Tablighi Jamaat : ಬ್ಯಾನ್ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ

By Suvarna NewsFirst Published Dec 16, 2021, 9:08 PM IST
Highlights

ಭಾರತದಲ್ಲಿ ತಬ್ಲಿಘಿ ಜಮಾತ್ ಅನ್ನು ನಿಷೇಧಿಸುವಂತೆ ಆಗ್ರಹ
ನಿಜಾಮುದ್ದೀನ್ ಮರ್ಕಜ್ ಕಟ್ಟಡ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆ ಸೀಲ್ ಮಾಡಿ
ಸೌದಿ ಅರೇಬಿಯಾ ಕೂಡ ತಬ್ಲಿಘಿ ಹಾಗೂ ದಾವಾ ಗುಂಪನ್ನು ನಿಷೇಧ ಮಾಡಿದೆ

ಲಕ್ನೋ (ಡಿ.16): ದಾರುಲ್ ಉಲೂಮ್ ದಿಯೋಬಂದ್ (Darul Uloom Deoband) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India)(ಪಿಎಫ್ಐ), ತಬ್ಲಿಘಿಗಳು (Tablighi), ತಬ್ಲಿಘಿ ಜಮಾತ್ (Tablighi Jamaat) ಮತ್ತು ಇಜ್ತೆಮಾಗಳಿಗೆ (Ijtema)ನೇರ ಅಥವಾ ಪರೋಕ್ಷ ಪೋಷಣೆಯನ್ನು ನೀಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್  (Vishva Hindu Parishad)ಆರೋಪಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ದಾರುಲ್ ಉಲೂಮ್ ದಿಯೋಬಂದ್ ಮತ್ತು ಪಿಎಫ್ಐ (PFI)ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಎಚ್ ಪಿ ಆಗ್ರಹಿಸಿದೆ.

ಇದರೊಂದಿಗೆ ಕೇಂದ್ರ ಸರ್ಕಾರವು ದೆಹಲಿಯಲ್ಲಿರುವ ನಿಜಾಮುದ್ದೀನ್ ಮರ್ಕಜ್ (Nizamuddin Markaz)ಕಟ್ಟಡವನ್ನು ಸೀಲ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಅದಕ್ಕೆ ಸಂಬಂಧಿದ ಬ್ಯಾಂಕ್ ಖಾತೆಗಳ ಮೇಲೆ ನಿಗಾ ವಹಿಸಿ ಸ್ಥಗಿತಗೊಳಿಸಬೇಕು. ತಬ್ಲಿಘಿ ಜಮಾತ್ ನ ಆರ್ಥಿಕ ಮೂಲಗಳು ಮತ್ತು ಸಂಪನ್ಮೂಲಗಳ ಬಗ್ಗೆ  ನಿಗಾವಣೆ ಮಾಡಬೇಕು ಎಂದು ಒತ್ತಾಯಿಸಿದೆ.

"ತಬ್ಲಿಘಿ ಜಮಾತ್ ಮತ್ತು ನಿಜಾಮುದ್ದೀನ್ ಮರ್ಕಜ್ ನ ಉಲ್ಲಂಘನೆಗಳಿದಾಗಿ ಇಂದು ಭಾರತ ಮಾತ್ರವಲ್ಲದೆ ಇಡೀ ವಿಶ್ವವು ಗಂಭೀರ ತೊಂದರೆಯಲ್ಲಿದೆ. ಭಾರತದಲ್ಲಿ ತಬ್ಲಿಘಿಗಳು, ತಬ್ಲಿಘಿ ಜಮಾತ್ ಮತ್ತು ಇಜ್ತೆಮಾ (ಧಾರ್ಮಿಕ ಸಭೆ) ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸುತ್ತದೆ ಎಂದು ವಿಎಚ್ ಪಿ (VHP) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 

प्रेस विज्ञप्ति :

तबलीगी ज़मात पर भारत में भी लगे पूर्ण प्रतिबन्ध : pic.twitter.com/ukEL9zhGG6

— Vishva Hindu Parishad -VHP (@VHPDigital)


ತಬ್ಲಿಘಿ ಜಮಾತ್ ಮೂಲಭೂತವಾದಿ ಇಸ್ಲಾಮಿಕ್ ಜಿಹಾದ್ ನ ಮೂಲ ತಾಣವಾಗಿದ್ದು, ಜಾಗತಿಕ ಭಯೋತ್ಪಾದನೆಯ ಪೋಷಣೆ ಮಾಡುವುದರಲ್ಲಿ ನಿರತವಾಗಿದೆ ಎಂದು ವಿಎಚ್ ಪಿ ಆರೋಪ ಮಾಡಿದೆ. ನಿಜಾಮುದ್ದೀನ್ ಮರ್ಕಜ್ ಕಟ್ಟಡ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸೀಲ್ ಮಾಡುವ ನಿಟ್ಟಿನಲ್ಲಿ ಕೇಂದ್ರ ಗಮನ ನೀಡಬೇಕು ಹಾಗೂ ಇದರ ಆರ್ಥಿಕ ಮೂಲ ಹಾಗೂ ಸಂಪನ್ಮೂಲಗಳನ್ನು ಪರಿಶೋಧನೆ ಮಾಡಬೇಕು ಎಂದು ಆಗ್ರಹ ಮಾಡಿದೆ.

