ. ವೈದ್ಯರು ಮತ್ತು ದಾದಿಯರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವುದಾಗಿ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಅವರ ಕೆಲಸ ಮುಗಿದ ನಂತರ ಅವರನ್ನು ಉಚಿತವಾಗಿ ಮರಳಿ ಕರೆತರಲಾಗುತ್ತದೆ ಎಂದಿದ್ದಾರೆ. ಬಿಕ್ಕಟ್ಟಿನ ವಿರುದ್ಧ ಹೋರಾಡಲು ಅಗತ್ಯವಿರುವ ಪ್ರಮುಖ ಉಪಕರಣಗಳ ಸಾಗಣೆಗೆ ಇದು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಈ ಹಿಂದೆ ಪಿಪಿಇ ಕಿಟ್‌, ವೈದ್ಯಕೀಯ ಉಪಕರಣಗಳ ಸಾಗಣೆಗೆ ಸಹಾಯ ಮಾಡಿದ್ದೆವು ಎಂದಿದ್ದಾರೆ. ಈ ಬಾರಿಯೂ ಸಹ ಇದೇ ರೀತಿಯ ಕೊಡುಗೆ ನೀಡಲು ಬಯಸಿರುವುದಾಗಿ ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ. ಆಮ್ಲಜನಕ ಏರ್ಲಿಫ್ಟಿಂಗ್ ಮತ್ತು ಪ್ರಮುಖ ವೈದ್ಯಕೀಯ ವಸ್ತುಗಳ ಸಾಗಣೆಗೆ ಸಹಾಯವಾಗಲು ಭಾರತೀಯ ವಾಯುಪಡೆ ಸಹಾಯ ಮಾಡುತ್ತಿದೆ.

click me!