ಹಿಂಸೆ ಸಹಿಸಲ್ಲ: ವಿದ್ಯಾರ್ಥಿಗಳಿಗೆ ಜೆಎನ್‌ಯು ಎಚ್ಚರಿಕೆ

Published : Apr 12, 2022, 01:45 AM IST
ಹಿಂಸೆ ಸಹಿಸಲ್ಲ: ವಿದ್ಯಾರ್ಥಿಗಳಿಗೆ ಜೆಎನ್‌ಯು ಎಚ್ಚರಿಕೆ

ಸಾರಾಂಶ

ಅನಾಮಧೇಯ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ಎಬಿವಿಪಿ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ಎಡಪಂಥೀಯ ವಿದ್ಯಾರ್ಥಿಗಳ ಪ್ರತಿಭಟನೆ ಎಡಪಂಥೀಯ ವಿದ್ಯಾರ್ಥಿಗಳು ಪೂಜೆಗೆ ಅಡ್ಡಿಪಡಿಸಿದರು: ಎಬಿವಿಪಿ ಆರೋಪ ದ್ವೇಷ, ಹಿಂಸೆ ದೇಶವನ್ನು ದುರ್ಬಲಗೊಳಿಸುತ್ತಿದೆ: ರಾಹುಲ್ ಗಾಂಧಿ  

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್‌ಲಾಲ್‌ ವಿಶ್ವವಿದ್ಯಾಲಯದಲ್ಲಿ (Jawaharlal University in Delhi) ರಾಮನವಮಿ (Ramanavami Festival) ಪೂಜೆ ಮತ್ತು ಮಾಂಸಾಹಾರ ಸೇವನೆ ವಿಚಾರವಾಗಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಭಾನುವಾರ ನಡೆದ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಕ್ಯಾಂಪಸ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ, ಹಿಂಸೆಯನ್ನು (violence) ಪ್ರಚೋದಿಸುವ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ.

ಈ ಮಧ್ಯೆ ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರ ಸೇವನೆಗೆ ಅಡ್ಡಿಪಡಿಸಿ ದಾಂಧಲೆ ನಡೆಸಿದ ಆರೋಪ ಸಂಬಂಧ ಅನಾಮಧೆಯ ಎಬಿವಿಪಿ ಕಾರ್ಯಕರ್ತರ (ABVP activists) ವಿರುದ್ಧ ದೆಹಲಿ ಪೊಲೀಸರು (Delhi Police) ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಈ ಮುಂಚೆ ಕ್ಯಾಂಪಸ್‌ ಹೊರಗೆ ಮಾತ್ರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಭಾನುವಾರ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಒಳಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಮಾಂಸಾಹಾರ ಸೇವನೆ ಮಾಡದಂತೆ ದಾಂಧಲೆ ಎಬ್ಬಿಸಿ, ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಎಡಪಂಥೀಯ ವಿದ್ಯಾರ್ಥಿಗಳು (left-wing students)ಸೋಮವಾರ ಕ್ಯಾಂಪಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

JNU ಕ್ಯಾಂಪಸ್‌ಗೆ ನುಗ್ಗಿ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ರಕ್ತ ಸುರಿಯುವಂತೆ ಹಲ್ಲೆ

ಏತನ್ಮಧ್ಯೆ ಮಾಂಸಾಹಾರಕ್ಕೆ ನಮ್ಮ ಆಕ್ಷೇಪವೇ ಇರಲಿಲ್ಲ. ಆದರೆ ರಾಮನವಮಿ ದಿನ ಮಾಂಸಾಹಾರ ವ್ಯವಸ್ಥೆ ಮಾಡದಿರಲು ಒಂದು ವಾರದ ಹಿಂದೆಯೇ ಹಾಸ್ಟೆಲ್‌ನಲ್ಲಿ ನಡೆಸಿದ್ದ ಸಭೆಯಲ್ಲಿ ಅವಿರೋಧವಾಗಿ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಭಾನುವಾರ ಎಡಪಂಥೀಯ ವಿದ್ಯಾರ್ಥಿಗಳು ರಾಮನವಮಿ ಪೂಜಾ ಕಾರ‍್ಯಕ್ರಮಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿದರು ಎಂದು ಎಬಿವಿಪಿ ಆರೋಪಿಸಿದೆ. 

ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದಾರೆ. ನಮ್ಮ ಆಹಾರ ನಮ್ಮ ಹಕ್ಕು, ಅದನ್ನು ಪ್ರಶ್ನಿಸಲು ಯಾರಿಗೂ ಅವಕಾಶವಿಲ್ಲ ಎಂದು  JNUSU  ವಿದ್ಯಾರ್ಥಿ ಸಂಘಟನೆ ಹೇಳಿದೆ. ದೇಶದಲ್ಲಿ ಇದೀಗ ಈ ರೀತಿಯ ಬೆಳವಣಿಗೆ ಹೆಚ್ಚಾಗುತ್ತಿದೆ. ನಮ್ಮ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು JNUSU ಹೇಳಿದೆ. ಆದರೆ JNUSU ಆರೋಪವನ್ನು ಎಬಿವಿಪಿ ತಳ್ಳಿ ಹಾಕಿದೆ. ಇಲ್ಲಿ ಮಾಂಸಾಹಾರದ ಪ್ರಶ್ನೆ ಬಂದಿಲ್ಲ.  ಎಬಿವಿಪಿ ರಾಮನವಮಿ ದಿನ ಪೂಜೆ ಹಾಗೂ ಹವನ ಕಾರ್ಯಕ್ರಮ ಆಯೋಜಿಸಿತ್ತು. ರಾಮನವಮಿ ಆಚರಣೆಗೆ ಹಾಸ್ಟೆಲ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಎಡಪಂಥಿಯರು ತಮಗೆ ಬೇಕಾದ ಹಬ್ಬಗಳನ್ನು ಆಚರಿಸಿಕೊಂಡು, ಇದೀಗ ರಾಮನವಮಿಗೆ ಅಡ್ಡಿಪಡಿಸಿದ್ದಾರೆ. ಪೂಜಾ ಕಾರ್ಯಕ್ರಮಕ್ಕೂ ಅಡ್ಡಿಪಡಿಸಿದ್ದಾರೆ. ಇದಕ್ಕೆ ನಮ್ಮ ಸಂಘಟನೆ ವಿದ್ಯಾರ್ಥಿಗಳು ಪ್ರತಿರೋಧ ತೋರಿದ್ದಾರೆ. ಹೀಗಾಗಿ ಸಂಘರ್ಷ ನಡೆದಿದೆ ಎಂದು ಜೆನ್‌ಯು ಕಾಲೇಜಿನ ಎಬಿವಿಪಿ ಸಂಘಟನೆ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ.

JNU clash ಜೆಎನ್‌ಯುನಲ್ಲಿ ಮಾರಾಮಾರಿ, ವಿದ್ಯಾರ್ಥಿ ಸಂಘಟನೆಗಳ ಬಡಿದಾಟದಲ್ಲಿ ಹಲವರಿಗೆ ಗಾಯ!
ಭಾನುವಾರ ಜೆಎನ್‌ಯು ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ (Kaveri Hostel) ಮಾಂಸಾಹಾರ ಸೇವನೆ ಮತ್ತು ರಾಮನವಮಿ ಪೂಜೆ ವಿಷಯವಾಗಿ ಎಡಪಂಥೀಯ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಅದು ಹಿಂಸಾಚಾರಕ್ಕೆ ತಿರುಗಿತ್ತು. ಎರಡೂ ಗುಂಪಿನ ವಿದ್ಯಾರ್ಥಿಗಳು ಪರಸ್ಪರ ಕಲ್ಲುತೂರಾಟ ನಡೆಸಿದ ಪರಿಣಾಮ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದರು.

ದ್ವೇಷ, ಹಿಂಸೆ ದೇಶವನ್ನು ದುರ್ಬಲಗೊಳಿಸುತ್ತಿದೆ

ದ್ವೇಷ, ಹಿಂಸೆ ಮತ್ತು ಬಹಿಷ್ಕಾರ ಭಾರತವನ್ನು ದುರ್ಬಲಗೊಳಿಸುತ್ತಿವೆ. ಎಲ್ಲರನ್ನು ಒಳಗೊಂಡ ಸೌಹಾರ್ದ ಭಾರತ ನಿರ್ಮಾಣಕ್ಕೆ ಭಾರತೀಯರೆಲ್ಲ ಒಗ್ಗೂಡಬೇಕಿದೆ ಎಂದು ಕಾಂಗ್ರೆಸ್‌ ನಾಯಕ (Congress leader) ರಾಹುಲ್‌ ಗಾಂಧಿ (Rahul Gandhi) ಸೋಮವಾರ ಕರೆ ನೀಡಿದರು. ರಾಮನವಮಿ ಹಿನ್ನೆಲೆಯಲ್ಲಿ ಹಿಮ್ಮತ್‌ನಗರ (Himmatnagar), ಖಂಭತ್‌ (Khambhat)ಮತ್ತು ಜೆಎನ್‌ಯುನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?