Tablighi Jamaat ಸಂಘಟನೆಯಿಂದ ದೂರ ಇರಿ: ಸೌದಿ ಅರೇಬಿಯಾ ಪ್ರಜೆಗಳಿಗೆ ಎಚ್ಚರಿಕೆ!
ಇಸ್ಲಾಮಿಕ್ ದೇಶವಾದ ಸೌದಿ ಅರೇಬಿಯಾ ಇತ್ತೀಚೆಗಷ್ಟೇ ತಬ್ಲಿಘಿ ಜಮಾತ್ ಹಾಗೂ ಅಲ್ ಅಹ್ ಬಾಬ್ ಎಂದು ಕರೆಯಲ್ಪಡುವ ದಾವಾ ಗುಂಪುಗಳಿಗೆ ನಿಷೇಧ ಹೇರಿದೆ. ಈ ಸಂಘಟನೆಗಳು ಸಮಾಜಕ್ಕೆ ಅಪಾಯಕಾರಿ ಹಾಗೂ ಭಯೋತ್ಪಾದನೆಯ ಪ್ರಮುಖ ದ್ವಾರಗಳು ಎಂದು ಹೇಳಿತ್ತು. ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ವೇಳೆ ಸಂಘಟನೆ, ತಬ್ಲೀಘಿ ಸಂಘಟನೆಯ ತಪ್ಪು ಮಾರ್ಗದರ್ಶನ, ಅದರ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವಂತೆ ಎಲ್ಲಾ ಮಸೀದಿಗಳ ಮುಖ್ಯಸ್ಥರಿಗೆ ಸೂಚಿನೆ ನೀಡುವಂತೆ ಸರ್ಕಾರ ಹೇಳಿತ್ತು.

Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!
ವಿಎಚ್ ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ (VHP working president Alok Kumar), ಸೌದಿ ಅರೇಬಿಯಾದ ಈ ಕ್ರಮವನ್ನು ಸ್ವಾಗತಿಸಿದ್ದು, ಈ ದೇಶವು ಎಲ್ಲಾ ಜಮಾತ್ ಗಳನ್ನು ನಿಷೇಧಿಸಿದ್ದು ಈ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದರು. "ಈ ತೀವ್ರಗಾಮಿ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯನ್ನು ರಷ್ಯಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದೆ" ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಭಾರತದ ಕೆಲವು ಮುಸ್ಲಿ ಸಂಘಟನೆಗಳು ಸೌದಿ ಅರೇಬಿಯಾ ಸರ್ಕಾರದ ಕ್ರಮವನ್ನು ಸ್ವಾಗತಿಸುವ ಬದಲು, ಇದರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬ್ರಿಟೀಷರ ಆಡಳಿತದ (British Rule) ಕಾಲದಲ್ಲಿ 1926ರಲ್ಲಿ ಭಾರತದಲ್ಲಿ ತಬ್ಲಿಘಿ ಜಮಾತ್ ಸಂಘಟನೆ ಆರಂಭವಾಯಿತು. ಸಂಪ್ರದಾಯ, ವಸ್ತ್ರ ಮತ್ತು ವೈಯಕ್ತಿಕ ನಡತೆಗಳಲ್ಲಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈ ಸಂಘಟನೆ ತನ್ನ ಆನುಯಾಯಿಗಳಿಗೆ ಬೋಧಿಸುತ್ತದೆ. ವಿಶ್ವದಾದ್ಯಂತ ಇದಕ್ಕೆ ಅಂದಾಜು 40 ಕೋಟಿ ಅನುಯಾಯಿಗಳು ಇದ್ದಾರೆ. ರಾಜಕೀಯ ಚಟುವಟಿಕೆಗಳಿಂದ ತಾನು ಪೂರ್ಣ ದೂರವಿದ್ದು, ಕೇವಲ ಧರ್ಮ ಪ್ರಚಾರವಷ್ಟೇ ತನ್ನ ಉದ್ದೇಶ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.

 

click me!