ಮನೆಗೆಲಸಕ್ಕೂ ಮಾಸಿಕ ಸಂಬಳ! ಹೆಂಡತಿಗೆ ಪ್ರತಿ ತಿಂಗಳು ಫಿಕ್ಸ್ಡ್ ಸ್ಯಾಲರಿ ಕೊಡ್ತಿರೋ ಗಂಡ!

Published : Sep 03, 2026, 11:41 AM IST
husband pays wife for housework

ಸಾರಾಂಶ

ಸರ್ಕಾರಿ ಅಧಿಕಾರಿಯಾಗಿರುವ ಪತಿಯೊಬ್ಬರು, ಮನೆಯ ಕೆಲಸ ಮಾಡುವ ತಮ್ಮ ಗೃಹಿಣಿ ಪತ್ನಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿದ್ದಾರೆ. ಮನೆಯ ಖರ್ಚುಗಳನ್ನು ಪ್ರತ್ಯೇಕವಾಗಿ ನೋಡಿಕೊಳ್ಳುವ ಇವರು, ಪತ್ನಿಯ ಶ್ರಮಕ್ಕೆ ಹಣಕಾಸಿನ ಮೌಲ್ಯ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಸಾಮಾನ್ಯವಾಗಿ ಮನೆಯ ಖರ್ಚಿಗೆ ಪತ್ನಿ ಹಣ ಕೇಳಿದಾಗ ಪತಿ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿ, ಮನೆಯ ಕೆಲಸ ಮಾಡುವ ತನ್ನ ಗೃಹಿಣಿ ಪತ್ನಿಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುತ್ತಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಮನೆಗೆಲಸಕ್ಕೆ ಸಂಬಳ ಕೊಡುವ ಅಂತಾ ಪುಣ್ಯಾತ್ಮ ಗಂಡ ಯಾರಪ್ಪ ಅಂತೀರಾ? ಮುಂದೆ.

ಮನೆ ಕೆಲಸ ಅಂದ್ರೆ ಫ್ರೀ ಅಲ್ಲ, ಪತ್ನಿಗೂ ಸಂಬಳ ನೀಡುವ ಪತಿ

ರೆಡ್ಡಿಟ್(Reddit) ಯೂಸರ್ಸ್ ಒಬ್ರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಈ ವ್ಯಕ್ತಿ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಮನೆಯಲ್ಲಿ ಮನೆಯಲ್ಲಿ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಕಸ ಬಳಿಸುವುದು ಇನ್ನಿತರ ಸ್ವಚ್ಛತೆ ಸೇರಿದಂತೆ ಪ್ರತಿನಿತ್ಯದ ಹಲವು ಕೆಲಸಗಳನ್ನು ನೋಡಿಕೊಳ್ತಾರೆ. ಇದರಲ್ಲೇನು ವಿಶೇಷ ಇದೆ? ಪತಿ ಮನೆಯಲ್ಲಿ ಪತ್ನಿ ಮಾಡಬೇಕಾದ ಕೆಲಸಗಳೇ ತಾನೆ? ಅಂತೀರಾ? ಹೌದು ಇವೆಲ್ಲ ಪತ್ನಿ ಮಾಡಬೇಕಾದ ಕೆಲಸಗಳೇ ಆದರೆ ಆಕೆಯ ಪತಿ ಪತ್ನಿ ಮಾಡುವ ಈ ಮನೆ ಕೆಲಸವನ್ನ ಆಕೆಯ ಜವಾಬ್ದಾರಿ ಎಂದು ಪರಿಗಣಿಸದೆ ಅದಕ್ಕೆ ಸ್ಯಾಲರಿ ಸಿಗುವಂತಿರಬೇಕು ಎಂದು ಪ್ರತಿ ತಿಂಗಳು ಆಕೆಗೆ ಮನೆಗೆಲಸಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನ ಸಂಬಳವಾಗಿ ನೀಡುತ್ತಾನೆ.

