ಭಾರತೀಯ ವಾಯುಸೇನೆ, ಜಮ್ಮು ಕಾಶ್ಮೀರದ ಇತಿಹಾಸದ ಮಹತ್ವದ ಕೊಂಡಿ ವಿಂಟೇಜ್ ಡಕೋಟಾ| ಈ ಬಾರಿಯ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಹಾರಾಟ ನಡೆಸಲಿದೆ ಹೆಮ್ಮೆಯ ಡಕೋಟಾ| ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ಲೋಹದ ಹಕ್ಕಿ ಹಾರಾಟ ಈ ಬಾರಿಯ ವಿಶೇಷ
ನವದೆಹಲಿ(ಜ.22): ಆಧುನಿಕ ಸೂಪರ್ಸಾನಿಕ್ ಯುದ್ಧ ವಿಮಾನಗಳ ಗುಡುಗಿನ ಘರ್ಜನೆಯ ಮಧ್ಯೆ, ಈ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮತ್ತೊಂದು ವಿಶೇಷವಿರಲಿದೆ. ರಷ್ಯಾ ಮೂಲದ ಎರಡು ಆಧುನಿಕ Mi -17 ಹೆಲಿಕಾಪ್ಟರ್‌ಗಳೊಂದಿಗೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ ಕೂಡಾ ಈ ಬಾರಿ ರಾಜಪಥದಲ್ಲಿ ಹಾರಾಟ ನಡೆಸಲಿದೆ.
ಸೇನೆಯಿಂದ 5000 ಕೋಟಿ ರು ಮೊತ್ತದ ತುರ್ತು ಖರೀದಿ!
ಭಾರತೀಯ ವಾಯುಸೇನೆಯ ವಿಂಟೇಜ್ ಡಕೋಟಾ ಎಂಬ ಲೋಹದ ಹಕ್ಕಿ ಅಂತಿಂತಾ ಯುದ್ಧ ವಿಮಾನವಲ್ಲ. 1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಈ ಯುದ್ಧ ವಿಮಾನದ ಪಾತ್ರ ಬಹಳ ಮಹತ್ವದ್ದು. ಅಂದು ಇದೇ ಲೋಹದ ಹಕ್ಕಿ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದ ತಾಂಗೈಲ್‌ಗೆ ಸೈನಿಕರನ್ನು ಕರೆದೊಯ್ದು ಏರ್ ಡ್ರಾಪ್ ಮಾಡಿತ್ತು.
ವಿಂಟೇಜ್ ಡಕೋಟಾ ಯುದ್ಧ ವಿಮಾನ
ಇಷ್ಟೇ ದೇಶ ಸ್ವಾತಂತ್ರ್ಯ ಪಡೆದ ಬಳಿಕ 1947-48ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ವೇಳೆಯೂ ಇದು ಬಹಳ ಮಹತ್ವದ ಪಾತ್ರ ವಹಿಸಿದೆ. ಅಕ್ಟೋಬರ್ 26, 1947ರಲ್ಲಿ ಕಾಶ್ಮೀರ ಮಹಾರಾಜ ಮಾಡಿದ ಒಪ್ಪಂದದ ಸಂದರ್ಭದಲ್ಲಿ ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಉಗ್ರರಿಂದ ಶ್ರೀನಗರ ಹಾಗೂ ಇಲ್ಲಿನ ಏರ್‌ಪೋರ್ಟ್ ಕಾಪಾಡಿಕೊಳ್ಳಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದು ಅಲ್ಲಿಗೆ ಸೈನಿಕರ ರವಾನೆ ಅನಿವಾರ್ಯವಾಗಿತ್ತು.
‘ಯುದ್ಧ ಸನ್ನದ್ಧ’ ಡ್ರೋನ್ ಪಡೆ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ತಾಲೀಮು!
