
ಬೆಂಗಳೂರು (ಜ.4): ಸಾಂಸ್ಕೃತಿಕ ಏಕತೆ ಹಾಗೂ ಮಿಲಿಟರಿ ಸೌಹಾರ್ದತೆಯ ವಿಚಾರ ಬಂದಾಗ ವಿಶ್ವದ ಎಲ್ಲಾ ದೇಶಗಳು ಭಾರತೀಯ ಸೇನೆಯತ್ತ ನೋಡುತ್ತಾರೆ. ಅಂಥದ್ದೊಂದು ಆತ್ಮೀಯ ಸಾಮರಸ್ಯ ಭಾರತದ ಸೇನೆಯಲ್ಲಿದೆ. ಭಾರತೀಯ ಸೇನೆಯ ಹೆಮ್ಮೆಯ ಸೈನಿಕರು ಅಮೆರಿಕದ ಸೈನಿಕರಿಗೆ 'ಜೈ ಶ್ರೀ ರಾಮ್' ಮತ್ತು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಘೋಷಣೆಯನ್ನು ಹೇಳುವುದು ಹೇಗೆ ಎಂದು ತಿಳಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇದು ಎರಡೂ ದೇಶದ ಸೈನಿಕರ ಗಮನಸೆಳೆದಿದೆ. ಭಾರತೀಯ ಸೇನೆಯ ಮದ್ರಾಸ್ ಲೈಟ್ ಇನ್‌ಫ್ಯಾಂಟ್ರಿ ಪಡೆಯ ಯೋಧರು ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ತಿಳಿಸಿಕೊಟ್ಟಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಂಟಿ ಸೇನಾ ಸಮರಾಭ್ಯಾಸದ ವೇಳೆ ತೆಗೆದ ವಿಡಿಯೋ ಎನ್ನಲಾಗಿದೆ. ಭಾರತೀಯ ಸೈನಿಕರು ತಮ್ಮ ಸ್ನೇಹಪರ ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಹೇಳಿದ್ದಾರೆ. ಅಮೇರಿಕನ್ ಸೈನಿಕರು ಸಹ ಪೂರ್ಣ ಉತ್ಸಾಹದಿಂದ ಇದನ್ನು ಹೇಳಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಗೌರವ ಮತ್ತು ಕುತೂಹಲ ಅವರ ಮುಖದಲ್ಲಿ ಈ ಸಮಯದಲ್ಲಿ ಗೋಚರಿಸಿದೆ.
ಇದು ಭಾರತೀಯ ಸೈನಿಕರ ಉದಾರತೆ ಮತ್ತು ಅಮೆರಿಕದ ಸೈನಿಕರ ಕಲಿಕೆ, ಸದ್ಭಾವನೆ ಮತ್ತು ಸ್ನೇಹದ ಮನೋಭಾವವನ್ನು ಸಂಕೇತಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರತೀಯ ಯೋಧರನ್ನು ಕೊಂಡಾಡುತ್ತಿದ್ದಾರೆ. ಅವರು ದೇಶದ ಹೆಮ್ಮೆ, ಸಂಸ್ಕೃತಿಯ ಪಾಲಕರು ಮತ್ತು ಭಾರತ-ಯುಎಸ್ ಸ್ನೇಹಕ್ಕೆ ಬಲವಾದ ಉದಾಹರಣೆ ಎಂದು ಬಣ್ಣಿಸಲಾಗುತ್ತಿದೆ.
ಜಮ್ಮು - ಕಾಶ್ಮೀರದಲ್ಲಿ ಸೇನೆ ಮೇಲೆ ದಾಳಿ: ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಸ್ತಿರೋ ಭಯೋತ್ಪಾದಕರು
ಯುದ್ಧ ಕಲೆ ಮಾತ್ರವಲ್ಲದೆ ಸಾಂಸ್ಕೃತಿಕ ವಿನಿಮಯದ ಮಹತ್ವವನ್ನು ಈ ವಿಡಿಯೋ ತೋರಿಸುತ್ತದೆ ಎಂದು ಕೆಲವರು ಹೇಳಿದ್ದಾರೆ. ಇದು ಎರಡು ದೇಶಗಳ ಸಂಸ್ಕೃತಿಗಳ ನಡುವೆ ಸೇತುವೆಯನ್ನು ಸೃಷ್ಟಿಸುತ್ತದೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುತ್ತದೆ. ಇದು ಭಾರತೀಯ ಸೈನಿಕರ ಶೌರ್ಯ ಮತ್ತು ಸಮರ್ಪಣಾ ಮನೋಭಾವ ಮತ್ತು ಭಾರತ-ಅಮೆರಿಕ ಸ್ನೇಹದ ಬಲಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ
ಭಾರತದ ಹೆಮ್ಮೆಯ ಮಹಿಳೆ.. ಇತಿಹಾಸ ರಚಿಸಿದ ಕ್ಯಾಪ್ಟನ್ ಫಾತಿಮಾ ವಾಸಿಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