ಮನೆ ಖರ್ಚು ಬೇರೆ, ಪತ್ನಿಯ ಹಣ ಬೇರೆ!

ಕುತೂಹಲಕಾರಿ ಸಂಗತಿ ಎಂದರೆ, ಪತ್ನಿಗೆ ನೀಡುವ ಈ ಮೊತ್ತವು ಮನೆಯ ಖರ್ಚಿಗಾಗಿ ಅಲ್ಲ. ಮನೆ ಬಾಡಿಗೆ, ದಿನಸಿ, ವಿದ್ಯುತ್ ಬಿಲ್ ಸೇರಿದಂತೆ ಇತರ ಎಲ್ಲಾ ಖರ್ಚುಗಳನ್ನು ಪತಿ ಪ್ರತ್ಯೇಕವಾಗಿ ನೋಡಿಕೊಳ್ಳುತ್ತಾರೆ. ಪತ್ನಿಗೆ ನೀಡುವ ಮಾಸಿಕ ಹಣ ಸಂಪೂರ್ಣವಾಗಿ ಆಕೆಯ ಸ್ವಂತದ್ದು. ಅದನ್ನು ಆಕೆ ಉಳಿತಾಯ ಮಾಡಬಹುದು, ತನಗಾಗಿ ಖರ್ಚು ಮಾಡಬಹುದು ಅಥವಾ ತನ್ನ ತಂದೆ-ತಾಯಿಗೆ ಕಳುಹಿಸಬಹುದು. ಅದಕ್ಕಾಗಿ ಪತಿಯ ಅನುಮತಿ ಪಡೆಯುವ ಅಗತ್ಯವೂ ಇಲ್ಲ.

ಮನೆಗೆಲಸದವಳಿಗೆ ಸಂಬಳ ಕೊಡ್ತೀವಿ, ಪತ್ನಿಗೇಕೆ ₹0?

ಈ ವ್ಯವಸ್ಥೆಯ ಹಿಂದಿನ ಪತಿಯ ತರ್ಕವನ್ನು ರೆಡ್ಡಿಟ್ ಬಳಕೆದಾರರು ವಿವರಿಸಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ಕೆಲಸದಾಳು ಇಟ್ಕೊಳ್ತಿವಿ, ಅಡುಗೆ ಮಾಡುವವರು, ಮನೆ ನೋಡಿಕೊಳ್ಳುವವರನ್ನ ನೇಮಿಸಿಕೊಳ್ತಿವಿ. ಅವರಿಗೆ ಅಂದಿನ ಮಾರ್ಕೆಟ್ ಬೆಲೆಯಂತೆ ಸಂಬಳ ನೀಡಬೇಕಾಗುತ್ತದೆ. ಅದೇ ಕೆಲಸವನ್ನು ಅದೆಷ್ಟೋ ವರ್ಷಗಳಿಂದ ಪತ್ನಿ ಮಾಡುತ್ತಿದ್ದಾಳೆ ಆದರೆ ಆಕೆಗೆ ಏಕೆ ಸಂಬಳ ನೀಡುತ್ತಿಲ್ಲ. ಪತ್ನಿ ಎಂಬ ಕಾರಣಕ್ಕೆ ಸಂಬಳ ಏಕೆ ನೀಡಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.

ಅಂದರೆ, ಪತ್ನಿ ಮನೆಯ ಕೆಲಸ ಮಾಡುತ್ತಿರುವುದನ್ನು ‘ಹೆಂಡತಿಯಾಗಿ ಆಕೆಯ ಕರ್ತವ್ಯ’ ಎಂದು ಮಾತ್ರ ನೋಡದೆ, ಅದನ್ನು ಶ್ರಮ ಎಂದು ಪರಿಗಣಿಸಿದ್ದಾರೆ.