ಇಂತಹ ವಿಷಮ ಸ್ಥಿತಿಯಲ್ಲಿ ಅಕ್ಟೋಬರ್ 27, 1947ರಂದು ಮೂರು ಡಕೋಟಾ ಯುದ್ಧ ವಿಮಾನಗಳ ಮೂಲಕ ಮೊದಲ ಸಿಖ್ ರೆಜಿಮೆಂಟ್ ಸೈನಿಕರು ಶ್ರೀನಗರಕ್ಕೆ ತಲುಪಿದ್ದರು. ಅಲ್ಲದೇ ಇದಾದ ಕೇವಲ ಒಂದು ವಾರದೊಳಗೆ ಇಡೀ ಪಡೆಯನ್ನು ಈ ಲೋಹದ ಹಕ್ಕಿಗಳು ಶ್ರೀನಗರಕ್ಕೆ ಏರ್‌ಲಿಫ್ಟ್ ಮಾಡಿತ್ತು.
ಹೀಗಿರುವಾಗ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ 50 ನೇ ವರ್ಷದ ಸಂದರ್ಭದಲ್ಲಿ ಭಾರತವು ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶದ ಸೇನಾಪಡೆಗೆ ಆಹ್ವಾನ ನೀಡಿತ್ತು. ಈ ಆಮಂತ್ರಣವನ್ನು ಬಾಂಗ್ಲಾದೇಶ ಸ್ವೀಕರಿಸಿದ್ದು, ಈಗಾಗಲೇ 122 ಬಾಂಗ್ಲಾ ಯೋಧರ ಪಡೆಯೊಂದು ದೆಹಲಿಗೆ ತಲುಪಿದ್ದು, ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ.
'ಭಾರತದ ಸಹನೆ ಪರೀಕ್ಷಿಸಲು ಬರಬೇಡಿ, ಗಲ್ವಾನ್ ವೀರರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ!'
ಇಂತಹ ಅಸಾಮಾನ್ಯ ಸಾಧನೆಗೈದ ವಿಂಟೇಜ್ ಡಕೋಟಾ, ಎರಡು Mi-171V ಯುದ್ಧ ವಿಮಾನಗಳೊಂದಿಗೆ ಆಗಸದಲ್ಲಿ ತನ್ನ ಹಾರಾಟ ನಡೆಸಲಿದೆ. ಅತ್ತ ಲೋಹದ ಹಕ್ಕಿ ವೇದಿಕೆ ಮೇಲಿನ ಗಣ್ಯರಿಗೆ ಆಗಸದಿಂದ ಗೌರವ ನೀಡಿದರೆ ಇತ್ತ ಬಾಂಗ್ಲಾ ಪಡೆ ಪರೇಡ್ ಮೂಲಕ ಗೌರವ ಸಲ್ಲಿಸಲಿದೆ.
ಗುಜರಿಗೆ ಹಾಕಲಾಗಿದ್ದ ಈ ವಿಮಾನವನ್ನು 2011 ರಲ್ಲಿ ಹಿಂಪಡೆದು ಬ್ರಿಟನ್ ಸಹಾಯದಿಂದ ಮತ್ತೆ ಹಾರಾಡುವಂತೆ ಮಾಡಿದ, ರಾಜ್ಯಸಭಾ ಸಂಸದ ಮತ್ತು ಬಿಜೆಪಿಯ ನಾಯಕ ರಾಜೀವ್ ಚಂದ್ರಶೇಖರ್ ಇದನ್ನು ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದ್ದಾರೆ. 2018ರ ವಾಯುಸೇನಾ ದಿನದಂದು ಮಾತನಾಡಿದ್ದ ಆರ್‌ಸಿ 'ಡಕೋಟಾ ತನ್ನ ಮೊದಲ ಫ್ಲೈ ಪಾಸ್ಟ್‌ನಲ್ಲಿ ಭಾಗವಹಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಡಕೋಟಾ ವಾಯುಸೇನಾ ಹಾಗೂ ಜಮ್ಮು ಕಾಶ್ಮೀರ ಇತಿಹಾಸದ ಮಹತ್ವದ ಕೊಂಡಿ. 1947ರಲ್ಲಿ ಈ ಲೋಹದ ಹಕ್ಕಿ ಹಾರಾಟ ನಡೆಸದೆ, ಸೈನಿಕರನ್ನು ಶೀಘ್ರವಾಗಿ ರವಾನಿಸದಿದ್ದರೆ ಇಂದು ಶ್ರೀನಗರ ಭಾಗರತ ಭಾಗವಾಗಿರುತ್ತಿರಲಿಲ್ಲ ಎಂದಿದ್ದರು.
ವರದಿ: ಅನೀಶ್ ಸಿಂಗ್