ಕೇರಳದಲ್ಲಿ ಕೊರೋನಾತಂಕ, ಖುದ್ದು ಅಖಾಡಕ್ಕೆ ಇಳಿದ ಕೇಂದ್ರ ಆರೋಗ್ಯ ಸಚಿವ!

By Suvarna NewsFirst Published Aug 16, 2021, 5:39 PM IST
Highlights

* ಕೇರಳದಲ್ಲಿ ಕೊವಿಡ್ ಹೆಚ್ಚಳ ಹಿನ್ನೆಲೆ 

* ಖುದ್ದು ಅಖಾಡಕ್ಕೆ ಇಳಿದ ಕೇಂದ್ರ ಆರೋಗ್ಯ ಸಚಿವ

* ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಕೇರಳಕ್ಕೆ ಭೇಟಿ

* ಸಚಿವರಿಗೆ ಎನ್ ಸಿಡಿಸಿ ಸದಸ್ಯರು ಹಿರಿಯ ಅಧಿಕಾರಿಗಳು ಸಾಥ್

ತಿರುವನಂತಪುರಂ(ಆ.19): ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇಂದ್ರದ ತಂಡ ಇಲ್ಲಿ ಆಗಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇರಳದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಟಟ್ಟೆಚ್ಚರ ವಹಿಸಲಾಗಿದೆ. ಅಲ್ಲದೇ ನೆಗೆಟಿವ್ ಆರ್‌ಟಿ ಪಿಸಿಆರ್‌ ಟೆಸ್ಟ್ ವರದಿ ತರುವುದೂ ಅತೀ ಅಗತ್ಯವಾಗಿದೆ. ಸದ್ಯ ಇಲ್ಲಿನ ಕೊರೋನಾ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಖುದ್ದು ಅಖಾಡಕ್ಕಿಳಿದಿದ್ದಾರೆ.

ಹೌದು ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಕೇರಳಕ್ಕೆ ಭೇಟಿ ನೀಡಿದ್ದು, ಸಚಿವರಿಗೆ ಎನ್ ಸಿಡಿಸಿ ಸದಸ್ಯರು ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಎನ್ ಸಿಡಿಸಿ- ರಾಷ್ಟ್ರೀಯ ರೋಗ ನಿರೋಧಕ ನಿಯಂತ್ರಣ ಮಂಡಳಿಯಾಗಿದೆ.

ದೇಶದ ಒಟ್ಟು ದೇಶದ ಕೊರೋನಾ ಪ್ರಕರಣಗಳಲ್ಲಿ ಶೇಕಡಾ 50%ರಷ್ಟು ಕೇರಳದಲ್ಲಿ ದಾಖಲಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇನ್ನು ಇಲ್ಲಿನ ಕೊರೋನಾ ಪಾಸಿಟಿವ್ ದರ ಶೇ 15.11 ಆಗಿದೆ ಎಂಬುವುದು ಉಲ್ಲೇಖನೀಯ.

ಇನ್ನು ಕೇರಳಕ್ಕೆ ಭೇಟಿ ನೀಡಲಿರುವ ಆರೋಗ್ಯ ಸಚಿವ ಮಾಳವೀಯ ಕೇರಳ ಸಿಎಂ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ವೀಣಾ ಜಾಜ್೯ ಜೊತೆ ಕೊರೋನಾ ನಿಯಂತ್ರಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

click me!