‘ಪತಿಗೆ ಬಾಸ್ ಸ್ಥಾನವಿಲ್ಲ, ಇಬ್ಬರೂ ಸಮಾನರು’

ಈ ವ್ಯವಸ್ಥೆಯಿಂದ ಪತಿ ತನ್ನನ್ನು ಪತ್ನಿಯ ಬಾಸ್ ಎಂದು ಭಾವಿಸುತ್ತಿಲ್ಲ ಎಂಬುದನ್ನೂ ರೆಡ್ಡಿಟ್ ಬಳಕೆದಾರರು ಸ್ಪಷ್ಟಪಡಿಸಿದ್ದಾರೆ. ದಂಪತಿ ತಮ್ಮನ್ನು ಸಮಾನ ಪಾಲುದಾರರೆಂದು ಪರಿಗಣಿಸುತ್ತಾರೆ. ಆದರೆ ಮನೆಯ ಕೆಲಸಕ್ಕೆ ಹಣಕಾಸಿನ ಮೌಲ್ಯ ನೀಡುವ ಮೂಲಕ ಪತ್ನಿಗೆ ಸ್ವತಂತ್ರವಾಗಿ ಖರ್ಚು ಮಾಡುವ ಅವಕಾಶ ಕಲ್ಪಿಸಿದ್ದಾರೆ. ಭಾರತೀಯ ದಂಪತಿ ಹಣಕಾಸನ್ನು ಈ ರೀತಿ ನಿರ್ವಹಿಸುವುದನ್ನು ನಾನು ಹಿಂದೆ ನೋಡಿರಲಿಲ್ಲ. ಸಾಮಾನ್ಯವಾಗಿ ಜಂಟಿ ಖಾತೆ ಇರುತ್ತದೆ ಅಥವಾ ಪತ್ನಿ ಖರ್ಚಿಗೆ ಹಣ ಕೇಳಿದಾಗ ಪತಿ ನೀಡುತ್ತಾರೆ. ಆದರೆ ಈ ರೀತಿ ಪತ್ನಿಯ ಕೆಲಸಕ್ಕೆ ಸಂಬಂಳ ನೀಡುತ್ತಿರುವುದು ಇದೇ ಮೊದಲು ಎಂದು ರೆಡ್ಡಿಟ್ ಯೂಸರ್ಸ್ ಬರೆದುಕೊಂಡಿದ್ದಾರೆ.

'ಸ್ವಂತ ಹಣ ಇದೆ ಎಂಬ ಆತ್ಮವಿಶ್ವಾಸ ಸಿಗುತ್ತದೆ’

ಈ ಪೋಸ್ಟ್‌ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಪತ್ನಿಯ ಕೆಲಸಕ್ಕೆ ಸಂಬಳ ರೂಪದಲ್ಲಿ ಹಣ ನೀಡುವುದರಿಂದ ಗೃಹಿಣಿಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಂತಾಗುತ್ತೆ. ಹೆಂಡತಿ ಮನೆಯ ಎಲ್ಲಾ ಕೆಲಸಗಳನ್ನು ಮಾಡಿಯೂ ಅದಕ್ಕೆ ಯಾವುದೇ ರೀತಿಯ ಮೆಚ್ಚುಗೆ ಸಿಗದಿರುವುದಕ್ಕಿಂತ ಇದು ಉತ್ತಮ. ಪತಿ-ಪತ್ನಿ ಮನೆಯ ಕೆಲಸವನ್ನೂ, ಹಣಕಾಸಿನ ಜವಾಬ್ದಾರಿಯನ್ನೂ ಸಮಾನವಾಗಿ ಹಂಚಿಕೊಳ್ಳುವುದು ಒಳ್ಳೆಯದು. ಆದರೆ ಪ್ರತಿಯೊಂದು ಕುಟುಂಬಕ್ಕೂ ಹೊಂದುವ ವ್ಯವಸ್ಥೆ ವಿಭಿನ್ನವಾಗಿರಬಹುದು ಎಂದು ಒಬ್ಬರು ಹೇಳಿದ್ದಾರೆ.

