ಬೆಂಗಳೂರಿನ ಶಾಲಾ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

Published : Aug 22, 2021, 06:55 PM IST
ಬೆಂಗಳೂರಿನ ಶಾಲಾ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ಸಾರಾಂಶ

ದೇಶದೆಲ್ಲೆಡೆ ಇಂದು ರಕ್ಷಾ ಬಂಧನ ಹಬ್ಬ ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಜೊತೆ ಉಪರಾಷ್ಟ್ರಪತಿ ರಾಖಿ ಕಟ್ಟಿಸಿಕೊಂಡು ರಕ್ಷಾ ಬಂಧನ ಆಚರಿಸಿದ ವೆಂಕಯ್ಯ ನಾಯ್ಡು

ಬೆಂಗಳೂರು(ಆ.22): ದೇಶದಲ್ಲೆಡೆ ಇಂದು ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬ ಆಚರಿಸಲಾದಿದೆ. ಅಣ್ಣ ತಂಗಿಯರ ವಿಶೇಷ ಹಬ್ಬವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಚರಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ವೆಂಕಯ್ಯ ನಾಯ್ಡು ಇಂದು ಬೆಂಗಳೂರಿನ ರಾಜಭವನದಲ್ಲಿ ರಾಖಿ ಹಬ್ಬ ಆಚರಿಸಿದರು.

 

ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!

ಬೆಂಗಳೂರಿನ ಶಾಲಾ ಮಕ್ಕಳ ಜೊತೆ ವೆಂಕಯ್ಯ ನಾಯ್ಡು ರಕ್ಷಾ ಬಂಧನ ಹಬ್ಬ ಆಚರಿಸಿದರು. ಶಾಲಾ ಮಕ್ಕಳು ಉಪರಾಷ್ಟ್ರಪತಿ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬನ್ನು ಸ್ಮರಣೀಯವಾಗಿಸಿದರು. ರಾಖಿ ಹಬ್ಬಕ್ಕಾಗಿ ರಾಜಭವನಕ್ಕ ಆಗಮಿಸಿದ ಶಾಲಾ ಮಕ್ಕಳಿಗೆ ವೆಂಕಯ್ಯ ನಾಯ್ಡು ಶುಭಕೋರಿದರು.

 

ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ಪ್ರತಿಯೊಬ್ಬ ಮಹಿಳೆ, ಮಕ್ಕಳಿಗೆ ಗೌರವ ಹಾಗೂ ರಕ್ಷಣೆ ನೀಡಬೇಕು ಎಂದು ವೆಂಕಯ್ಯ ನಾಯ್ಡು ರಕ್ಷಾ ಬಂಧನ ಹಬ್ಬದ ದಿನ ವಿಶೇಷ ಮನವಿ ಮಾಡಿದರು. ರಕ್ಷಾ ಬಂಧನ ಹಬ್ಬ ಸಹೋದರ - ಸಹೋದರಿಯರ ನಡುವಿನ ಪ್ರೀತಿ ಮತ್ತು ಗೌರವದ  ಆಚರಣೆಯಾಗಿದೆ ಎಂಂದು ಹಬ್ಬದ ಮಹತ್ವ ಸಾರಿದರು.

 

ಬೆಂಗಳೂರಿನಲ್ಲಿ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ!

ರಕ್ಷಾ ಬಂಧನ ಹಬ್ಬ ನಾಗರಿಕರಲ್ಲಿ ಸಹೋದರತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ.  ಇದರಿಂದ ನಮ್ಮ ರಾಷ್ಟ್ರ ಬಲಿಷ್ಠವಾಗುತ್ತದೆ. ಇದೇ ವೇಳೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ವೆಂಕಯ್ಯ ನಾಯ್ಡು ಶ್ಲಾಘಿಸಿದರು. ಈ ಸಂಸ್ಕೃತಿಯಿಂದ ಹಿರಿಯನ್ನು ಗೌರವಿಸಲು, ಕುಟುಂಬಸ್ಥರ ನುಡವಿನ ಪ್ರೀತಿ, ಬಾಂಧವ್ಯ ಗಟ್ಟಿಯಾಗಿಸಲು ಸಾಧ್ಯವಾಗಿದೆ. ಭಾರತದಲ್ಲಿ ಹಬ್ಬದ ಸಂದರ್ಭದಲ್ಲಿ ಕುಟುಂಬಗಳು ಒಂದಾಗಿ ಆಚರಿಸುತ್ತವೆ. ಇದುವೇ ಹಬ್ಬದ ನಿಜವಾದ ಉದ್ದೇಶ ಎಂದು ರಾಷ್ಟ್ರಪತಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?