ಬೆಂಗಳೂರಿನಲ್ಲಿ ಕೆರೆ ಸಂರಕ್ಷಣೆ, ಪುನಶ್ಚೇತನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ!

By Suvarna NewsFirst Published Aug 16, 2021, 7:52 PM IST
Highlights
  • ಕರ್ನಾಟಕ ಪ್ರವಾಸದಲ್ಲಿ ಉಪರಾಷ್ಟ್ರಪತಿ ನಾಯ್ಡು
  • ಬೆಂಗಳೂರಿನ ಜಲ ಕಾಯ ಸಂರಕ್ಷಣೆಗೆ ನಾಯ್ಡು ಕರೆ
  • ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ವೆಂಕಯ್ಯ ನಾಯ್ಡು ಭಾಷಣ

ಬೆಂಗಳೂರು(ಆ.16):  ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು 6 ದಿನಗಳ ರಾಜ್ಯ ಪ್ರವಾಸದಲ್ಲಿದ್ದಾರೆ.   ಬೆಂಗಳೂರಿನ ಜವಾಹರಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ(ಜೆ.ಎನ್.ಸಿ.ಎ.ಎಸ್.ಆರ್) ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಬೆಂಗಳೂರಿನಲ್ಲಿರುವ ಕರೆ ಹಾಗೂ ಜಲಕಾಯಗಳನ್ನು ರಕ್ಷಿಸಲು ಕರೆ ನೀಡಿದರು. 

ಮೈಸೂರು ಪೇಟ ತೊಡಿಸಿ ಉಪರಾಷ್ಟ್ರಪತಿಯನ್ನ ಸ್ವಾಗತಿಸಿದ ಸಿಎಂ

ಬೆಂಗಳೂರು ಹೆಚ್ಚಿನ ಸಂಖ್ಯೆಯ ಕೆರೆಗಳಿಂದ ಆಶೀರ್ವದಿಸಲ್ಪಟ್ಟಿದೆ. ಜನರ ನಿರ್ಲಕ್ಷ್ಯ ಅಥವಾ ಅಕ್ರಮ, ಅತಿಕ್ರಮಣಗಳಿಂದಾಗಿ ಈ ಜಲಕಾಯಗಳಲ್ಲಿ ಅನೇಕವು ಅವನತಿ ಹೊಂದುತ್ತಿವೆ ಎಂದು ವೆಂಕಯ್ಯ ನಾಯ್ಡು ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ಮತ್ತು ಅದರಾಚೆಗಿನ ಕೆರೆಗಳ ಪುನರುತ್ಥಾನ ಮತ್ತು ಸಂರಕ್ಷಣೆಗೆ ಸಕಲ ಪ್ರಯತ್ನಗಳನ್ನು ಮಾಡಲು ನಾಯ್ಡು ಕರೆ ನೀಡಿದರು.

ಇದೇ ವೇಳೆ ವಿಜ್ಞಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದರು.  ಹವಾಮಾನ ಬದಲಾವಣೆಯಿಂದ ಕೃಷಿ, ಆರೋಗ್ಯ ಮತ್ತು ವೈದ್ಯಕೀಯದವರೆಗೆ ಮಾನವಕುಲ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು ವಿನೂತನ ಪರಿಹಾರಗಳನ್ನು ಶೋಧಿಸುವಂತೆ ಕರೆ ನೀಡಿದರು. ಜನರ ಜೀವನವನ್ನು ಸುಧಾರಿಸಲು ಸಂಶೋಧನೆಗಾಗಿ ಶ್ರಮಿಸುವಂತೆ ವಿಜ್ಞಾನಿಗಳಿಗೆ ಉಪರಾಷ್ಟ್ರಪತಿ ಒತ್ತಾಯಿಸಿದರು. ವಿಜ್ಞಾನದ ಉದ್ದೇಶ ಜನರ ಜೀವನವನ್ನು ಸಂತೋಷ, ಆರೋಗ್ಯಕರ ಮತ್ತು ಆರಾಮದಾಯಕವಾಗಿ ಮಾಡುವುದಾಗಿದೆ ಎಂದರು. 

ರಾಜ್ಯಸಭೆ ಗದ್ದಲ: ಶೀಘ್ರ ಸಂಸದರ ವಿರುದ್ಧ ಕ್ರಮ ?

ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತವಾಗಬೇಕು ಎಂದು ಒತ್ತಿ ಹೇಳಿದರು.  ಜೆ.ಎನ್.ಸಿ.ಎ.ಎಸ್.ಆರ್ 3೦೦ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಸೃಷ್ಟಿಸಿದೆ. ಸ್ಥಳೀಯ ಆವಿಷ್ಕಾರಗಳ ಆಧಾರದ ಮೇಲೆ ಕೆಲವು ನವೋದ್ಯಮಗಳ ಸ್ಥಾಪನೆಯನ್ನೂ ಉತ್ತೇಜಿಸಿದೆ ಎಂದು ಅವರು ಶ್ಲಾಘಿಸಿದರು.

ಯಾವುದೇ ದೇಶದ ಪ್ರಗತಿ ಮತ್ತು ತಾಂತ್ರಿಕ ಪ್ರಗತಿಗೆ ವಿಜ್ಞಾನವು ಬೆನ್ನೆಲುಬಾಗಿದೆ ಎಂಬುದನ್ನುಉಪರಾಷ್ಟ್ರಪತಿ ಪ್ರಸ್ತಾಪಿಸಿದರು  ಭಾರತದ ಬೃಹತ್ ಜನಸಂಖ್ಯಾ ಪ್ರಯೋಜನವನ್ನು ಉಲ್ಲೇಖಿಸಿ, ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ವಿಶ್ವದರ್ಜೆಯ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಜೆ.ಎನ್.ಸಿ.ಎ.ಎಸ್.ಆರ್. ತನ್ನ ಪರಿಣತಿಯ ಕ್ಷೇತ್ರಗಳಲ್ಲಿ ಉನ್ನತ ಸಂಸ್ಥೆಗಳಲ್ಲಿ ಸ್ಥಾನಗಳಿಸುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅತ್ಯುತ್ತಮ ಪ್ರಭಾವ ಬೀರಿದೆ ಎಂದು ಶ್ಲಾಘಿಸಿದ ಅವರು, ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಸಂಶೋಧನಾ ಫಲಶ್ರುತಿಗಳನ್ನು ಸುಧಾರಿಸಲು ಇದು ಅಪಾರ ಕೊಡುಗೆ ನೀಡಬಹುದು ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿ 2020ರ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಹೊಸ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಿದರು. 'ಇದು ಸರಿಯಾದ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಅವರ ಜ್ಞಾನದ ನೆಲೆಯನ್ನು ಶ್ರೀಮಂತಗೊಳಿಸುತ್ತದೆ ಮತ್ತು ಅವರ ಕೌಶಲ್ಯವನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.

ತಮ್ಮ ಗುರಿಗಳನ್ನು ಸಾಧಿಸಲು ಯಾವುದೇ ಅವಕಾಶವನ್ನು ಕೈಚೆಲ್ಲಬೇಡಿ ಎಂದು ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ತಿಳಿಸಿದರು. "ಕಠಿಣ ಪರಿಶ್ರಮಕ್ಕೆ ಪರ್ಯಾಯ ಯಾವುದೂ  ಇಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ. ನೀವು ಯಾವಾಗಲೂ ಎಲ್ಲೆಗಳನ್ನು ದಾಟಿ ಸಾಧಿಸಲು ಪ್ರಯತ್ನಿಸಬೇಕು ಮತ್ತು ಯಥಾಸ್ಥಿತಿಯ ಬಗ್ಗೆ ತೃಪ್ತರಾಗಬಾರದು ಅಥವಾ ಸಂತೃಪ್ತರಾಗಬಾರದು", ಎಂದು ಅವರು ಸಲಹೆ ನೀಡಿದರು.

ಪ್ರತಿಷ್ಠಿತ ಅಂತಾರಾಷ್ಟ್ರೀಯ ಎನಿ ಪ್ರಶಸ್ತಿ 2020ಕ್ಕೆ ನಾಮನಿರ್ದೇಶನಗೊಂಡಿರುವ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಅಭಿನಂದಿಸಿದ ಅವರು, ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಯುವ ವಿಜ್ಞಾನಿಗಳಿಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.

click me!