ಮತ್ತೊಬ್ಬರು ಈ ಆಲೋಚನೆಯನ್ನು ಸಮರ್ಥಿಸಿಕೊಂಡಿದ್ದಾರೆ, ಹಲವು ವರ್ಷಗಳಿಂದ ಮಹಿಳೆಯರು ಮಾಡುವ ಮನೆಯ ಕೆಲಸವನ್ನು ಕೆಲಸವೆಂದೇ ಪರಿಗಣಿಸಲಾಗಿಲ್ಲ. ಪತ್ನಿ ಪ್ರತಿಯೊಂದು ಸಣ್ಣ ಖರ್ಚಿಗೂ ಪತಿಯ ಬಳಿ ಹಣ ಕೇಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಪತಿಗೆ ಒಂದು ರೀತಿಯ ಅಧಿಕಾರ ಸಿಗುತ್ತದೆ. ಆದರೆ ಸ್ವಂತವಾಗಿ ಗಳಿಸಿದ ಹಣವಿದೆ ಎಂಬ ಭಾವನೆ ಪತ್ನಿಗೆ ಆತ್ಮವಿಶ್ವಾಸ ನೀಡುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸಣ್ಣ ವಸ್ತು ಖರೀದಿಗೂ ಹಣ ಕೇಳಬೇಕಾಗಲ್ಲ’

ಇನ್ನೊಬ್ಬ ಯೂಸರ್ಸ್, 'ಇದು ನಿಜಕ್ಕೂ ಒಳ್ಳೆಯ ವಿಚಾರ. ಸ್ವಂತ ಸಂಬಳವಿಲ್ಲದ ಗೃಹಿಣಿ ತಾನು ಖರೀದಿಸಬೇಕೆಂದಿರುವ ಸಣ್ಣ ವಸ್ತುವಿಗೂ ಹಣ ಕೇಳಬೇಕಾದರೆ ಮುಜುಗರವಾಗಬಹುದು. ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾ ಅದಕ್ಕಾಗಿ ಸಮಯ ಮೀಸಲಿಡುತ್ತಿರುವುದರಿಂದ ಆಕೆಗೆ ಈ ಹಣ ಸಿಗುವುದು ನ್ಯಾಯಯುತ” ಎಂದು ಹೇಳಿದ್ದಾರೆ. ಆದರೆ ‘ಹಣ ಕೊಟ್ಟರೆ ವೃತ್ತಿಗೆ ಪರ್ಯಾಯವಾಗಲ್ಲ’ ಎಂದ ಕೆಲವರು ಪ್ರತಿಪಾದಿಸಿದ್ದಾರೆ. ಒಟ್ಟಾರೆ ಎಲ್ಲರೂ ಈ ವ್ಯವಸ್ಥೆಯನ್ನು ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯ ಎಂದು ಒಪ್ಪಿಕೊಂಡಿಲ್ಲ.

ಮನೆಯ ಕೆಲಸಕ್ಕೆ ಹಣದ ಮೌಲ್ಯ ನೀಡಬೇಕೇ? ಅಥವಾ ಅದು ದಾಂಪತ್ಯ ಜೀವನದ ಸಾಮಾನ್ಯ ಜವಾಬ್ದಾರಿಯೇ? ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ದೇಗುಲ ಭದ್ರತೆಗೆ ಆತಂಕ: ಒಂದು ಕಡೆ ನಕಲಿ ವೆಬ್‌ಸೈಟ್, ಇನ್ನೊಂದು ಕಡೆ ಡ್ರೋನ್ ಹಾರಾಟ, ಮೆಟಾ ಗ್ಲಾಸ್ ಬಳಕೆ!
​ಹಾಸ್ಟೆಲ್‌ನಲ್ಲಿದೆಯಾ ದೆವ್ವದ ಕಾಟ? ವದಂತಿ ಬೆನ್ನತ್ತಿ ವಿದ್ಯಾರ್ಥಿಗಳ ಜೊತೆ ರಾತ್ರಿ ನಿದ್ರಿಸಿದ ಜಿಲ್ಲಾಧಿಕಾರಿ