
ಉನ್ನಾವ್ (ಉ.ಪ್ರ.): ಪೊಲೀಸ್ ಇಲಾಖೆಯವರು ಲಂಚ ತೆಗೆದುಕೊಂಡಾದರೂ ಹೇಳಿದ ಕೆಲಸವನ್ನು ಮಾಡಿಕೊಡುತ್ತಾರೆ. ಆದರೆ ಇನ್ನುಳಿದ ಇಲಾಖೆಯವರು ಲಂಚವನ್ನು ಪಡೆದುಕೊಂಡರೂ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಸ್ವತಃ ಪೊಲೀಸರೇ ಹೇಳಿದ್ದಾರೆ . ಉತ್ತರ ಪ್ರದೇಶದ ಉನ್ನಾವೋನಲ್ಲಿ ಆಯೋಜಿಸಿದ ‘ಪೊಲೀಸ್ ಕೀ ಪಾಠಶಾಲಾ’ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಇಂತಹ ಹೇಳಿಕೆಯನ್ನು ನೀಡಿದ್ದು ಸಾಮಾಜಿಕ ಜಾಲತಾಣ (social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಭಿಘಾಪುರ್‌ದ ಜಿಲ್ಲಾ ಮ್ಯಾಜಿಸ್ಪ್ರೇಟ್‌ರನ್ನು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಈ ವಿಡಿಯೋದಲ್ಲಿ ಉತ್ತರ ಪ್ರದೇಶ (Uttar Pradesh) ದ ಪೊಲೀಸ್ ಒಬ್ಬರು ಲಂಚ ಪಡೆದಾದರೂ ನಾವು ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಲಂಚದ ಕಾರುಬಾರು ಬಹಳ ಜೋರಾಗಿಯೇ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಆಯೋಜಿಸಿದ್ದ 'ಪೊಲೀಸ್ ಕೀ ಪಾಠಶಾಲಾ' ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಜೊತೆ ಪೊಲೀಸರು ಸಂವಾದ ನಡೆಸುತ್ತಿದ್ದರು. ಪೊಲೀಸರು ಹಣ ತೆಗೆದುಕೊಂಡರೆ ಕೆಲಸ ಮುಗಿಯುತ್ತದೆ ಎಂದು ಪೊಲೀಸ್ ಪೇದೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪೊಲೀಸರು, ಪೊಲೀಸ್ ಇಲಾಖೆಗಿಂತ ಉತ್ತಮ ಇಲಾಖೆ ಇಲ್ಲ ಎಂದು ಹೇಳಿದ್ದಾರೆ. ಇಂದಿಗೂ ಪ್ರಾಮಾಣಿಕ ಇಲಾಖೆ ಇದ್ದರೆ ಅದು ಪೊಲೀಸ್ ಇಲಾಖೆಯೇ. ಪೊಲೀಸರು ನಿಮ್ಮಿಂದ ಹಣ ಪಡೆದು ಕೆಲಸ ಮಾಡುವುದಾಗಿ ಹೇಳಿದರೆ ಕೆಲಸ ಆಗುವಂತೆ ನೋಡಿಕೊಳ್ಳುತ್ತಾರೆ. ಬೇರೆ ಇಲಾಖೆಗಳಲ್ಲಿ ಹಣ ಕೊಟ್ಟರೂ ಓಡಬೇಕು. ಶಿಕ್ಷಕರನ್ನು ನೋಡಿ, ಅವರು ಮನೆಯಲ್ಲಿಯೇ ಕುಳಿತು ಕಲಿಸುತ್ತಾರೆ, ಮತ್ತು ಕೊರೊನಾ ವೈರಸ್ ಬಂದರೆ, ಅವರು ಒಂದು ವರ್ಷ ಶಾಲೆಗೆ ಬರುವುದಿಲ್ಲ. ಆದರೆ, ಕೊರೊನಾ ವೈರಸ್ ಇದ್ದರೆ ನಮ್ಮ ಕರ್ತವ್ಯ ಹೆಚ್ಚಾಗುತ್ತದೆ, ಎಂದು ಪೋಲೀಸ್ ಹೇಳುತ್ತಿರುವುದು ವೀಡಿಯೊದಲ್ಲಿ ಇದೆ.
ಈ ವಿಡಿಯೋವನ್ನು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಏತನ್ಮಧ್ಯೆ, ಉನ್ನಾವ್ ಪೊಲೀಸರು ವೀಡಿಯೊವನ್ನು ಗಮನಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ಪ್ರಸ್ತುತ ಈ ರೀತಿ ಹೇಳಿಕೆ ನೀಡಿದವರನ್ನು ಬಿಘಾಪುರ್‌ದ ಪೊಲೀಸ್ ಠಾಣೆಯ ಎಸ್‌ಐ ಉಮೇಶ್ ತ್ರಿಪಾಠಿ (Umesh Tripathi) ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಸೂಪರಿಟೆಂಡೆಂಟ್ ಆಪ್ ಪೊಲೀಸ್ ಶಾಹಿ ಶೇಖರ್ ಸಿಂಗ್ (Shahi Shekhar Singh) ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
Bribe Case: ಒತ್ತಡಕ್ಕೆ ಮಣಿದರೇ ಯಾದಗಿರಿ ಎಸ್ಪಿ ಡಾ.ವೇದಮೂರ್ತಿ?
ಬಿಘಪುರ್ (Bighapur) ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸಂಪೂರ್ಣ ವಿಷಯದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಕಳುಹಿಸಲು ಸೂಚಿಸಲಾಗಿದೆ ಎಂದು ಉನ್ನಾವ್ (Unnao) ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Conman Sukesh Crime World: ನಟಿಯರ ಭೇಟಿಗೆ ಅಧಿಕಾರಿಗಳಿಗೆ ಕೋಟಿ ಕೋಟಿ ಕೊಟ್ಟಿದ್ದ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